ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆ ಸಿಎಂ ಯೋಗಿ ಮೇಲೆ ಬಾಂಬ್ ದಾಳಿ ಬೆದರಿಕೆ!

By Suvarna News  |  First Published Aug 13, 2022, 8:38 PM IST

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಬಾಂಬ್ ದಾಳಿ ಬೆದರಿಕೆ ಬಂದಿದೆ. 10 ದಿನದಲ್ಲಿ ಬಂದಿರುವ 2ನೇ ಬೆದರಿಕೆ ಇದಾಗಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಕೆಲ ದಿನ ಮೊದಲೇ ಬಾಂಬ್ ದಾಳಿ ಬೆದರಿಕೆ ಪತ್ರ ಬಂದಿರುವುದು ಆತಂಕ ಹೆಚ್ಚಿಸಿದೆ.


ಲಖನೌ(ಆ.13) ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಅಜಾದಿಕಾ ಅಮೃತಮಹೋತ್ಸವ ಸಂಭ್ರಮದಲ್ಲಿರುವ ಕಾರಣ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಇದರ ನಡುವೆ ಆತಂಕದ ವಾತವಾರಣ ನಿರ್ಮಿಸಲು ಕೆಲ ಉಗ್ರ ಸಂಘಟನೆಗಳು ಯತ್ನಿಸುತ್ತಿದೆ. ಇದೀಗ ಸ್ವಾತಂತ್ರ್ಯ ದಿನಾಚರಣೆ ಕೆಲ ದಿನ ಮೊದಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬೆದರಿಕೆ ಪತ್ರವೊಂದು ಬಂದಿದೆ. ಯೋಗಿ ಆದಿತ್ಯನಾಥ್ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಈ ಪತ್ರದಲ್ಲಿ ಎಚ್ಚರಿಸಲಾಗಿದೆ. 10 ದಿನಗಳ ಅಂತರದಲ್ಲಿ ಯೋಗಿ ಆದಿತ್ಯನಾಥ್‌ಗೆ ಬಂದಿರುವ ಎರಡನೇ ಬೆದರಿಕೆ ಪತ್ರ ಇದಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ದೇಶದಲ್ಲಿ ಅಹಿತರ ಘಟನೆಗೆ ಯತ್ನಿಸುತ್ತಿರುವ ಉಗ್ರ ಸಂಘಟನೆಗಳು ಈ ಬೆದರಿಕೆ ಪತ್ರದ ಹಿಂದಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.

ಗೋ ರಕ್ಷಾ, ಗೋಶಾಲೆ ಅಭಿಯಾನಗಳ ಮೂಲಕ ಗುರುತಿಸಿಕೊಂಡಿರುವ ದೇವೇಂದ್ರ ತಿವಾರಿ ಮನೆಯ ಆವರಣದಲ್ಲಿ ಬ್ಯಾಗ್ ಒಂದರಲ್ಲಿ ಈ ಪತ್ರ ಪತ್ತೆಯಾಗಿದೆ. ಈ ಕುರಿತು ದೇವಂದ್ರ ತಿವಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಹಲವು ಸ್ತರದ ಭದ್ರತೆ ಹೊಂದಿದ್ದಾರೆ. ಹೀಗಾಗಿ ಉಳಿದುಕೊಂಡಿದ್ದಾರೆ. ಇಲ್ಲದಿದ್ದರೆ ಈ ಹಿಂದಿಯೇ ಅವರ ಕತೆ ಮುಗಿುತ್ತಿದ್ದೇವು. ನೀವೆಲ್ಲಾ ನಮ್ಮ ದಾರಿಗೆ ಅಡ್ಡ ಬರಬೇಡಿ, ಹಿಂದುತ್ವ, ಗೋ ರಕ್ಷಣೆ ಎಂದು ಕೂಗಬೇಡ. ಸುಮ್ಮನೆ ನಿನ್ನ ದಾರಿಯಲ್ಲಿ ನಡಿ. ಇಲ್ಲದಿದ್ದರೆ ನಾವೇ ಅಂತ್ಯ ಹಾಡುತ್ತೇವೆ. ಯೋಗಿ ಆದಿತ್ಯನಾಥ್ ಅದೆಷ್ಟೇ ಭದ್ರತೆ ಹೊಂದಿದ್ದರೂ, ಬಾಂಬ್ ದಾಳಿಗೆ ಎಲ್ಲವೂ ಭಸ್ಮವಾಗಲಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

Tap to resize

Latest Videos

ಮದರಸಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ, ಶಿಕ್ಷಕರಿಗೆ TET ಪಾಸ್ ಕಡ್ಡಾಯ ಎಂದ ಯೋಗಿ!

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ಮೂಲಕ ಯೋಗಿ ಆದಿತ್ಯನಾಥ್ ಹತ್ಯೆ ಮಾಡುವುದಾಗಿ ಬೆದರಿಕೆ ಬಂದಿತ್ತು. ಇದೀಗ 10 ದಿನಗಳ ಅಂತರದಲ್ಲಿ ಪತ್ರವೊಂದು ಪತ್ತೆಯಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಮುನ್ನ ಆತಂಕ ಸೃಷ್ಟಿಸಿದೆ. ಉತ್ತರ ಪ್ರದೇಶ ಸೇರಿದಂತೆ ಇಡೀ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸಿಸಿಟಿವಿ ಕಣ್ಗಾವಲು, ಡ್ರೋನ್ ನೆರವು, ರೇಡಾರ್ ಭದ್ರತೆಗಳನ್ನು ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ನಿಯೋಜಿಸಲಾಗಿದೆ.

ವಾಟ್ಸಾಪ್‌ ಹೆಲ್ಪ್‌ಲೈನ್‌ ಮೂಲಕ ಯುಪಿ ಸಿಎಂ ಯೋಗಿಗೆ ಜೀವ ಬೆದರಿಕೆ
ರಾಜ್ಯ ಪೊಲೀಸ್‌ ತುರ್ತು ವಾಟ್ಸಾಪ್‌ ಸಹಾಯವಾಣಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜೀವ ಬೆದರಿಕೆ ಸಂದೇಶ ರವಾನೆಯಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಾಹಿದ್‌ ಎಂಬ ವ್ಯಕ್ತಿಯಿಂದ ವಾಟ್ಸಾಪ್‌ ಸಹಾಯವಾಣಿ ಡೈಲ್‌-112ಗೆ ಜೀವ ಬೆದರಿಕೆ ಸಂದೇಶ ರವಾನೆಯಾಗಿದೆ. ಯೋಗಿ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಬೆದರಿಕೆ ನೀಡಿದ್ದಾನೆ. ಆರೋಪಿಯ ಹುಡುಕಾಟಕ್ಕೆ ಹಲವು ತಂಡ ರಚಿಸಿ ಕಾರ್ಯಚರಣೆ ನಡೆಸುತ್ತಿದ್ದೇವೆ. ಅಲ್ಲದೇ ಸೈಬರ್‌ ಸೆಲ್‌ ಮತ್ತು ಸರ್ವೆಲೆನ್ಸ್‌ ತಂಡವು ಆರೋಪಿ ಹುಡುಕಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. 

 

ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಉದ್ಯೋಗ ನೀಡುತ್ತೇವೆ: ಯೋಗಿ ಆದಿತ್ಯನಾಥ್‌
 

click me!