ಕಾರ್‌ಗೆ ತಾಗಿದ ರಿಕ್ಷಾ, ನಡು ರಸ್ತೆಯಲ್ಲೇ 90 ಸೆಕೆಂಡ್‌ನಲ್ಲಿ 17 ಬಾರಿ ಕೆನ್ನೆಗೆ ಬಾರಿಸಿದ ಮಹಿಳೆ!

By Santosh NaikFirst Published Aug 13, 2022, 5:46 PM IST
Highlights

ದೆಹಲಿಯ ನೊಯ್ಡಾದಲ್ಲಿ ಅಮಾನವೀಯ ಘಟನೆ ನಡೆದಿದೆ. ಕಾರಿಗೆ, ಇ-ರಿಕ್ಷಾ ತಾಗಿತು ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬಳು, ರಿಕ್ಷಾ ಚಾಲಕನಿಗೆ ನಡು ರಸ್ತೆಯಲ್ಲಿಯ 17 ಬಾರಿ ಕೆನ್ನೆಗೆ ಹೊಡೆದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
 

ನೋಯ್ಡಾ (ಆ.13): ಉತ್ತರ ಪ್ರದೇಶದ ನೋಯ್ಡಾದಲ್ಲಿ ಮಹಿಳೆಯೊಬ್ಬರು ಇ-ರಿಕ್ಷಾ ಚಾಲಕನ ರಿಕ್ಷಾ ಮಹಿಳೆಯ ಕಾರಿಗೆ ತಾಗುದ ಕಾರಣಕ್ಕೆ ಅಮಾನುಷವಾಗಿ ಥಳಿಸಿದ್ದಾರೆ. ಸಿಟ್ಟಿಗೆದ್ದ ಮಹಿಳೆ ಇ-ರಿಕ್ಷಾ ಚಾಲಕನನ್ನು ತಡೆದು, ಶರ್ಟ್ ಹಿಡಿದು ಕಾರಿನ ಬಳಿ ಕರೆತಂದು ಕಪಾಳಮೋಕ್ಷ ಮಾಡಿದ್ದಾಳೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ತಾಗಿದ ಕಾರಣಕ್ಕೆ ಕಾನೂನನ್ನು ಕೈತೆಗೆದುಕೊಂಡಿದ್ದ ಮಹಿಳೆಯ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇ-ರಿಕ್ಷಾ ಚಾಲಕ ಮಾಡಿದ್ದು ತಪ್ಪಾದರೂ, ಅದನ್ನು ನೋಡಿಕೊಳ್ಳಲು ಪೊಲೀಸ್‌ ವ್ಯವಸ್ಥೆ ಅದರ ಬದಲು ನಡುರಸ್ತೆಯಲ್ಲಿಯೇ ಆತನ ಕೆನ್ನೆಗೆ ಹೊಡೆದಿರುವುದು ಅಮಾನವೀಯ ಎಂದು ಕಾಮೆಂಟ್‌ ಮಾಡಿದ್ದಾರೆ. ಅದಲ್ಲದೆ, ರಿಕ್ಷಾ ಚಾಲಕನ ಮೊಬೈಲ್‌ ಹಾಗೂ ಹಣವನ್ನೂ ಮಹಿಳೆ ಕಿತ್ತುಕೊಂಡಿದ್ದಾಳೆ. ಅದರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಅಂದಾಜು 90 ನಿಮಿಷಗಳ ಅಂತರದಲ್ಲಿ 17 ಬಾರಿ ಚಾಲಕನ ಕೆನ್ನೆಗೆ ಮಗಹಿಳೆ ಬಾರಿಸಿದ್ದಾಳೆ. ಈ ವೇಳೆ ಆತನ ಅಕ್ಕಪಕ್ಕ ಹಲವು ವ್ಯಕ್ತಿಗಳಿದ್ದರೂ, ಯಾರೊಬ್ಬರೂ ಮಹಿಳೆಯನ್ನು ತಡೆದಿರಲಿಲ್ಲ. ಈ ವೇಳೆ ಇ-ರಿಕ್ಷಾ ಚಾಲಕ ಮಹಿಳೆಯೊಂದಿಗೆ ಏನನ್ನೂ ಮಾತನಾಡಿಲ್ಲ. ಆಕೆ ಕೆನೆನಗೆ ಹೊಡದರೂ ಸುಮ್ಮನೆ ಹೊಡೆಸಿಕೊಂಡಿದ್ದಾರೆ.  ಕೊನೆಯಲ್ಲಿ ಮಹಿಳೆ ಹಣ ಹಾಗೂ ಮೊಬೈಲ್ ಕಸಿದುಕೊಂಡಿದ್ದಾಳೆ. ಇ-ರಿಕ್ಷಾ ಚಾಲಕನಿಗೆ ಈ ರೀತಿ ಕಪಾಳಮೋಕ್ಷ ಮಾಡಿದ ಮಹಿಳೆ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಎಂದು ಹೇಳಲಾಗುತ್ತಿದೆ.

एक गरीब को इस तरह पीटना कहा का इंसाफ है एक महिला बीच सड़क पर रिक्शे वाले को पीट रही है भद्दी भद्दी गालिया दे रही है हो सकता है रिक्शे वाले की गलती रही हो लेकिन एक महिला का दिल तो ममता से भरा होता है फिर वो इस कैसे कर सकती है संज्ञान लीजिए ये गरीब भी इंसान है pic.twitter.com/fGP9HPTsFZ

— दानिश अज़ीज़ (@uptvnoida)

ಇದೇ ವೇಳೆ ಕೆಲವರು ವಿಡಿಯೋ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲಿದ್ದವರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅದೇ ಸಮಯದಲ್ಲಿ, ಇ-ರಿಕ್ಷಾ ಚಾಲಕನ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಪರಿಶೀಲನೆ ನಡೆಯುತ್ತಿದೆ.

click me!