ಪಾಕ್‌ ಹೊಂಚು ಹಾಕಿದ್ದ ಲಕ್ಷದ್ವೀಪ ಭಾರತದಲ್ಲೇ ಉಳಿದುಕೊಂಡಿದ್ದೇಗೆ? ಗುಟ್ಟು ರಟ್ಟು ಮಾಡಿದ ಮೋದಿ!

Published : Jan 09, 2024, 05:40 PM ISTUpdated : Jan 09, 2024, 05:42 PM IST
ಪಾಕ್‌ ಹೊಂಚು ಹಾಕಿದ್ದ ಲಕ್ಷದ್ವೀಪ ಭಾರತದಲ್ಲೇ ಉಳಿದುಕೊಂಡಿದ್ದೇಗೆ? ಗುಟ್ಟು ರಟ್ಟು ಮಾಡಿದ ಮೋದಿ!

ಸಾರಾಂಶ

ಲಕ್ಷದ್ವೀಪವನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಆದರೆ, ಇದು ಭಾರತದ ಭಾಗವಾಗೇ ಉಳಿದಿದ್ದೇಗೆ ಅನ್ನೋದನ್ನ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ವಿವರಿಸಿದ್ದರು. ವಿವರ ಹೀಗಿದೆ..

ನವದೆಹಲಿ (ಜನವರಿ 9, 2024): ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಇತ್ತೀಚಿನ ಪ್ರಧಾನಿ ಮೋದಿ ಭೇಟಿಯು ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಕ್ರೇಜ್‌ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. 

ಮೂವರು ಮಾಲ್ಡೀವ್ಸ್‌ ಮಂತ್ರಿಗಳು ಅಮಾನತಾಗುವ ಮೂಲಕ ಮಾಲ್ಡೀವ್ಸ್‌ನೊಂದಿಗೆ ರಾಜತಾಂತ್ರಿಕ ಜಗಳವನ್ನು ಹುಟ್ಟುಹಾಕಿದೆ. ಅವರು ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು. 

ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!

ಈ ಮಧ್ಯೆ, ಪ್ರಧಾನಿ ಪ್ರವಾಸದ ನಂತರ ದ್ವೀಪದ ಭವಿಷ್ಯ ಬದಲಾಯಿತು. ಲಕ್ಷದ್ವೀಪ ಆಡಳಿತವು ಮುಂದಿನ ದಿನಗಳಲ್ಲಿ ಸುಮಾರು 20,000 ಕೋಟಿ ಹೂಡಿಕೆಯನ್ನು ನಿರೀಕ್ಷಿಸುತ್ತದೆ, ಇದನ್ನು ಮಾಲ್ಡೀವ್ಸ್‌ಗೆ ಸರಿಸಮಾನವಾಗಿ ಇರಿಸುತ್ತದೆ ಎಂದು ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಹೇಳಿದ್ದಾರೆ. ಅಂದಿನಿಂದ, ಲಕ್ಷ ದ್ವೀಪವು ನಿರಂತರವಾಗಿ ಭಾರತದಿಂದ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸ್ಥಳವಾಗಿದೆ.

ಇನ್ನು, ಲಕ್ಷದ್ವೀಪವನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಆದರೆ, ಇದು ಭಾರತದ ಭಾಗವಾಗೇ ಉಳಿದಿದ್ದೇಗೆ ಅನ್ನೋದನ್ನ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ವಿವರಿಸಿದ್ದರು. ಭಾರತದ ಉಕ್ಕಿನ ಮನುಷ್ಯ ಎಂದೇ ಹೆಸರುವಾಸಿಯಾಗಿರೋ ಸರ್ದಾರ್ ವಲ್ಲಭಭಾಯಿ ಪಟೇಲ್, ಹೈದರಾಬಾದ್ ಮತ್ತು ಜುನಾಗರ್‌ನಂತಹ ಪ್ರಮುಖ ರಾಜಪ್ರಭುತ್ವಗಳನ್ನು ಚದುರಿಸಿದ್ದು, ಮಾತ್ರವಲ್ಲದೆ ಲಕ್ಷದ್ವೀಪವನ್ನು ಪಾಕಿಸ್ತಾನದಿಂದ ಹೇಗೆ ಉಳಿಸಿದರು ಎಂಬುದನ್ನು ಅಕ್ಟೋಬರ್ 2019ರಲ್ಲಿ ವಿವರಿಸಿದ್ದರು. 

