ಮೇಲೆ ಥಳುಕು ಒಳಗೆ ಹುಳುಕು... ಫಳ ಫಳ ಹೊಳೆಯುತ್ತಿದ್ದ ರಸ್ತೆ ಬಣ್ಣ ಬಯಲು ಮಾಡಿದ ವ್ಯಕ್ತಿ

By Anusha KbFirst Published Nov 14, 2022, 4:56 PM IST
Highlights

ಮೇಲೆ ಥಳುಕು ಒಳಗೆ ಹುಳುಕು ಎಂಬಂತಿದ್ದ ರಸ್ತೆಯೊಂದರ ಬಣ್ಣವನ್ನು ವ್ಯಕ್ತಿಯೊಬ್ಬರು ಬಯಲು ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಪಿಲಿಬಿತ್‌ನಲ್ಲಿ ಈ ಘಟನೆ ನಡೆದಿದೆ. 

ಲಕ್ನೋ: ಸಾಮಾನ್ಯವಾಗಿ ರಸ್ತೆಗಳ ದುರಸ್ಥಿಗೆ ಕೋಟ್ಯಾಂತರ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡುತ್ತದೆ. ಆದರೆ ಅಧಿಕಾರಿಗಳು ಟೆಂಡರ್‌ದಾರರು ಜನನಾಯಕರು ಹೀಗೆ ಎಲ್ಲರ ಪಾಲಾಗಿ ಅದು ರಸ್ತೆಗೆ ಬರುವ ವೇಳೆಗೆ ಕೋಟಿ ಸಾವಿರಕ್ಕಿಳಿದಿರುತ್ತದೆ. ಪರಿಣಾಮ ನಿರ್ಮಾಣವಾದ ಮೂರೇ ದಿನಕ್ಕೆ ರಸ್ತೆಗಳು ಗುಂಡಿಬಿದ್ದು ಸಾರ್ವಜನಿಕರ, ವಾಹನ ಸವಾರರ ಪ್ರಾಣ ಬಲಿಪಡೆಯುತ್ತವೆ. ಹೀಗೆ ಮೇಲೆ ಥಳುಕು ಒಳಗೆ ಹುಳುಕು ಎಂಬಂತಿದ್ದ ರಸ್ತೆಯೊಂದರ ಬಣ್ಣವನ್ನು ವ್ಯಕ್ತಿಯೊಬ್ಬರು ಬಯಲು ಮಾಡಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಪಿಲಿಬಿತ್‌ನಲ್ಲಿ ಈ ಘಟನೆ ನಡೆದಿದೆ. 

ಉತ್ತರಪ್ರದೇಶದ (Uttar Pradesh) ಫಿಲಿಬಿತ್‌ನಲ್ಲಿ ವ್ಯಕ್ತಿಯೊಬ್ಬರು 3.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ರಸ್ತೆಯೊಂದರ ಬಣ್ಣವನ್ನು ಬಯಲು ಮಾಡಿದ್ದಾರೆ. ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ (PMGSY) ಅಡಿಯಲ್ಲಿ 7 ಕಿಲೋಮೀಟರ್ ಉದ್ದದ ರಸ್ತೆಯೊಂದನ್ನು ಮರು ನಿರ್ಮಾಣ ಮಾಡಲಾಗುತ್ತಿದ್ದು, ಈ ರಸ್ತೆ ಭಗವಂತಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿತ್ತು. ಆದರೆ ಈ ಯೋಜನೆಯ ಕಳಪೆ ಗುಣಮಟ್ಟವನ್ನು ಗಮನಿಸಿದ ಸ್ಥಳೀಯ ನಿವಾಸಿಯೊಬ್ಬರು ಇದನ್ನು ಕ್ಯಾಮರಾ ಹಾಗೂ ಸಾರ್ವಜನಿಕರ ಮುಂದೆ ಬಯಲು ಮಾಡಿದ್ದಾರೆ. ಯಾವುದೇ ಯಂತ್ರೋಪಕರಣ ಬಳಸದೇ ಅವರು ರಸ್ತೆಯನ್ನು ಬರಿಗೈಲಿ ಕಿತ್ತು ತೆಗೆದಿದ್ದಾರೆ. 

