ಯೋಗಿ ಮತ್ತೊಮ್ಮೆ ಎಂದ ಯುಪಿ ಜನ, ವೀಕೆಂಡ್ ಮದ್ಯಮಾರಾಟಕ್ಕೆ ಸಿಗುತ್ತಾ ಅವಕಾಶ, ಜ.17ರ Top 10 News!

By Suvarna NewsFirst Published Jan 17, 2022, 4:32 PM IST
Highlights

ಉತ್ತರ ಪ್ರದೇಶ ಚುನಾವಣಾ ಸಮೀಕ್ಷೆ ಹೊರಬಿದ್ದಿದೆ. ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗಲಿ ಎಂದು ಜನ ಬಯಸಿದ್ದಾರೆ. ಕೊಹ್ಲಿ ದಿಢೀರ್ ಟೆಸ್ಟ್ ನಾಯಕತ್ವ ತ್ಯಜಿಸಿರುವು ಟೀಂ ಇಂಡಿಯಾದ ಸಮಸ್ಯೆ ಮತ್ತಷ್ಟು ಹೆಚ್ಚಿಸಿದೆ. ಟೀಕಿಸಿದವರಿಗೆ ತಿರುಗೇಟು ನೀಡಿದ ಕೃತಿ ಸನನ್, ಮದ್ಯ ಮಾರಾಟಗಾರರಿಂದ ವೀಕೆಂಡ್‌ನಲ್ಲಿ ಮಾರಾಟಕ್ಕೆ ಅವಕಾಶಕ್ಕೆ ಮನವಿ ಸೇರಿದಂತೆ ಜನವರಿ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

UP Elections: ಮತದಾರರ ಒಲವು ಯಾರ ಕಡೆ? ಹೀಗಿದೆ ಸಮೀಕ್ಷೆಯಲ್ಲಿ ಸಿಕ್ಕ ಉತ್ತರ

ಉತ್ತರಪ್ರದೇಶದ ಬೈಸ್‌ನಲ್ಲಿ ಬೈಸಿಕಲ್ ಎಂಬ ಹೇಳಿಕೆಗಳ ನಡುವೆ ಮತದಾರರಲ್ಲಿ ಬಿಜೆಪಿ ಮೇಲಿನ ವಿಶ್ವಾಸ ಹೆಚ್ಚಿದೆ. ರಾಜ್ಯದಲ್ಲಿ 403 ಸ್ಥಾನಗಳ ಮೇಲೆ 21 ಡಿಸೆಂಬರ್ 2021 ರಿಂದ 9 ಜನವರಿ 2022 ರವರೆಗೆ ನಡೆಸಿದ ಅಭಿಪ್ರಾಯ ಸಂಗ್ರಹವು ಇಲ್ಲಿ ಬಿಜೆಪಿ 226 ರಿಂದ 246 ಸ್ಥಾನಗಳನ್ನು ತರಲಿದೆ ಎಂದು ತೋರಿಸಿದೆ. ಸಮಾಜವಾದಿ ಪಕ್ಷದ ಅಂಕಿ  160 ಸ್ಥಾನಗಳನ್ನು ತಲುಪಿದರೆ, ಬಿಎಸ್ಪಿ 12 ಮತ್ತು ಪ್ರಿಯಾಂಕಾ ನಾಯಕತ್ವದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆಯಲಿದೆ ಎಂದು ತಿಳಿಸಿದೆ.

National Start-up Day ಐಟಿ-ಬಿಟಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನ

ಪ್ರಧಾನಮಂತ್ರಿಯವರ ಅಭಿಲಾಷೆಯಂತೆ ಸ್ಟಾರ್ಟ್ ಅಪ್ ದಿನಾಚರಣೆಯನ್ನು  ರಾಜ್ಯದಲ್ಲಿ ಇಂದು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಬರುವ ವರ್ಷದಲ್ಲಿ ಸರ್ಕಾರ ನವೋದ್ಯಮಗಳಿಗೆ, ಉದ್ಯಮಶೀಲತೆಗೆ, ವೈಜ್ಞಾನಿಕ ಚಿಂತನೆಗೆ ಸಂಪೂರ್ಣ ಬೆಂಬಲ ನೀಡುವುದು ಈ ವೇಳೆ ಎಂದು ಹೇಳಿದರು.

Virat Kohli Quits Test captaincy ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದೀರಿ ಎಂದ ಅಶ್ವಿನ್..!

ವಿರಾಟ್‌ ಕೊಹ್ಲಿ (Virat Kohli) ಟೆಸ್ಟ್‌ ನಾಯಕತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಹೊಸ ನಾಯಕನಿಗೆ ದೊಡ್ಡ ತಲೆನೋವು ತಂದಿಟ್ಟಿದ್ದಾರೆ ಎಂದು ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್‌ (Ravichandran Ashwin) ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಕೇಪ್‌ಟೌನ್ ಟೆಸ್ಟ್ (Cape Town Test) ಪಂದ್ಯವನ್ನು ಟೀಂ ಇಂಡಿಯಾ ಸೋಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. 

