Wedding Bells: ಮಗಳ ನಿಶ್ಚತಾರ್ಥದ ಫೋಟೋ ಶೇರ್‌ ಮಾಡಿದ ಸ್ಮೃತಿ ಇರಾನಿ

By Suvarna NewsFirst Published Dec 26, 2021, 12:53 PM IST
Highlights
  • ಸ್ಮೃತಿ ಇರಾನಿ ಪುತ್ರಿ ಶಾನೆಲ್‌ ನಿಶ್ಚಿತಾರ್ಥ
  • ಫೋಟೋ ಪೋಸ್ಟ್‌ ಮಾಡಿದ ಕೇಂದ್ರ ಸಚಿವೆ
  • ಅರ್ಜುನ್‌ ಭಲ್ಲಾ ಕೈ ಹಿಡಿಯಲಿರುವ ಶಾನೆಲ್

ನವದೆಹಲಿ(ಡಿ. 26): ಕೇಂದ್ರ  ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (Smriti Irani) ಪುತ್ರಿಗೆ ವಿವಾಹ ಯೋಗ ಕೂಡಿ ಬಂದಿದ್ದು, ತಮ್ಮ ಪುತ್ರಿಯ ವಿವಾಹ ನಿಶ್ಚಿತಾರ್ಥದ ಫೋಟೊಗಳನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುವ ಮೂಲಕ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಸ್ಮೃತಿ ಇರಾನಿ ಪುತ್ರಿ ಶಾನೆಲ್‌(Shanelle) ಅವರು ಅರ್ಜುನ್‌ ಭಲ್ಲಾ (Arjun Bhalla) ಎಂಬುವವರ ಕೈ ಹಿಡಿಯುತ್ತಿದ್ದಾರೆ. ಇವರಿಬ್ಬರ ಸುಂದರವಾದ ಫೋಟೋವನ್ನು ಡಿಸೆಂಬರ್‌ 25ರಂದು ಸ್ಮೃತಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.  

ಇವರು ಪೋಸ್ಟ್‌ ಮಾಡಿದ ಮೊದಲ ಫೋಟೋದಲ್ಲಿ ಅರ್ಜುನ್‌ ಭಲ್ಲಾ ಅವರು ಸ್ಮೃತಿ ಇರಾನಿ ಪುತ್ರಿ ಶಾನೆಲ್‌ ಅವರಿಗೆ ಪ್ರೇಮ ನಿವೇದನೆ ಮಾಡುತ್ತಿರುವ ಫೋಟೋ ಇದೆ. ಈ ಫೋಟೋದಲ್ಲಿ ಅರ್ಜುನ್‌ ಹಾಗೂ ಶಾನೆಲ್‌ ಇಬ್ಬರು ನಗುತ್ತಾ ಫೋಟೋಗೆ ಫೋಸ್‌ ಕೊಟ್ಟಿದ್ದಾರೆ. ನಮ್ಮ ಹೃದಯವನ್ನು ಗೆದ್ದಿರುವ ಅರ್ಜುನ್‌ ಭಲ್ಲಾ ಅವರಿಗೆ ನಮ್ಮ ಹುಚ್ಚು ಕುಟುಂಬಕ್ಕೆ(madcap family) ಸ್ವಾಗತ. ನಿಮಗೆ ನಾವು ಆಶೀರ್ವಾದಿಸುತ್ತಿದ್ದೇವೆ. ನೀವು ಹುಚ್ಚು ಮನುಷ್ಯನಂತ (crazy man) ಮಾವನೊಂದಿಗೆ ಹಾಗೂ ಅದಕ್ಕಿಂತಲೂ ಕೆಟ್ಟ ಅತ್ತೆಯ ಜೊತೆ ವ್ಯವಹರಿಸಬೇಕಾಗುತ್ತದೆ. ಈ ಬಗ್ಗೆ ನಾನು ಅಧಿಕೃತವಾಗಿ ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ದೇವರು ಒಳ್ಳೆದು ಮಾಡಲಿ ಎಂದು ತಮಾಷೆಯಾಗಿ ಬರೆದು ಮಗಳು ಆಳಿಯನಿಗೆ ಆಶೀರ್ವಾದ ಮಾಡಿದ್ದಾರೆ. 

 

ಇದಕ್ಕೆ ಕಾಮೆಂಟ್‌ ವಿಭಾಗದಲ್ಲಿ ಶುಭಾಶಯಗಳ ಸುರಿಮಳೆಯೇ ಬಂದಿದೆ. ಏಕ್ತಾ ಕಪೂರ್‌ (Ekta Kapoor), ಮೌನಿ ರಾಯ್‌ (Mouni Roy)  ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಸ್ಮೃತಿ ಇರಾನಿಯವರಿಗೆ ಜೊಹ್ರಾ(Zohr), ಜೊಯಿಸ್‌(Zoish) ಹಾಗೂ ಶಾನೆಲ್‌ ಸೇರಿ ಮೂವರು ಮಕ್ಕಳಿದ್ದಾರೆ.

