
ಜಮ್ಮು ಕಾಶ್ಮೀರ ವಿವಾದ ಕುರಿತು ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಸೆರ್ಗಿಯೊ ಹೇಳಿಕೆಗೆ ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದೆ.
ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ 'ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ(PoK)ದಲ್ಲಿ ಇಂದು ನಡೆಯುತ್ತಿರುವ ಅಶಾಂತಿಗೆ ಪಾಕಿಸ್ತಾನ ಕಾರಣ. ಹೀಗಾಗಿ ಇಲ್ಲಿನ ಜನರು ಪಾಕಿಸ್ತಾನದೊಂದಿಗೆ ಇರಲು ಬಯಸುವುದಿಲ್ಲ ಬದಲಾಗಿ ಭಾರತಕ್ಕೆ ಸೇರಲು ಬಯಸುತ್ತಾರೆ ಎಂಬ ಧ್ವನಿಗಳು ಕೇಳಿಬರುತ್ತಿವೆ..' ಎಂಬ ಮಾತನ್ನು ಹೇಳಿದ್ರು.
ಪಾಕ್ ಅಕ್ರಮಿತ ಕಾಶ್ಮೀರ ಕುರಿತು ರಾಯಭಾರಿ ಸೆರ್ಗಿಯೋ ಹೇಳಿಕೆಯಿಂದ ಕಂಗಲಾಗಿರುವ ಪಾಕಿಸ್ತಾನ ಇದೀಗ ಅಮೆರಿಕವೇ ವಿರುದ್ಧವೇ ಕೆರಳಿದೆ. ಬುಧವಾರ ಪಾಕಿಸ್ತಾನದಲ್ಲಿರುವ ಯುಎಸ್ ರಾಯಭಾರಿ ನಟಾಲಿ ಬೇಕರ್ ಅವರನ್ನು ಕರೆಯಿಸಿ, ಸೆರ್ಗಿಯೊ ಗೋರ್ ಅವರು ಜಮ್ಮು ಕಾಶ್ಮೀರ ಕುರಿತು ನೀಡಿರುವ ಹೇಳಿಕೆಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಪ್ರತಿಕ್ರಿಯಿಸಿದ್ದು, ಅಮೆರಿಕದ ಈ ಹೇಳಿಕೆ ಮೊದಲೇ ಬರಬೇಕಿತ್ತು ಎಂದಿದ್ದಾರೆ. 'ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿಯ ಕುರಿತು ಸೆರ್ಗಿಯೊ ಗೋರ್ ಅವರ ಹೇಳಿಕೆ ತುಂಬಾ ಒಳ್ಳೆಯ ಬೆಳವಣಿಗೆ, ಬಹುಶಃ ಬಹಳ ಮೊದಲೇ ಈ ಹೇಳಿಕೆ ಬರಬೇಕಿತ್ತು. ಅಲ್ಲದೆ ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರಿ ಇದನ್ನು ಪುನರುಚ್ಚರಿಸಿದರೆ ಅಂಥ ಹೇಳಿಕೆಯಿಂದ ಭಾರತದಲ್ಲಿ ಅಮೆರಿಕದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.
ಪಾಕಿಸ್ತಾನದ ಜೊತೆಗಿನ ಮೈತ್ರಿಯಿಂದಾಗಿ ಪಿಒಕೆ ಬಗ್ಗೆ ಅಮೆರಿಕ ಹಿಂದಿನಿಂದಲೂ ಅಡ್ಡಗೋಡೆ ಮೇಲೆ ದೀಪ ಇಟ್ಟಂತ ಮಾತನಾಡುತ್ತಿತ್ತು. ಸೆರ್ಗಿಯೋ ಅವರ ಹೇಳಿಕೆಯಿಂದ ಅಂತಹ ಅಭ್ಯಾಸಕ್ಕೆ ಬ್ರೇಕ್ ಹಾಕಿದೆ. ಪಾಕಿಸ್ತಾನ ಪಿಒಕೆಯನ್ನು ಯಾವತ್ತೂ ತನ್ನ ನೆಲ ಎಂಬಂತೆ ನೋಡಿಲ್ಲ. ಅದೊಂದು ವಸಾಹತುಶಾಹಿಯಂತೆ ನಡೆಸಿಕೊಂಡಿದ್ದರಿಂದಲೇ ಅಲ್ಲಿನ ಜನರು ಬಡತನ, ದಬ್ಬಾಳಿಕೆಯಿಂದ ನರಳುವಂತಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದರ ವಾಸ್ತವವನ್ನು ಪಾಕಿಸ್ತಾನದ ಅತ್ಯಂತ ವಿಶ್ವಾಸಾರ್ಹ ಮಿತ್ರ ರಾಷ್ಟ್ರ ಅಮೆರಿಕಕ್ಕೂ ಈಗ ಪಿಒಕೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಕಣ್ಣೀಗೆ ರಾಚಿದೆ.
ಸೆರ್ಗಿಯೋ ಗೋರ್ ಜಮ್ಮು ಕಾಶ್ಮೀರದ ನೈಸರ್ಗಿಕ ಸೌಂದರ್ಯಕ್ಕೆ ಫಿದಾ ಆಗಿದ್ದಾರೆ. 'ಜಮ್ಮು ಮತ್ತು ಕಾಶ್ಮೀರವು ಒಂದು ಸುಂದರವಾದ ಪ್ರದೇಶವಾಗಿದ್ದು, ಅದರ ನೈಸರ್ಗಿಕ ಸೌಂದರ್ಯ ಮತ್ತು ಅದು ನೀಡುವ ಅವಕಾಶಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ಭೇಟಿ ನೀಡಲು ಬಯಸುತ್ತಾರೆ ಎಂದು ಗೋರ್ ಹೇಳಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಸುಧಾರಿಸಲು ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಆಧಾರದ ಮೇಲೆ ಪ್ರಯಾಣ ಎಚ್ಚರಿಕೆಯನ್ನು ಬದಲಾಯಿಸುವ ಸಾಧ್ಯತೆಯನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