ಆರ್‌ಬಿಐ 1 ಲಕ್ಷ ಕೋಟಿ ಬಾಂಡ್ ಮಾರಾಟ, ಚಿಲ್ಲರೆ ಹೂಡಿಕೆದಾರರಿಗೂ ಖರೀದಿಗೆ ಇದೆ ಅವಕಾಶ

Published : Sep 15, 2026, 11:22 AM IST
RBI Bond

ಸಾರಾಂಶ

ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಮೂರು ಹಂತಗಳಲ್ಲಿ ಸರ್ಕಾರಿ ಸೆಕ್ಯೂರಿಟಿ ಮಾರಾಟ ಮಾಡಲು ಮುಂದಾಗಿದೆ. ಈ ಬಾಂಡ್ 2029 ಹಾಗೂ 2032ಕ್ಕೆ ಮೆಚ್ಯೂರಿಟಿ ಪಡೆದುಕೊಳ್ಳಲಿದೆ. ಸೆ.17ಕ್ಕೆ ಹರಾಜು ನಡೆಯಲಿದೆ.

ನವದೆಹಲಿ (ಸೆ.15) ಭಾರತೀಯ ರಿಸರ್ವ್ ಬ್ಯಾಂಕ್ ( RBI) 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಾಂಡ್ ಮಾರಟಕ್ಕೆ ಮುಂದಾಗಿದೆ. ಆಸಕ್ತಕರು ಸೆಪ್ಟೆಂಬರ್ 17ರಂದು ಆನ್‌ಲೈನ್ ಮೂಲಕ ಬಿಡ್ ಸಲ್ಲಿಕೆ ಮಾಡಬೇಕು. ಬಳಿಕ ಹರಾಜು ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಹೆಚ್ಚುವರಿ ಹಣ ನಿಯಂತ್ರಣಕ್ಕೆ ಆರ್‌ಸಿಬಿ ಈ ಕ್ರಮ ಕೈಗೊಂಡಿದೆ. ಚಿಲ್ಲರೆ ಹೂಡಿಕೆದಾರರಿಗೂ ಈ ಬಾಂಡ್ ಖರೀದಿ ಸಾಧ್ಯವಿದೆ.

ಸೆಪ್ಟೆಂಬರ್ 17ಕ್ಕೆ ಹೂಡಿಕೆದಾರರಿಗೆ ಬಂಪರ್

ಆರ್‌ಬಿಐನ 1 ಲಕ್ಷ ಕೋಟಿ ಬಾಂಡ್ ಮಾರಾಟದ ಹರಾಜು ಪಕ್ರಿಯೆ ಸೆಪ್ಟೆಂಬರ್ 17 ರಂದು ನಡೆಯಲಿದೆ. ಸೆಪ್ಟೆಂಬರ್ 17ರಂದು ಬೆಳಗ್ಗೆ 9.30 ರಿಂದ 10.30ರ ಒಳಗೆ ಆಸಕ್ತರು ಬಿಡ್ ಸಲ್ಲಿಕೆ ಮಾಡಬೇಕು. ಅದೇ ದಿನ ಫಲಿತಾಂಶ ಘೋಷಣೆಯಾಗಲಿದೆ ಈ ಬಾಂಡ್ 2029 ಹಾಗೂ 2032ರಲ್ಲಿ ಮೆಚ್ಯೂರಿಟಿಗೊಳ್ಳಲಿದೆ.

