ಚಹಾಗೆ 20ರೂ, ಚಾಟ್ಸ್ 100, ದಿನಸಿ 1000, ನಿಮ್ಮ ಪಾವತಿ ಮೇಲೆ ಯುಪಿಐ ₹2000 ನೀತಿ ಪರಿಣಾಮವೇನು?

Published : Sep 15, 2026, 11:51 AM ISTUpdated : Sep 15, 2026, 12:18 PM IST
UPI payments

ಸಾರಾಂಶ

ಯುಪಿಐ ಪಾವತಿಗಳ ಕುರಿತು ಮಹತ್ವದ ಅಧಿಸೂಚನೆ ಹೊರಬಿದ್ದಿದೆ. 2000 ರೂಪಾಯಿ ವರೆಗೆ ಯುಪಿಐ ವಹಿವಾಟು ಫ್ರೀ. ಅದಕ್ಕಿಂತ ಮೇಲೆ ಶುಲ್ಕ ವಿಧಿಸಲು ಸಾಧ್ಯವಿದೆ. ಹಾಗಾದರೆ ಈ ನೀತಿ ನಿಮ್ಮ ಹಣಕಾಸಿನ ಮೇಲೆ ಬೀರುವ ಪರಿಣಾಮವೇನು?

ನವದೆಹಲಿ (ಸೆ.15) ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಸಣ್ಣ ಕಿರಾಣಿ ಅಂಗಡಿ, ಚಹಾ, ಎಳನೀರು, ಹೂವು ಸೇರಿದಂತೆ ಎಲ್ಲೇ ಹೋದರೂ ಸುಲಭವಾಗಿ ಯುಪಿಐ ಮೂಲಕ ಪಾವತಿ ಮಾಡುತ್ತೇವೆ. ಭಾರತದ ಯುಪಿಐ ಕ್ರಾಂತಿಗೆ ವಿಶ್ವವೇ ತಲೆಬಾಗಿದೆ. ಆದರೆ ಇದೀಗ ಯುಪಿಐ ಪಾವತಿ 2000 ರೂಪಾಯಿ ಮೀರಿದರೆ ಶುಲ್ಕ ಅನ್ವಯವಾಗಲಿದೆ.. ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆಯೊಂದನ್ನು ಹೊರಡಿಸಿದೆ. ಯುಪಿಐ ವಹಿವಾಟಿನಲ್ಲಿ 2000 ರೂಪಾಯಿವರೆಗೆ ಯಾವುದೇ ಶುಲ್ಕವಿಲ್ಲ. ಆದರೆ 2000 ರೂಪಾಯಿಗಿಂತ ಮೇಲ್ಪಟ್ಟ ವಹಿವಾಟಿಗೆ ಶುಲ್ಕ ವಿಧಿಸುವ ಅವಕಾಶ ನೀಡಿದೆ. ಸಣ್ಣ ಮೊತ್ತದ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನಿದು ಹೊಸ ನಿಯಮ?

