ರಾಹುಲ್‌ ಗಾಂಧಿ ಅನರ್ಹ, 'ಕಾನೂನಿಗೆ ಗೌರವಿಸೋದು ಪ್ರಜಾಪ್ರಭುತ್ವದ ಅಗತ್ಯ' ಎಂದ ಅಮೆರಿಕ!

By Santosh NaikFirst Published Mar 28, 2023, 7:02 PM IST
Highlights

ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ವಿಚಾರದಲ್ಲಿ ಅಮೆರಿಕ ಪ್ರತಿಕ್ರಿಯೆ ನೀಡಿದೆ. ಆಯಾ ನೆಲದ ಕಾನೂನಿಗೆ ಗೌರವ ನೀಡೋದು ಪ್ರಜಾಪ್ರಭುತ್ವದ ಮೂಲ ಆಧಾರ ಎಂದು ಹೇಳಿದೆ.

ನವದೆಹಲಿ (ಮಾ.28): ರಾಹುಲ್‌ ಗಾಂಧಿಯ ಸಂಸದ ಸ್ಥಾನವನ್ನು ಅನರ್ಹ ಮಾಡಿದ ಲೋಕಸಭೆಯ ಕಾರ್ಯಾಲಯದ ನಿರ್ಧಾರದ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದೆ. ಕಾನೂನು ಮುತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ಗೌರವಿಸೋದು ಯಾವುದೇ ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ ಎಂದು ಅಮೆರಿಕ ಪ್ರತಿಕ್ರಿಯೆ ನೀಡಿದೆ. ಅದಲ್ಲದೆ, ಭಾರತದ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ಕುರಿತಾದ ಪ್ರಕರಣಗಳನ್ನ ತಾವು ಗಮನಿಸುತ್ತಿದ್ದೇವೆ ಎಂದೂ ಮಾಹಿತಿ ನೀಡಿದೆ.  ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಸೋಮವಾರ (ಸ್ಥಳೀಯ ಕಾಲಮಾನ) ಈ ಮಾತುಗಳನ್ನು ಹೇಳಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಪರಸ್ಪರ ಬದ್ಧತೆಯ ಮೇಲೆ ಅಮೆರಿಕವು ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಂಡಿದೆ ಎಂದು ಹೇಳಿದರು."ಕಾನೂನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ನೀಡುವ ಯಾವುದೇ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ, ಮತ್ತು ನಾವು ಭಾರತೀಯ ನ್ಯಾಯಾಲಯಗಳಲ್ಲಿ ರಾಹುಲ್ ಗಾಂಧಿ ಪ್ರಕರಣವನ್ನು ಗಮನಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹ ಮಾಡಿರುವ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದರು.

ಮೋದಿ ಎನ್ನುವ ಸರ್‌ನೇಮ್‌ ಹೊಂದಿರುವವರೆಲ್ಲಾ ಕಳ್ಳರೇ ಯಾಕಾಗಿರುತ್ತಾರೆ ಎಂದು ರಾಹುಲ್‌ ಗಾಂಧ 2019ರಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಹೇಳಿದ್ದರು. ಈ ಕುರಿತಾಗಿ ಗುಜರಾತ್‌ ಶಾಸಕ ಪೂರ್ಣೇಶ್‌ ಮೋದಿ ಸೂರತ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕುರಿತಾಗಿ ತೀರ್ಪು ನೀಡಿದ ಕೋರ್ಟ್‌ ರಾಹುಲ್‌ ಗಾಂಧಿ ದೋಷಿ ಎಂದು ಹೇಳಿದ್ದಲ್ಲದೆ ಅವರಿಗೆ 2 ವರ್ಷ ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿತ್ತು. 

ಇನ್ನು 11951ರ ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಯಾವುದೇ ಜನಪ್ರತಿನಿಧಿಗೆ ಕ್ರಿಮಿನಲ್‌ ಪ್ರಕರಣದಲ್ಲಿ 2 ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದ ಶಿಕ್ಷೆಯಾದಲ್ಲಿ ಅವರ ಸದಸ್ಯ ಸ್ಥಾನವನ್ನು ಅನರ್ಹ ಮಾಡಲಾಗುತ್ತದೆ. ಅದರಂತೆ ವಯನಾಡ್‌ ಕ್ಷೇತ್ರದ ಸಂಸದರಾಗಿದ್ದ ರಾಹುಲ್‌ ಗಾಂಧಿಯನ್ನು ಶುಕ್ರವಾರ ಲೋಕಸಭೆ ಕಾರ್ಯಾಲಯ ಅನರ್ಹ ಮಾಡಿತ್ತು. ಭಾರತದೊಂದಿಗಿನ ನಮ್ಮ ವ್ಯವಹಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಳಗೊಂಡಂತೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನಮ್ಮ ಹಂಚಿಕೆಯ ಬದ್ಧತೆಯ ಮೇಲೆ ಅಮೆರಿಕ ಭಾರತ ಸರ್ಕಾರದೊಂದಿಗೆ ತೊಡಗಿಸಿಕೊಂಡಿದೆ" ಎಂದು ಅವರು ಹೇಳಿದರು.

ಗೌತಮ್‌ ಅದಾನಿ ಜೊತೆಗೆ ರಾಬರ್ಟ್‌ ವಾದ್ರಾ ಸಂಬಂಧವೇನು? ಕಾಂಗ್ರೆಸ್‌ಗೆ ಪ್ರಶ್ನಿಸಿದ ಸ್ಮೃತಿ ಇರಾನಿ

"ನಾವು ಪ್ರಜಾಪ್ರಭುತ್ವದ ತತ್ವಗಳ ಪ್ರಾಮುಖ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಮಾನವ ಹಕ್ಕುಗಳ ರಕ್ಷಣೆಯನ್ನು ನಮ್ಮ ಎರಡೂ ಪ್ರಜಾಪ್ರಭುತ್ವಗಳನ್ನು ಬಲಪಡಿಸುವ ಕೀಲಿಯಾಗಿ ಎತ್ತಿ ತೋರಿಸುವುದನ್ನು ಮುಂದುವರಿಸುತ್ತೇವೆ" ಎಂದು ವೇದಾಂತ್ ಪಟೇಲ್ ಹೇಳಿದರು.

ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ದೇಶಭಕ್ತನಾಗಲು ಸಾಧ್ಯವಿಲ್ಲ: ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಸಂಸದ ವೈಯಕ್ತಿಕ ಟೀಕೆ

ಅಮೇರಿಕಾ ಭಾರತದೊಂದಿಗೆ ಅಥವಾ ರಾಹುಲ್ ಗಾಂಧಿಯೊಂದಿಗೆ ಚರ್ಚೆಯಲ್ಲಿರಲಿದೆಯೇ ಎಂದು ಕೇಳಿದಾಗ, "ಈ ಕುರಿತಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಹಾಗೂ ಯಾವುದೇ ಹೇಳಿಕೆಗಳೂ ನನ್ನಲ್ಲಿಲ್ಲ.ನಾವು ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿರುವ ಯಾವುದೇ ದೇಶದಲ್ಲಿ ವಿರೋಧ ಪಕ್ಷಗಳ ಸದಸ್ಯರೊಂದಿಗೆ ತೊಡಗಿಸಿಕೊಳ್ಳಲು ನಮಗೆ ಮಾನದಂಡಗಳಿವೆ. ಆದರೆ ಅದಾವುದೂ ಇಲ್ಲಿ ಆಗಿಲ್ಲ ಎಂದರು.

click me!