ಗಂಡನ ಸಾವಿನ ಬಳಿಕ ಪ್ರೇಮಿ ಜೊತೆ ಕಾಲ್ಕಿತ್ತ ಅಮ್ಮ; ಪೊಲೀಸ್ ಠಾಣೆ ಮೆಟ್ಟಿಲೇರಿ ರಕ್ಷಣೆ ಕೇಳಿದ 17 ವರ್ಷದ ಮಗ

Published : Aug 02, 2025, 11:54 AM IST
Woman Elope

ಸಾರಾಂಶ

Woman Elope: ಪತಿಯ ಮರಣದ ನಂತರ ಮಹಿಳೆಯೊಬ್ಬರು ತನಗಿಂತ ಕಿರಿಯ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾರೆ. ಮನೆಯಿಂದ ಹೋಗುವಾಗ 3.5 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. 

ಲಕ್ನೋ: ಗಂಡನ ಸಾವಿನ ಬಳಿಕ ಮತ್ತೊಂದು ಮದುವೆಯಾಗೋದು ಮಹಿಳೆಯ ವಿವೇಚನೆಗೆ ಬಿಟ್ಟಿದ್ದು. ಸಾಮಾನ್ಯವಾಗಿ ಪುರುಷರು ಪತ್ನಿ ನಿಧನದ ಬಳಿಕ ಎರಡನೇ ಮದುವೆಯಾಗುತ್ತಾರೆ. ಮಹಿಳೆಯರು ಸಹ ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದಿದ್ದರೆ ಎರಡನೇ ಮದುವೆಯಾಗುತ್ತಾರೆ. ಇದೀಗ ಇಂತಹವುದೇ ಒಂದು ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿಯ ನಿಧನದ ಬಳಿಕ ಮಹಿಳೆ ತನಗಿಂತ ಚಿಕ್ಕ ವಯಸ್ಸಿನ ಪುರುಷನನ್ನು ಮದುವೆಯಾಗಿದ್ದಾರೆ. ಮನೆಯಿಂದ ಹೋಗುವಾಗ 3.5 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಅಮೂಲ್ಯ ಆಭರಣಗಳೊಂದಿಗೆ ಓಡಿ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮ್ಮ ಹೋದ ಬಳಿಕ ಒಂಟಿಯಾದ 17 ವರ್ಷದ ಮಗ ಪೊಲೀಸ್ ಠಾಣೆ ಮೆಟ್ಟಿಲೇರಿ ರಕ್ಷಣೆ ಕೇಳಿದ್ದಾನೆ.

ಗೆಳತಿಯರೊಂದಿಗೆ ಪಂಜಾಬ್‌ಗೆ ಹೋಗಿದ್ದ ಅಮ್ಮ ಬರಲೇ ಇಲ್ಲ

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆ ಮುಜಾಫರ್‌ನಗರದಲ್ಲಿ ಈ ಘಟನೆ ನಡೆದಿದೆ. 17 ವರ್ಷದ ಮಗ ಮನೀಶ್ ವರ್ಮಾ, ತನಗೆ ತಾಯಿ ಮತ್ತು ಆಕೆಯ ಪ್ರಿಯಕರನಿಂದ ಜೀವಕ್ಕೆ ಅಪಾಯವಿದೆ ಎಂದು ಪೊಲೀಶ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಕೆಲ ತಿಂಗಳ ತಂದೆ ಅನಾರೋಗ್ಯದಿಂದಾಗಿ ಮೃತರಾದರು. ನಂತರ ಮುಜಾಫರ್‌ ನಗರದ ನಿವಾಸಿ ಅನುಜ್ ಭಾಟಿ ಎಂಬ ಯುವಕನೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು. ಜುಲೈ 25ರಂದು ಗೆಳತಿಯರಾದ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಎಂಬವರ ಜೊತೆ ತಾಯಿ ಪಂಜಾಬ್‌ಗೆ ತೆರಳಿದ್ದರು. ಅಲ್ಲಿಂದ ಅನುಜ್ ಭಾಟಿ ಜೊತೆ ಅಮ್ಮ ಓಡಿ ಹೋಗಿದ್ದಾರೆ ಎಂದು ಮನೀಶ್ ವರ್ಮಾ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಅಮ್ಮನ ಮೂವರು ಗೆಳತಿಯರಿಂದ ಬೆದರಿಕೆ ಸಂದೇಶದ ಆರೋಪ