ಅಮ್ಮನ ಕೈಯಿಂದ ಬೀಳುವ ಏಟೇ ಸಾಕು ಯಾವ ಮನೋತಜ್ಞರು ಬೇಡ... Smriti Irani ಪೋಸ್ಟ್‌ ನೋಡಿ  

ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆಕ್ಟಿವ್ ಆಗಿರುವ ಕೇಂದ್ರ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ತಮಾಷೆಯಾದ ಫೋಟೋವೊಂದನ್ನು ಶೇರ್‌ ಮಾಡಿದ್ದರು. ಇದನ್ನು ಅವರ ತಾಯಿ ಅವರಿಗೆ ಕಳುಹಿಸಿದ್ದರೆಂದು ಸ್ಮೃತಿ ಇರಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.. 1980ರ ದಶಕದ ಮಕ್ಕಳು ಆಗಿನ ಕಾಲದಲ್ಲಿ ಹೇಗೆ ಬೆಳೆಯುತ್ತಿದ್ದರು. ಆಗ ಕುಟುಂಬದ ವಾತಾವರಣ ಹೇಗಿತ್ತು, ಅಮ್ಮಂದಿರು ಹೇಗಿದ್ದರು ಎಂಬುದನ್ನು ಈ ಒಂದು ಫೋಟೋದಲ್ಲಿ ಕಂಡು ಕೊಳ್ಳಬಹುದು. ಸ್ಮೃತಿ ಇರಾನಿ ಶೇರ್‌ ಮಾಡಿದ ಈ ಫೋಟೋ ನೋಡಿ ತುಂಬಾ ಜನ ಇನ್ಸ್ಟಾಗ್ರಾಮ್‌ (Instagram) ಬಳಕೆದಾರರು ತಾವು ಕೂಡ ಇಂತಹ ಸ್ಥಿತಿ ಅನುಭವಿಸಿದ್ದಾಗಿ ಕಾಮೆಂಟ್‌ ಮಾಡಿದ್ದಾರೆ. ಜೊತೆಗೆ ನಮ್ಮ ಅಮ್ಮನೂ ಹೀಗೆ ಎಂದು ಗತಕಾಲದ ನೆನಪಿಗೆ ಇಳಿದು ಬಂದಿದ್ದಾರೆ. 

ಚಮ್ಮಾರ ಕೇಳಿದ್ದು ಹತ್ತು, ಸ್ಮೃತಿ ಇರಾನಿ ಕೊಟ್ಟದ್ದು ನೂರು

ನಾನು ಚಿಕ್ಕವಳಿದ್ದಾಗ ನಮ್ಮ ಅಮ್ಮ  ಮಕ್ಕಳು ಕಿರಿಕಿರಿ ಮಾಡುತ್ತಾರೆಂದು ನನ್ನನ್ನು ಮನೋವೈದ್ಯರ  (psychologist)ಬಳಿ ಕರೆದೊಯ್ಯುತ್ತಿರಲಿಲ್ಲ. ನನ್ನ ಅಮ್ಮ ಒಂದು ಏಟು ನೀಡಿ ನನ್ನ ಮೂಲಾಧಾರ ಚಕ್ರವನ್ನು ಜಾಗೃತಗೊಳಿಸುತ್ತಿದ್ದಳು. ನನ್ನ ಕರ್ಮವನ್ನು ಸ್ಥಿರ ಗೊಳಿಸುತ್ತಿದ್ದಳು ಎಂದು ಇಂಗ್ಲೀಷ್‌ನಲ್ಲಿ ಬರೆದಿರುವ ಫೋಟೋವನ್ನು ಸ್ಮೃತಿ ಇರಾನಿ ಶೇರ್‌ ಮಾಡಿದ್ದರು. ನನ್ನ ಅಮ್ಮ ಈ ಫೋಟೋವನ್ನು ಖುಷಿಯಿಂದ ನನ್ನೊಂದಿಗೆ ಶೇರ್‌ ಮಾಡಿದ್ದಾಳೆ. ಯಾರ ಯಾರ ತಾಯಂದಿರು ಹೀಗೆ  ಮಾಡಿದ್ದಾರೆ ಅಂತವರು ದಯವಿಟ್ಟು ತಮ್ಮ ಕೈಗಳನ್ನು ಎತ್ತಿ ಎಂದು ಸ್ಮೃತಿ ಬರೆದುಕೊಂಡಿದ್ದರು.

ಕಾಂಮೆಂಟ್‌ ಸೆಕ್ಷನ್‌ನಲ್ಲಿ ಬಹುತೇಕ ಜನ ಸ್ಮೃತಿ ಇರಾನಿ (Smriti Irani) ಅವರ ಈ ಫೋಟೋಗೆ ಸೈ ಎಂದಿದ್ದು, ನಮಗೂ ಇದೇ ಅನುಭವ ಆಗಿದೆ ಎಂದಿದ್ದಾರೆ. 

 

click me!