IndiGo Airlines Flight : ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!

By Kannadaprabha NewsFirst Published Dec 26, 2021, 9:08 AM IST
Highlights
  • ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್‌!
  • ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸುವ ವಿಮಾನಯಾನಿಗಳಿಗೆ ಶನಿವಾರ ಅಚ್ಚರಿ 

ಮಂಗಳೂರು (ಡಿ.26): ಮುಂಬೈನಿಂದ (Mumbai)  ಮಂಗಳೂರಿಗೆ ಪ್ರಯಾಣಿಸುವ ವಿಮಾನಯಾನಿಗಳಿಗೆ (Flight) ಶನಿವಾರ ಅಚ್ಚರಿ ಕಾದಿತ್ತು. ವಿಮಾನ ಮುಂಬೈ ವಿಮಾನ (Plane) ನಿಲ್ದಾಣದಿಂದ ಹೊರಡುವ ವೇಳೆಗೆ ವಿಮಾನದ ಪೈಲಟ್‌ ‘ಮಾತೆರೆಗ್ಲಾ ಸೊಲ್ಮೆಲು’ ಎಂದು ತುಳು (Tulu) ಭಾಷೆಯಲ್ಲಿ ಅನೌನ್ಸ್‌ ಮೆಂಟ್‌ ಮಾಡುವ ಮೂಲಕ ಪ್ರಾದೇಶಿಕ ಭಾಷಾ ಪ್ರೇಮ ಮೆರೆದಿದ್ದಾರೆ.

ಮುಂಬೈನಿಂದ (Mumbai) ಮಂಗಳೂರಿಗೆ ಸಂಚರಿಸಿದ ಇಂಡಿಗೋ (Indigo) ವಿಮಾನದ ಉಡುಪಿ (Udupi) ಮೂಲದ ಪೈಲಟ್‌ ಪ್ರದೀಪ್‌ ಪದ್ಮಶಾಲಿ ಅನೌನ್ಸ್‌ಮೆಂಟ್‌ ಮೂಲಕ ತುಳು ಭಾಷೆಗೆ ಗೌರವ ಸಲ್ಲಿಸಿದ್ದಾರೆ. ಎಲ್ಲರಿಗೂ ನಮಸ್ಕಾರ ಎನ್ನುತ್ತಾ ಕಾಕ್‌ ಪಿಟ್‌ನಿಂದ ತುಳುವಿನಲ್ಲೇ (Tulu) ಮಾತು ಆರಂಭಿಸಿದ ಪೈಲಟ್‌, ಇನ್ನು 1 ಗಂಟೆ 5 ನಿಮಿಷಕ್ಕೆ ಮಂಗಳೂರು ತಲುಪುತ್ತೇವೆ. ದಯಮಾಡಿ ಎಲ್ಲರೂ ಆರಾಮವಾಗಿದ್ದು ಸಹಕರಿಸಬೇಕು. ಈ ವಿಮಾನ ಪ್ರಯಾಣದ ಖುಷಿ ಅನುಭವಿಸಬೇಕು. ಇಂದು ನಮ್ಮೊಂದಿಗೆ ಪ್ರಯಾಣಿಸಲು ಮನಸ್ಸು ಮಾಡಿದ್ದಕ್ಕೆ ನಿಮಗೆಲ್ಲ ನನ್ನ ಹೃದಯಾಂತರಾಳದ ನಮಸ್ಕಾರ ಎಂದಿದ್ದಾರೆ.

ಬಳಿಕ ಇಂಗ್ಲಿಷ್‌ನಲ್ಲಿ ಮಾತು ಮುಂದುವರಿಸಿ, ನಾನೀಗ ಸ್ಥಳೀಯವಾಗಿ, ದಕ್ಷಿಣ ಕರ್ನಾಟಕದ (karnataka) ಭಾಷೆ ತುಳುವಿನಲ್ಲಿ ಮಾತನಾಡಿದೆ ಎಂದಿದ್ದಾರೆ. ಪೈಲಟ್‌ ಪ್ರದೀಪ್‌ ಪದ್ಮಶಾಲಿ ಅವರ ತುಳು ಭಾಷೆಯ ಅನೌನ್ಸ್‌ಮೆಂಟ್‌ ವಿಡಿಯೋ ವೈರಲ್‌ ಆಗಿದೆ.