ಅಮ್ಮ ದೂರವಾದ ಬಳಿಕ ಮನೀಶ್ ಮತ್ತು ಆತನ ಸೋದರ ಒಂಟಿಯಾಗಿದ್ದಾನೆ. ನಂತರ ತಮಗೆ ನಿರಂತರವಾಗಿ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಮನೀಶ್ ವರ್ಮಾ ಆರೋಪಿಸಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದಂತೆ ಬೆದರಿಕೆ ಹಾಕಲಾಗಿತ್ತು. ತಮ್ಮ ಮೇಲೆ ಹಲ್ಲೆ ಸಹ ನಡೆಸಲಾಗಿದೆ ಎಂದು ಮನೀಶ್ ಆರೋಪಿಸಿದ್ದಾರೆ. ಅಮ್ಮನ ಮೂವರು ಗೆಳತಿಯರಾದ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ರೈತ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆ.

ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಬೆದರಿಕೆ

ಪೊಲೀಸರಿಗೆ ದೂರು ನೀಡಿದ್ರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸೋದಾಗಿ ರಿಹಾನ್ನಾ, ಶಹಜಾದಿ ಮತ್ತು ನೂರ್ ಜಹಾನ್ ಬೆದರಿಕೆ ಹಾಕಿದ್ದಾರೆ. ನಾನು ಮತ್ತು ಅಣ್ಣ ಬೆದರಿಕೆಯ ನೆರಳಿನಲ್ಲಿ ಬದುಕುತ್ತಿರೋದಾಗಿ ಹೇಳಿದ್ದಾರೆ. ಹೀಗಾಗಿ ರಕ್ಷಣೆ ಕೋರಿ ಮನೀಶ್ ವರ್ಮಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಇದನ್ನೂ ಓದಿ: ಕಾಮದಾಸೆ ಬಿಸಿಯಾದ ಅಪ್ಪುಗೆ ಬಯಸಿದಾಗಲೇ ನಿಲ್ಲಿಸಿದ್ಳು ಗಂಡನ ಉಸಿರು; ಏನಿದು ಫರ್ಜಾನಾಳ ವಿರಹದ ಕಥೆ?

ತಂದೆ ಆಸ್ತಿ ಪಡೆದುಕೊಳ್ಳಲು ಅನುಜ್ ಭಾಟಿ ಪ್ರಯತ್ನ

ದೂರು ದಾಖಲಿಸಿದ್ರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮನೀಶ್ ವರ್ಮಾ ಆರೋಪಿಸಿದ್ದಾನೆ. ತಾಯಿ ಮನೆಯ ಎಲ್ಲಾ ಆಸ್ತಿಯನ್ನು ಮಾರಾಟ ಮಾಡಿದ್ದಾಳೆ. ತಾಯಿಯ ಪ್ರಿಯಕರ ಅನುಜ್ ಭಾಟಿ, ನಮ್ಮ ತಂದೆಯ ಜಮೀನು ಮತ್ತು ಇತರೆ ಆಸ್ತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಪೊಲೀಸರಿಗೆ ಎಲ್ಲಾ ಘಟನೆಯನ್ನು ವಿವರಿಸಿ ದೂರು ಸಹ ನೀಡಲಾಗಿದೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ತಾಯಿ ಮತ್ತು ಅವರ ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನೀಶ್ ವರ್ಮಾ ಆಗ್ರಹಿಸಿದ್ದಾರೆ.

ಮನೀಶ್ ವರ್ಮಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಮಕ್ಕಳೊಂದಿಗೆ ತಾಯಿ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’