Kriti Sanon About Body Shaming: 'ಗಮ್ಮಿ ಸ್ಮೈಲ್, ಮೂಗು ಸರಿ ಇಲ್ಲ', ನಾನು ಪ್ಲಾಸ್ಟಿಕ್ ಬೊಂಬೆಯಲ್ಲ ಎಂದ ನಟಿ

ಬಾಲಿವುಡ್ ನಟಿ ಕೃತಿ ಸನೋನ್ ತನ್ನ ಲುಕ್‌ಗಾಗಿ ಟೀಕೆಗೆ ಒಳಗಾಗಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜನರು ತನ್ನ ಮೂಗಿನ ಹೊಳ್ಳೆಗಳ ಬಗ್ಗೆ ಹಾಗೂ ಗಮ್ಮಿ ಸ್ಮೈಲ್ ಕಮೆಂಟಿಸಿದ್ದನ್ನು ನಟಿ ಹೇಳಿದ್ದಾರೆ.

Google Doodle ಮೂಲಕ ಕೋವಿಡ್-19 ಲಸಿಕೆ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಟೆಕ್ ದೈತ್ಯ!

ಪ್ರಪಂಚಾದಾದ್ಯಂತ ಕೊರೋನಾ  ಪ್ರಕರಣಗಳ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿದೆ. ಈ ಮಧ್ಯೆ ಲಸಿಕೆಯನ್ನು ಪಡೆಯಲು‌ (Vaccine) ಮತ್ತು ಮಾಸ್ಕ್‌ಗಳನ್ನು ಧರಿಸಲು (Face Mask) ಜನರನ್ನು ಮತ್ತೊಮ್ಮೆ ಪ್ರೋತ್ಸಾಹಿಸಲು ಟೆಕ್‌ ದೈತ್ಯ ಗೂಗಲ್ (google) ಸೋಮವಾರ ತನ್ನ ವೆಬ್‌ಸೈಟ್‌ನಲ್ಲಿ ಅನಿಮೇಟೆಡ್ ಡೂಡಲ್ (Animated Doodle) ರಚಿಸಿದೆ.

Gold Investment: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

ಬಗೆ ಬಗೆಯ ಹಾರ,ಬಳೆ,ಕಿವಿಯೋಲೆ ಹೀಗೆ ಬಂಗಾರದ ಆಭರಣಗಳನ್ನು ಖರೀದಿ ಮಾಡುವ ಜನರು ಇದು ಒಂದು ರೀತಿಯ ಉಳಿತಾಯ ಎನ್ನುತ್ತಾರೆ. ಯಸ್ ಇದು ಒಂದು ರೀತಿಯ ಸೇವಿಂಗ್ ನಿಜ. ಆದ್ರೆ ಇದಕ್ಕಿಂತ ಬಂಗಾರದ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಲಾಭ ದುಪ್ಪಟ್ಟು ಎಂಬುದು ನಿಮಗೆ ಗೊತ್ತಾ? 
 
EV Charging at Home: ಇನ್ನುಮುಂದೆ ನಿಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಮನೆಯಲ್ಲಿಯೇ ಚಾರ್ಜ್ ಮಾಡಿ!

ಕಳೆದೆರಡು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (Electrci vehicles) ಬೇಡಿಕೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ವಾಹನ ತಯಾರಕರು ಇವಿ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಆದರೆ, ಅವುಗಳ ಚಾರ್ಜಿಂಗ್ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ಈಗ ಈ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ಗೆ (Charging) ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು  ಬಿಡುಗಡೆಗೊಳಿಸಿದೆ.

Weekend Curfew : ವೀಕೆಂಡ್ ಕರ್ಫ್ಯೂ ಯಾಕೆ? ಸುಸೈಡ್ ಮಾಡಿಕೊಳ್ಳಬೇಕಾಗುತ್ತದೆ! ಮದ್ಯ ಮಾರಾಟಗಾರರ ಅಳಲು

ಕೊರೋನಾ ಕಾರಣಕ್ಕೆ ರಾಜ್ಯದೆಲ್ಲಿ ಎರಡು ವಾರದ ವೀಕೆಂಡ್ ಕರ್ಫ್ಯೂ ಮುಕ್ತಾಯವಾಗಿದೆ.  ಇನ್ನು ಮುಂದೆ ಮತ್ತೆ ವೀಕೆಂಡ್ ಕರ್ಫ್ಯೂ ಎಂದರೆ ಸರ್ಕಾರದ ಆದೇಶ ಧಿಕ್ಕರಿಸಬೇಕಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿತ್ತು.
 

click me!