प्रचार: यूपी विकास में नंबर वन है।

सच्चाई: पीलीभीत में 3.80 करोड़ की सड़क बनी। सड़क क्या बनी, मलबा बिखेरा गया जिसे जनता झाड़ू से बुहार कर कचरे की तरह बटोर ले।

भाजपा भ्रष्टाचार और लूट का पर्याय बन चुकी है। pic.twitter.com/6tkyJneFGM

— Sandeep Singh 🇮🇳 (@KaunSandeep)

Latest Videos

 

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಟರ್ಬನ್ (Turben) ಧರಿಸಿರುವ ವ್ಯಕ್ತಿಯೊಬ್ಬರು ಡಾಂಬರ್ ಪದರವನ್ನು ಕೇವಲ ಬರಿಗೈಯಿಂದ ಸುಲಭವಾಗಿ ಮೇಲೆಬ್ಬಿಸುತ್ತಿದ್ದಾರೆ. 3 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿ ನಿರ್ಮಾಣವಾದ ಈ ರಸ್ತೆ ಕೇವಲ ಕೈಹಾಕಿ ಎಬ್ಬಿಸಿದಾಗ ಕಿತ್ತು ಬರುತ್ತಿದೆ ಎಂದಾದರೆ ಇದೂ ಎಷ್ಟು ದಿನ ಬಾಳಿಕೆ ಬರಬಹುದು ಎಂಬ ಪ್ರಶ್ನೆ ಜನರಲ್ಲಿ ಮೂಡಿದ್ದು, ಈ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಅವರು ರಸ್ತೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

ಶತ್ರುವಿನ ಗುಂಡಿಗೆ ಅಲ್ಲ, ರಸ್ತೆ ಗುಂಡಿಗೆ ಬಲಿಯಾದ ಯೋಧ!

ಈ ಬಗ್ಗೆ ಗ್ರಾಮಾಂತರ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ (assistant engineer) ಶೈಲೇಂದ್ರ ಚೌಧರಿ (Shailendra Choudhary) ಮಾತನಾಡಿ, ಈ ವಿಚಾರವನ್ನು ಆಡಳಿತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಂತರ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಗುಣಮಟ್ಟದ ರಸ್ತೆಯನ್ನು ಸರಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಹೊಸದಾಗಿ ನಿರ್ಮಿಸಲಾದ ರಸ್ತೆಯೂ ಕಳೆದ ವಾರ ವಾಹನವೊಂದು ಬ್ರೇಕ್ ಹಾಕಿದ ಪರಿಣಾಮ ಕಿತ್ತು ಬಂದಿತ್ತು ಎಂದು ರಾಷ್ಟ್ರೀಯ ಸುದ್ದಿವಾಹಿನಿ ಆಜ್‌ತಕ್ ವರದಿ ಪ್ರಸಾರ ಮಾಡಿತ್ತು. ಹೀಗೆ ರಸ್ತೆಗಳ ಗುಣಮಟ್ಟ (Road Quality) ಕಳಪೆಯಾಗಿದ್ದು ಗಮನಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಲ್ಲದೇ ಫಿಲಿಬಿತ್‌ನಲ್ಲಿ ಈ ಹಿಂದೆಯೂ ಲೋಕೋಪಯೋಗಿ ಇಲಾಖೆಯಿಂದ (PWD) ನಿರ್ಮಾಣವಾಗಿದ್ದ ಬೇರೆ ಬೇರೆ ಎರಡು ರಸ್ತೆಗಳ ನಿರ್ಮಾಣ ಕಾರ್ಯದಲ್ಲೂ ಕಳಪೆ ಕಾಮಗಾರಿ ಕಂಡು ಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು. 

ಶಿರಾಡಿ ಘಾಟ್‌ ರಸ್ತೆ ಗುಂಡಿಮಯ: ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ನಾಯಕರು ಸರ್ಕಾರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ, ರಸ್ತೆಗಳ ಗುಣಮಟ್ಟಕ್ಕೆ ಒತ್ತು ನೀಡುವ ಬದಲು ಗುತ್ತಿಗೆದಾರರ ಜೇಬಿನ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ರಸ್ತೆ ನಿರ್ಮಾಣ ಮಾಡುತ್ತಿದೆ. ಫಿಲಿಬಿತ್‌ನಲ್ಲಿ (Pilibhit) ನಿರ್ಮಾಣವಾದ ಈ ರಸ್ತೆಗಳು ಆದಿತ್ಯನಾಥ್ ಸರ್ಕಾರ (Adityanath government) ಕೆಳಗೆ ಭ್ರಷ್ಟಾಚಾರ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. 
 

click me!