ಪಾವತಿ ಕಾಯ್ದೆ 2007ರ ಅನ್ವಯ 2000 ರೂಪಾಯಿ ವರೆಗಿನ ಯುಪಿ ಪಾವತಿ ಅಥವಾ ರೂಪೇ ಕಾರ್ಡ್ ವ್ಯವಹಾರಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಆದರೆ ಇದು ನೇರವಾಗಿ ಜನಸಾಮಾನ್ಯರು, ಗ್ರಾಹಕರಿಗೆ ಅನ್ವಯವಾಗುವುದಿಲ್ಲ. 2000 ರೂಪಾಯಿ ಗಿಂತ ಹೆಚ್ಚಿನ ಪಾವತಿಗಳಾದ ಆಸ್ಪತ್ರೆ ಬಿಲ್, ದೊಡ್ಡ ಶಾಪಿಂಗ್ ಖರೀದಿಗಳಿಗೆ ವ್ಯಾಪಾರಿಗಳು ಎಂಡಿಆರ್ ಪಾವತಿಸುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಇದು ನೇರವಾಗಿ ಗ್ರಾಹಕರ ಮೇಲೆ ಯಾವುದೇ ಶುಲ್ಕ ಪಾವತಿಯಲ್ಲ. ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವ್ಯಾಪಾರಿಗಳು ಪಾವತಿ ಮಾಡಬೇಕಾಗುತ್ತದೆ. 2000 ರೂಪಾಯಿ ಒಳಗಿನ ವಹಿವಾಟುಗಳಿಗೆ ಬ್ಯಾಂಕ್ ಅಥವಾ ಯುಪಿಐ ಪೂರೈಕೆದಾರರು ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ. ಅಂದರೆ ಚಹಾ ಕುಡಿಯಲು 20, ದಿನಸಿ 500, ಚಾಟ್ಸ್ ಹೊಟೆಲ್ 500 ಸೇರಿದಂತೆ ದಿನೈಂದಿನ ವಹಿವಾಟು 2000 ರೂಪಾಯಿ ಮಿತಿಯಲ್ಲಿದ್ದರೆ ಯಾವುದೇ ಶುಲ್ಕ ಗ್ರಾಹಕರ ಮೇಲೆ ಅಥವಾ ವ್ಯಾಪಾರಿಗಳ ಮೇಲೆ ಇರುವುದಿಲ್ಲ. ಆದರೆ ಇದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳು, ವಹಿವಾಟುಗಳಿಗೆ ಯುಪಿಐ ಬ್ಯಾಂಕ್, ಪೂರೈಕೆದಾರರು ಭಲವಿಷ್ಯದಲ್ಲಿ MDR (ಮರ್ಚಂಟ್ ಡಿಸ್ಕೌಂಟ್ ರೇಟ್)) ಶುಲ್ಕ ವಿಧಿಸಲು ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಇನ್ನು ನಿಮ್ಮ ವೈಯುಕ್ತಿಕ ವ್ಯವಹಾರಗಳಿಗೆ ಯಾವುದೇ ಮೀತಿ ಇರುವುದಿಲ್ಲ. ಅಂದರೆ ಸ್ನೇಹಿತರು, ಕುಟುಂಬಸ್ಥರೊಳಗೆ ನಡೆಯುವ ಪಾವತಿಗಳು, ಹಣ ವರ್ಗಾವಣೆಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಕೇವಲ ವ್ಯಾಪಾರ ಪಾವತಿಗಳಿಗೆ ಮಾತ್ರ. ಅದು ಕೂಡ ಮರ್ಚೆಂಟ್ ಡಿಸ್ಕೌಂಟ್ ರೇಡ್ ಶುಲ್ಕವಾಗಿರುತ್ತದೆ. ಇದು ಬ್ಯಾಂಕ್, ಯುಪಿಐ ಪೂರೈಕೆದಾರರು, ವ್ಯಾಪಾರಿಗಳಿಗೆ ಅನ್ವಯವಾಗಲಿದೆ.

ಶಾಲಾ ಶುಲ್ಕ, ಬಾಡಿಗೆ ಪಾವತಿ ಸೇರಿದಂತೆ ದೊಡ್ಡ ಪಾವತಿಗೆ ಶುಲ್ಕ ಇರುತ್ತಾ

ಬಾಡಿಗೆ ಪಾವತಿ, ಶಾಲಾ ಶುಲ್ಕ,ಆಸ್ಪತ್ರೆ ಬಿಲ್, ದೊಡ್ಡ ಮೊತ್ತ ಖರೀದಿ, ಶಾಪಿಂಗ್ ಸೇರಿದಂತೆ ಹಲವು ಯುಪಿಐ ವಹಿವಾಟುಗಳ ಮೊತ್ತ 2000 ರೂಪಾಯಿ ಮೀರಲಿದೆ. ಈ ಪಾವತಿಗಳು ಅಥವಾ ವಹಿವಾಟುಗಳಿಗೆ ಬ್ಯಾಂಕ್ ಅಥವಾ ಯುಪಿಐ ಪೂರೆಕಾದರರು ಶುಲ್ಕ ವಿಧಿಸುವ ಅವಕಾಶವಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಪ್ರಮುಖವಾಗಿ ಶುಲ್ಕ ವಿಧಿಸುವುದು ಬ್ಯಾಂಕ್ ಅಥವಾ ಯುಪಿಐ ಪೂರೈಕೆದಾರರು ಹಾಗೂ ವ್ಯಾಪಾರಿಗಳ ನಡುವಿನ ಶುಲ್ಕವಾಗಿದೆ. ಜನಸಾಮಾನ್ಯರಿಗೆ ವಿಧಿಸುವ ಶುಲ್ಕವಲ್ಲ. ಎಷ್ಟು ವಿಧಿಸಬೇಕು ಅನ್ನೋ ಕುರಿತು ಯಾವುದೇ ನಿರ್ಧಾರವಾಗಿಲ್ಲ. ಈ ಕುರಿತು NPCI ಶೀಘ್ರದಲ್ಲೇ ರೂಪುರೇಷೆ ರೂಪಿಸಲಿದೆ. ಜೊತೆಗೆ ಎಷ್ಟು ಪ್ರಮಾಣದಲ್ಲಿ ಶುಲ್ಕ ವಿಧಿಸಬಹುದು ಅನ್ನೋ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ.

