
ಮಹಿಳೆಯೊಬ್ಬರು ತಮ್ಮ ಕಾರನ್ನು ರಿವರ್ಸ್ ಮಾಡುವುದಕ್ಕೆ ಹೋಗಿ ಸೀದಾ ಹೊಟೇಲ್ ಲಾಬಿಯೊಳಗೆ ನುಗ್ಗಿಸಿದ್ದು, ಅಲ್ಲಿ ನಿಂತಿದ್ದವರು ಕೂದಲೆಳೆ ಅಂತರದಿಂದ ದೊಡ್ಡ ಅವಘಡದಿಂದ ಪಾರಾಗಿದ್ದಾರೆ. ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳಾ ವಕೀಲರೊಬ್ಬರು ತಮ್ಮ ಕಾರನ್ನು ರಿವರ್ಸ್ ತೆಗೆಯುವುದಕ್ಕೆ ಹೋಗಿ ಅಲ್ಲಿನ ರಮದಾ ಹೊಟೇಲ್ ಲಾಬಿಗೆ ಕಾರನ್ನು ನುಗ್ಗಿಸಿದ್ದಾರೆ. ಇದರಿಂದ ಹೊಟೇಲ್ ಮುಂದಿದ್ದ ಗಾಜಿನಗೋಡೆ ಮುರಿದು ಬಿದ್ದಿದೆ.
ತಡರಾತ್ರಿ ಈ ಅಪಘಾತ ನಡೆದಿದ್ದು, ಅಲ್ಲಿ ಪಕ್ಕಕ್ಕೆ ನಿಂತಿರುವವರು ಕಾರು ಬರುವುದನ್ನು ನೋಡಿ ದೂರ ಓಡಿ ಜೀವ ಉಳಿಸಿಕೊಂಡಿದ್ದಾರೆ. ಕಾರು ರಿಸೆಪ್ಷನ್ ಬಳಿಯ ಗಾಜಿನ ಗೋಡೆಗೆ ಗುದ್ದಿ ಫುಲ್ ರಿವರ್ಸ್ ಬಂದಿದೆ. ಕಾರು ಚಾಲನೆ ಮಾಡ್ತಿದ್ದ ಮಹಿಳೆ ವಕೀಲರಾಗಿದ್ದು, ರಾತ್ರಿಯ ಊಟಕ್ಕೆ ಈ ಹೊಟೇಲ್‌ಗೆ ಬಂದಿದ್ದರು. ಅವರು ರಿವರ್ಸ್ ವೇಳೆ ಬ್ರೇಕ್ ಬದಲು ಅಕ್ಸಿಲರೇಟರ್‌ನ್ನು ಒತ್ತಿದ್ದರಿಂದ ಕಾರು ಸೀದಾ ಹಿಂದೆ ಬಂದು ಹೊಟೇಲ್‌ನ ಮುಂಭಾಗದ ಗಾಜಿನ ಗ್ಲಾಸುಗಳನ್ನು ಮುರಿದು ಒಳನುಗ್ಗಿದೆ.
