ರಾಮ ಮಂದಿರ ಉದ್ಘಾಟನೆಗೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಳು ಸಜ್ಜಾಗಿದೆ. ಮೊಘಲರ ದಾಳಿ ಬಳಿಕ ಘಾಜಿಯಾಬಾದ್ ಆಗಿ ಬದಲಾಗಿದ್ದ ಈ ನಗರವನ್ನು ಮರುನಾಮಕರಣ ಮಾಡುತ್ತಿದೆ. ಮೂಲ ಹೆಸರನ್ನೇ ಇಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಲಖನೌ(ಜ.09) ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಇದೀಗ ರಾಮ ಮಂದಿರ ಉದ್ಘಾಟನೆ ತಯಾರಿಯಲ್ಲಿ ಮುಳುಗಿದೆ. ಇದರ ನಡುವೆ ಮತ್ತೊಂದು ಮಹತ್ವದ ಕಾರ್ಯಕ್ಕೆ ಸಜ್ಜಾಗಿದೆ. ಹಲವು ವರ್ಷಗಳ ಬೇಡಿಕೆ ಈಡೇರಿಸಲು ಯೋಗಿ ಸರ್ಕಾರ ತಯಾರಿ ಮಾಡಿಕೊಂಡಿದೆ. ಹೌದು, ಘಾಜಿಯಾಬಾದ್ ನಗರದ ಹೆಸರನ್ನು ಮರುನಾಮಕರಣ ಮಾಡಲು ಮುಂದಾಗಿದೆ. ಘಾಜಿಯಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಈಗಾಗಲೇ ಸಭೆ ನಡೆಸಿ ಎರಡು ಹೆಸರನ್ನು ಅಂತಿಮಗೊಳಿಸಿದೆ. ಈ ಪ್ರಸ್ತಾವನೆಯನ್ನು ಯೋಗಿ ಸರ್ಕಾರಕ್ಕೆ ಕಳುಹಿಸಿದೆ. ಇದೀಗ ಯೋಗಿ ಸರ್ಕಾರ ರಾಮ ಮಂದಿರ ಉದ್ಘಾಟನೆ ಬಳಿಕ ಘಾಜಿಯಾಬಾದ್ ಮರುನಾಮಕರಣ ಮಾಡುವ ಸಾಧ್ಯತೆ ಇದೆ.
ಘಾಜಿಯಾಬಾದ್ ನಗರಕ್ಕೆ ಮೂಲ ಹೆಸರನ್ನು ಇಡಬೇಕು. ಮೊಘಲರ ಆಳ್ವಿಕೆಯಿಂದ ಬದಲಾದ ಹೆಸರು ಬೇಡ ಅನ್ನೋದು ಬಿಜೆಪಿ ಕೂಗು.ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿದೆ. ಘಾಜಿಯಾಬಾದ್ ಮುನ್ಸಿಪಲ್ ಕೌನ್ಸಿಲ್ ಸಭೆಯಲ್ಲಿ ಬಿಜೆಪಿ ಕೌನ್ಸಿಲರ್ ಮರುನಾಮಕರಣ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೇಯರ್ ಸುನೀತಾ ದಯಾಳ್ ಈ ಪ್ರಸ್ತಾವನೆ ಅಂಗೀಕರಿಸಿದ್ದಾರೆ. ಹಿಂದೂಪರ ಸಂಘಟನೆಗಳು ಹಲವು ವರ್ಷಗಳಿಂದ ಮರುನಾಮಕರಣ ಹೋರಾಟ ಮಾಡುತ್ತಾ ಬಂದಿದೆ. ದಾಳಿಕೋರರ ಹೆಸರಿನ ಬದಲು ಮೂಲ ಹೆಸರು ಅತೀ ಅವಶ್ಯಕ ಎಂದು ಸುನೀತಾ ದಯಾಳ್ ಹೇಳಿದ್ದಾರೆ. ಘಾಜಿಯಾಬಾದ್ ಬದಲು ಗಜನಗರ ಅಥಾ ಹರಿಂದಿ ನಗರ ಸೇರಿದಂತೆ ಕೆಲ ಹೆಸರನ್ನು ಚರ್ಚಿಸಲಾಗಿದೆ. ಇದೀಗ ಕೆಲ ಹೆಸರಿನ ಜೊತೆಗೆ ಮರುನಾಮಕರಣ ಪ್ರಸ್ತಾವನೆಯನ್ನು ಯುಪಿ ಸರ್ಕಾರಕ್ಕೆ ಕಳುಹಿಸಲಾಗಿದೆ.
ಸಿಎಂ ಯೋಗಿ ನಾಡಲ್ಲಿ ಮತ್ತೊಂದು ನಗರಕ್ಕೆ ಮರುನಾಮಕರಣ, ಅಲಿಘಡ ಇನ್ನು ಹರಿಘಡವಾಗಿ ಬದಲು!
ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದ ಬೆನ್ನಲ್ಲೇ ಘಾಜಿಯಾಬಾದ್ ಹೋರಾಟವೂ ತೀವ್ರಗೊಂಡಿತ್ತು. ಶಾಸಕ ಸುನಿಲ್ ಶರ್ಮಾ ಕೂಡ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1740ರಲ್ಲಿ ಘಾಜಿಯಾಬಾದ್ ನಗರದ ಮೇಲೆ ಮೊಘಲರು ದಾಳಿ ಮಾಡಿದ್ದರು. ಇಲ್ಲಿನ ರಾಜರ ಸೋಲಿಸಿ ಇಡೀ ನಗರವನ್ನೇ ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಹಲವು ಮಂದಿರಗಳನ್ನು ಒಡದು ಮಸೀದಿಗಳನ್ನು ನಿರ್ಮಾಣ ಮಾಡಲಾಗಿತ್ತು. ಮೊಘಲ ರಾಜ ಮೊಹಮ್ಮದ್ ಶಾ ಆಡಳಿತದಲ್ಲಿ ಹಿಂದೂ ಸಂಘರ್ಷ, ಆಕ್ರೋಶವನ್ನು ತಣ್ಣಗಾಗಿಸಿ ಇಸ್ಲಾಂ ಆಡಳಿತ ಜಾರಿ ಮಾಡಲು ನೆರವಾದ ಘಾಜಿಉದ್ದೀನ್ II ತನ್ನ ಹೆಸರನ್ನೇ ನಗರಕ್ಕಿಟ್ಟಿದ್ದ. ಘಾಜಿಉದ್ದೀನ್ ನಗರ ಎಂದು ನಾಮಕರಣ ಮಾಡಲಾಗಿತ್ತು.
ಆದರೆ ಉದ್ದ ಹೆಸರಿನ ಕಾರಣ ಬಳಿಕ ಘಾಜಿಯಾಬಾದ್ ಎಂದೇ ಗುರಿತಸಲ್ಪಟ್ಟಿತು. ಹಿಂದೊನ್ ನದಿ ದಂಡೆಯಲ್ಲಿದ್ದ ಈ ನಗರ ಹಿಂದೋನ್ ನಗರ ಎಂದೇ ಜನಪ್ರಿಯವಾಗಿತ್ತು.
ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!