ಜನಸಾಮಾನ್ಯರಿಗೂ ಅನ್ವಯಸುತ್ತಾ ನೀತಿ?

ಹೊಸ ನೀತಿ ಪ್ರಕಾರ ಸಣ್ಣ ಪಾವತಿಗಳಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಪಾವತಿಯ ಮೊತ್ತ 2000 ರೂಪಾಯಿ ಮೀರಿದರೆ ಶುಲ್ಕ ಅನ್ವಯವಾಗಲಿದೆ. ಸದ್ಯ ಶುಲ್ಕ ವಿಧಿಸುವ ಅವಕಾಶ ಮಾತ್ರ ಕಲ್ಪಿಸಲಾಗಿದೆ. ಜನಸಾಮಾನ್ಯರಿಗೆ, ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲ. ಇದು ನೇರವಾಗಿ ಯುಪಿಐ ಪೂರೆಕೆದಾರರು, ಬ್ಯಾಂಕ್ ಹಾಗೂ ಮರ್ಚೆಂಟ್ ನಡುವಿನ ಶುಲ್ಕವಾಗಿದೆ.

ವ್ಯಾಪಾರಿಗಳಿಗೆ ಸಂಕಷ್ಟ

ವ್ಯಾಪಾರಿಳಿಗೆ ತೀವ್ರ ಸಂಕಷ್ಟವಾಗಲಿದೆ. ಎಲ್ಲರೂ ಯುಪಿಐ ಮೂಲಕ ಪಾವತಿ ಮಾಡುತ್ತಾರೆ. 2000 ರೂಪಾಯಿಗಿಂತ ಮೀರಿದ ಪಾವತಿಗಳಿಗೆ ವ್ಯಾಪಾರಿಗಳು ಮರ್ಚೆಂಟ್ ಡಿಸ್ಕೌಂಟ್ ರೇಟ್ ಪಾವತಿಸಬೇಕಾಗುತ್ತದೆ. NPCI ಶುಲ್ಕ ವಿಧಿಸಲಿದೆ. ಈ ಮೊತ್ತವನ್ನು ಯುಪಿಐ ಪೂರೈಕೆದಾರರು ಹಾಗೂ ವ್ಯಾಪಾರಿಗಳು ಪಾವತಿ ಮಾಡಬೇಕಾಗುತ್ತದೆ. ಇದು ನೇರವಾಗಿ ಜನಸಾಮಾನ್ಯರಿಗೆ ಅನ್ವಯಿಸುವುದಿಲ್ಲ.

ಏನಿದು ಎಂಡಿಆರ್ ಶುಲ್ಕ

ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳು ಪಾವತಿಸುವ ಶುಲ್ಕವಾಗಿದೆ. ಅಂದರೆ ಯುಪಿಐ ಪಾವತಿ, ರೂಪೇ ಕಾರ್ಡ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಯಾವುದೇ ರೀತಿಯ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವುದಕ್ಕಾಗಿ ವ್ಯಾಪಾರ ಸಂಸ್ಥೆಗಳು, ವ್ಯಾಪಾರಿಗಳು ಬ್ಯಾಂಕ್ ಅಥವಾ ಯುಪಿಐ ಪೂರೆಕೆದಾರರು ಅಥವಾ ಹಣಕಾಸು ಸಂಸ್ಥೆಗಳಿಗೆ ಪಾವತಿಸುವ ಶುಲ್ಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್‌ಬಿಐ 1 ಲಕ್ಷ ಕೋಟಿ ಬಾಂಡ್ ಮಾರಾಟ, ಚಿಲ್ಲರೆ ಹೂಡಿಕೆದಾರರಿಗೂ ಖರೀದಿಗೆ ಇದೆ ಅವಕಾಶ
​"ಹೆಸರೇ ಇಲ್ಲದ ಭಾರತದ ಏಕೈಕ ರೈಲ್ವೆ ಸ್ಟೇಷನ್! ಬೋರ್ಡ್ ಖಾಲಿ ಇರೋದರ ಹಿಂದಿದೆ ವಿಚಿತ್ರ ರಹಸ್ಯ..."