ಮಾಲ್ಡೀವ್ಸ್‌ ಟ್ರಿಪ್‌ ಕ್ಯಾನ್ಸಲ್‌ ಮಾಡಿದ ಭಾರತೀಯರು: ಬೆದರಿದ ಮುಯಿಝು ಸರ್ಕಾರದಿಂದ ಟೀಕೆಗೆ ಸ್ಪಷ್ಟನೆ

ಅರೇಬಿಯನ್ ಸಮುದ್ರದ ಪ್ರಮುಖ ಸ್ಥಾನವಾದ ಉಷ್ಣವಲಯದ ಸ್ವರ್ಗದಂತಿರೋ ಲಕ್ಷದ್ವೀಪವನ್ನು ಭಾರತದ ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಇಲ್ಲದಿದ್ದರೆ ಪಾಕಿಸ್ತಾನವು ವಶಪಡಿಸಿಕೊಳ್ಳುತ್ತಿತ್ತು. ಸರ್ದಾರ್ ಪಟೇಲ್ ಅವರ ಕೊಡುಗೆಗಳು ಬ್ರಿಟಿಷ್ ನಂತರದ ಭಾರತವನ್ನು ರೂಪಿಸಲು ಸಹಾಯ ಮಾಡಿದೆ ಎಂದೂ ಹೇಳಿದ್ದರು.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಉಪಖಂಡವನ್ನು ಮುಸ್ಲಿಂ ಬಹುಮತ ಪ್ರದೇಶದ ಕಾರಣ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ ಎಂದು ವಿಭಜಿಸಲಾಗಿತ್ತು. ಆದರೆ, ಮತ್ತೊಂದು ಮುಸ್ಲಿಂ-ಬಹುಸಂಖ್ಯಾತ ಪ್ರದೇಶವಾಗಿದ್ದ ಲಕ್ಷದ್ವೀಪ ಇನ್ನೂ ಪಾಕ್‌ ಗಮನಕ್ಕೆ ಬಂದಿರಲಿಲ್ಲ.

 

ಮಾಲ್ಡೀವ್ಸ್‌ ಸಚಿವರ ಜನಾಂಗೀಯ ಟ್ವೀಟ್‌: ಸಾಮಾಜಿಕ ಜಾಲತಾಣದಲ್ಲಿ #BoycottMaldives ಟ್ರೆಂಡ್‌

ಆದರೆ, ನಂತರ ಕೊಚ್ಚಿಯ ಕರಾವಳಿಯಿಂದ 496 ಕಿಲೋಮೀಟರ್ ದೂರದಲ್ಲಿರುವ ಹಾಗೂ 93 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಲಕ್ಷದ್ವೀಪದ ಮೇಲೆ ಪಾಕಿಸ್ತಾನ ಗಮನ ಕೇಂದ್ರೀಕರಿಸಿದೆ. ಪಾಕಿಸ್ತಾನವನ್ನು ಸ್ಥಾಪಿಸಿದ ಮುಸ್ಲಿಂ ಲೀಗ್‌ನ ಮುಖ್ಯಸ್ಥ ಮೊಹಮ್ಮದ್ ಅಲಿ ಜಿನ್ನಾ ಲಕ್ಷದ್ವೀಪದ ವಶಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಲಕ್ಷದ್ವೀಪ ದ್ವೀಪಗಳು ದಕ್ಷಿಣ ಭಾರತದ ಮಲಬಾರ್ ಕರಾವಳಿಗೆ ಹತ್ತಿರದಲ್ಲಿದೆ. ಈ ಹಿನ್ನೆಲೆ, ಸರ್ದಾರ್ ಪಟೇಲ್ ಲಕ್ಷದ್ವೀಪದ ದ್ವೀಪಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡರು ಮತ್ತು ದ್ವೀಪಗಳಿಗೆ ಭದ್ರತಾ ಪಡೆಗಳೊಂದಿಗೆ ಹಡಗನ್ನು ತ್ವರಿತವಾಗಿ ರವಾನಿಸಲು ದಕ್ಷಿಣ ಭಾರತದ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಅದರ ಬಳಿಕ, ಪಾಕಿಸ್ತಾನವು ಈ ದ್ವೀಪಗಳನ್ನು ವಶಪಡಿಸಿಕೊಳ್ಳಲು ಹಡಗನ್ನು ನಿಯೋಜಿಸಿದೆ. ಆದರೂ, ಭಾರತೀಯರು ಮೊದಲು ಈ ದ್ವೀಪಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ತನ್ನ ವಶಕ್ಕೆ ಪಡೆದರು. ಈ ಘಟನೆಯ ಪರಿಣಾಮವಾಗಿ, ಪಾಕಿಸ್ತಾನಿ ಹಡಗು ಬಂದರಿಗೆ ವಾಪಸಾಯ್ತು ಎಂದು ವರಿಗಳು ಹೇಳಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