ಮುಕ್ತ ಮಾರುಕಟ್ಟೆಯಲ್ಲಿ ಸಾಧ್ಯ

ಆರ್‌ಬಿಐ ಬೃಹತ್ ಪ್ರಮಾಣದಲ್ಲಿ ಬಾಂಡ್ ಮಾರಾಟಕ್ಕೆ ಮುಂದಾಗಿದೆ. ಹೀಗಾಗಿ ಚಿಲ್ಲರೆ ಹೂಡಿಕೆದಾರರು ಈ ಬಿಡ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಪ್ರಮುಖವಾಗಿ ಓಪನೇಮ್ ಮಾರುಕಟ್ಟೆ ಕಾರ್ಯಾಚರಣೆ (OMO)ಯಲ್ಲಿ ಚಿಲ್ಲರೆ ಹೂಡಿಕೆದಾರರು ನೇರವಾಗಿ ಬಿಡ್ ಮಾಡಲು ಸಾಧ್ಯವಿಲ್ಲ. ಚಿಲ್ಲರೆ ಹೂಡಿಕೆದಾರರಿಗೆ ಒಂದು ಆಯ್ಕೆಯಿದೆ. ಸರ್ಕಾರಿ ಬಾಂಡ್ ಹೂಡಿಕೆದಾರರಿಗೆ ದ್ವಿತೀಯಕ ಮಾರುಕಟ್ಟೆಯಲ್ಲಿ ಈ ಬಾಂಡ್‌ಗಳು ಮುಕ್ತವಾಗಿ ಲಭ್ಯವಾಗಲಿದೆ. ಇಷ್ಟೇ ಅಲ್ಲ ಆರ್‌ಬಿಐ ರಿಟೇಲ್ ಡೈರೆಕ್ಟ್ ಮೂಲಕ ನೇರ ಹಾಗೂ ಉಚಿತ ಗಿಲ್ಟ್ ಖಾತೆ ತೆರೆದು ಬಾಂಡ್ ಖರೀದಿಸಲು ಸಾಧ್ಯವಿದೆ.

ಕನಿಷ್ಠ 10 ಸಾವಿರ ರೂಪಾಯಿ

ದ್ವಿತೀಯಕ ಮಾರುಕಟ್ಟೆ ಮೂಲಕ ಬಾಂಡ್ ಖರೀದಿಗೆ ಅವಕಾಶವಿದೆ. ಸಣ್ಣ ಹೂಡಿಕೆದಾರರು ಕನಿಷ್ಠ 10 ಸಾವಿರ ರೂಪಾಯಿ ಹೂಡಿಕೆ ಮಾಡಿ ಆರ್‌ಬಿಐ ಬಾಂಡ್ ಖರೀದಿಸಲು ಸಾಧ್ಯವಿದೆ. ಇದರಿಂದ ಚಿಲ್ಲರೆ ಹೂಡಿಕೆದಾರರು ಆರ್‌ಬಿಐ ಬಾಂಡ್ ಖರೀದಿಸುವ ಅವಕಾಶ ಪಡೆಯಲಿದ್ದಾರೆ.

ಹಣದುಬ್ಬರ, ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಆರ್‌ಬಿಐ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪೈಕಿ ಆರ್‌ಬಿಆ ಬಾಂಡ್ ಕೂಡ ಒಂದು ಇದೀಗ 1 ಲಕ್ಷ ಕೋಟಿ ಬಾಂಡ್ ಮಾರಾಟದ ಮೂಲಕ ಮಾರುಕಟ್ಟೆಯಿಂದ ಹಣ ಸಂಗ್ರಹಣೆಯಾಗಲಿದೆ. ಇದರಿಂದ ಸರ್ಕಾರಿ ಸೆಕ್ಯೂರಿಟಿ ಬಾಂಡ್ ಹಾಗೂ ಅದರ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

2024ರಲ್ಲಿ ಆರ್‌ಬಿಐ ದ್ವಿತೀಯಕ ಮಾರುಕಟ್ಟೆಯಲ್ಲಿ ಈ ರೀತಿ ಬಾಂಡ್ ಮಾರಾಟ ಮಾಡಿತ್ತು. ಇದೀಗ 2 ವರ್ಷಗಳ ಬಳಿಕ ಆರ್‌ಬಿಐ ಮತ್ತೆ ಬಾಂಡ್ ಮಾರಾಟ ಮಾಡುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

​"ಹೆಸರೇ ಇಲ್ಲದ ಭಾರತದ ಏಕೈಕ ರೈಲ್ವೆ ಸ್ಟೇಷನ್! ಬೋರ್ಡ್ ಖಾಲಿ ಇರೋದರ ಹಿಂದಿದೆ ವಿಚಿತ್ರ ರಹಸ್ಯ..."
ಕುರಾನ್ ಮೇಲೆ ಪ್ರಮಾಣ ಮಾಡಿ ನಂಬಿಸಿದ್ದ- ಶಮಿ ಸಹೋದರನ ವಿರುದ್ಧ ಬಲತ್ಕಾರದ ಆರೋಪ ಹೊರಿಸಿದ ಈ ಮಹಿಳೆ ಯಾರು?