ಘಟನೆಯಲ್ಲಿ ಪವಾಡಸದೃಶವಾಗಿ, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ, ಆದರೂ ನಿಯಂತ್ರಣ ತಪ್ಪಿದ ವಾಹನವು ಪಕ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ. ಆದರೆ ಚಾಲಕ ಮತ್ತು ಗಾಯಗೊಂಡ ವ್ಯಕ್ತಿಗಳು ಇಬ್ಬರೂ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ. ಆದರೆ ಹೊಟೇಲ್ ಮುಂಭಾಗಕ್ಕೆ ಭಾರಿ ಹಾನಿಯಾಗಿದೆ.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಹೋಟೆಲ್ ಆಡಳಿತ ಮಂಡಳಿ ಮತ್ತು ಮಹಿಳೆ ಕೋರ್ಟ್ ಹೊರಗೆ ಪ್ರಕರಣವನ್ನು ಬಗೆಹರಿಸಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ, ಹೋಟೆಲ್ ಮಾಲೀಕ ಸೌರಭ್ ಮಲ್ಹೋತ್ರಾ ಈ ಘಟನೆ ಆಕಸ್ಮಿಕ ಎಂದು ಹೇಳಿದ್ದು, ಸಿಸಿಟಿವಿ ದೃಶ್ಯಾವಳಿ ಸೋರಿಕೆ ಆದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೀದಿ ಹೋರಿಗಳ ಕಾದಾಟಗೆ ಚಿಂದಿಯಾದ ಟೀ ಶಾಪ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಉತ್ತರ ಪ್ರದೇಶದ ಮತ್ತೊಂದು ವೀಡಿಯೋದಲ್ಲಿ ಎರಡು ಹೋರಿಗಳು ಕಾದಾಟ ರಸ್ತೆ ಪಕ್ಕದ ಪುಟ್ಟ ಟೀ ಅಂಗಡಿಯೊಂದನ್ನೇ ಧ್ವಂಸಗೊಳಿಸಿವೆ. ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೆಲವು ಯುವಕರು ಟೀ ಕುಡಿಯುತ್ತಾ ಟೀ ಶಾಪ್ ಪಕ್ಕದ ಬೆಂಚ್ ಮೇಲೆ ಕುಳಿತಿದ್ದರೆ ಎರಡು ಹೋರಿಗಳು ಪರಸ್ಪರ ಕಾದಾಡುತ್ತಾ ಈ ಪುಟ್ಟ ಅಂಗಡಿಗೆ ನುಗ್ಗಿದ್ದು, ಹೋರಿಗಳು ಗುದ್ದಾಡಿದ ರಭಸಕ್ಕೆ ಆ ಸ್ಟೀಲ್‌ನಿಂದ ನಿರ್ಮಿತವಾದ ಚಕ್ರಗಳಿರುವ ಟೀ ಶಾಪ್ ಒಂದು ಹೋರಿಯ ಮೇಲೆ ಬಿದ್ದಿದೆ. ಈ ಪುಟ್ಟ ಸ್ಟಾಲ್ ಬಿದ್ದ ರಭಸಕ್ಕೆ ಹೋರಿ ಮತ್ತಷ್ಟು ಗೊಂದಲಕ್ಕೊಳಗಾಗಿದ್ದು, ಅದನ್ನು ಎಳೆದುಕೊಂಡೆ ರಸ್ತೆಯಲ್ಲಿ ಓಡಿದೆ.
ಈ ವೇಳೆ ಇದನ್ನು ನೋಡಿ ರಸ್ತೆಯಲ್ಲಿರುವ ಇತರ ಕೆಲವು ಹೋರಿಗಳು ಕೂಡ ಅಲ್ಲಿ ಅದರ ಹಿಂದೆ ಓಡುವುದನ್ನು ನೋಡಬಹುದಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀ ಅಂಗಡಿ ಕ್ಷಣದಲ್ಲಿ ಧ್ವಂಸಗೊಂಡಿದ್ದು ನೋಡಿ ಅಲ್ಲಿದ್ದ ಜನ ಗಾಬರಿಯಾಗಿದ್ದಾರೆ. ಇಲ್ಲಿ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ದನಗಳು ಇದ್ದಕ್ಕಿದ್ದಂತೆ ಜಗಳವಾಡುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರ. ಈ ಬಗ್ಗೆ ಜಿಲ್ಲಾ ಪಂಚಾಯತ್‌ಗೆ ಪದೇ ಪದೇ ದೂರುಗಳು ಮತ್ತು ಪತ್ರಗಳನ್ನು ಕಳುಹಿಸಿದರೂ, ಅಧಿಕಾರಿಗಳು ಈ ಪ್ರಾಣಿಗಳನ್ನು ಹಿಡಿಯಲು ಯಾವುದೇ ಕ್ರಮ ಕೈಗೊಂಡಿಲ್ಲ, ಪರಿಣಾಮವಾಗಿ ಜನರ ಜೀವಕ್ಕೆ ಹಾನಿಯಾಗುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