ತುಳುನಾಡ ಸಮರ ಕಲೆ : 

ಕನಸು ಪ್ರತಿಯೊಬ್ಬ ವ್ಯಕ್ತಿಯ ಆಸ್ತಿ, ಯಾರಿಂದಲೂ ಈ ಆಸ್ತಿಯನ್ನು ಕಸಿದುಕೊಳಲು ಸಾಧ್ಯವಿಲ್ಲ. ಕನಸಿನ ದಾರಿಯಲ್ಲಿ ನೂರಾರು ಕಷ್ಟಗಳು, ಸಾವಿರಾರು ಸವಾಲುಗಳು ಎದುರಾಗುತ್ತವೆ. ಅವುಗಳನ್ನೆಲ್ಲ ದಾಟಿ ಮುಂದೆ ನಡೆದರೆ, ಕಠಿಣ ಪರಿಶ್ರಮದ ಪ್ರತಿಫಲ ನಮ್ಮದಾಗುತ್ತದೆ . ಕನಸನ್ನು ನನಸಾಗಿಸುವಲ್ಲಿ ಹಿಡಿದ ಪಟ್ಟನ್ನು ಬಿಡದೆ, ಕೊನೆಗೂ  ಸಾಧನೆಯ ಮೆಟ್ಟಿಲೇರಿದ ವ್ಯಕ್ತಿಯೇ ವಿಕೀತ್ ಎಂ.

ಮಾರ್ಷಲ್ ಆರ್ಟ್ಸ್ ( Martial arts) ಮತ್ತು ಪ್ರವಾಸಿಗನಾಗಬೇಕೆಂಬ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಇವರು ಅನೇಕ ಸಾಹಸಮಯ ಕ್ರೀಡೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಶಸ್ತಿಗಳ ಕಿರೀಟವನ್ನೇ ಮುಡಿಗೇರಿಸಿಕೊಂಡಿದ್ದಾರೆ .

ವಿಕೀತ್ ಮೂಲತಃ ದಕ್ಷಿಣ ಕನ್ನಡ (Daksina Kannada) ಜಿಲ್ಲೆಯ ಸುರತ್ಕಲ್ ನವರು ದೇಶ ವಿದೇಶಗಳಲ್ಲಿ ಸಾಹಸಮಯ ಕಲೆಯ ಮೂಲಕ ಜನರ ಗಮನ ಸೆಳೆದ ಇವರು ಕೆ.ಮಂಜುನಾಥ್ ಮತ್ತು ಹೇಮಾವತಿ. ಕೆ ದಂಪತಿಯ ಪುತ್ರ. 

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದಿರುವ ಇವರು ತಮ್ಮ (Education) ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವನ್ನು ವಿದ್ಯಾದಾಹಿನಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುರತ್ಕಲ್, ಕಾಲೇಜ್ ಶಿಕ್ಷಣವನ್ನ ಗೋವಿಂದ ದಾಸ್, ಕೆ. ಪಿ. ಟಿ ಯಲ್ಲಿ  ಡಿಪ್ಲೊಮಾ ಇನ್ ಮೆಕಾನಿಕ್  ಹಾಗೂ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಗ್ ನಲ್ಲಿ  ಪಡೆದಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ  ಮಾರ್ಷಲ್ ಆರ್ಟ್ಸ್ ಕ್ಷೇತ್ರದಲ್ಲಿ ಆಸಕ್ತಿ ಇಟ್ಟುಕೊಂಡಿದ್ದ ಕಾರಣ, ಆರನೇ ತರಗತಿಯಲ್ಲಿರುವಾಗಲೇ ಕರಾಟೆ ಕಲಿಯುತ್ತಾ ಹತ್ತನೇ ತರಗತಿಯಲ್ಲಿ ಬ್ಲಾಕ್ ಬೆಲ್ಟ್ ಕೂಡ ಪಡೆದು ಜಿಲ್ಲೆ ,ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಗೆದ್ದರು. ಇದು ಇವರ  ಮೊದಲ ಗೆಲುವಿನ ಮೆಟ್ಟಿಲಾಗಿತ್ತು.

ಕಾಲೇಜ್ ನಲ್ಲಿರುವಾಗಲೇ ಹೈದರಾಬಾದ್ ನಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿ ನ್ಯಾಷನಲ್ ಅವಾರ್ಡ್ ಪಡೆದರು. ಇವರ ಬಹು ದೊಡ್ಡ ಕನಸು ಮಾರ್ಷಿಯಲ್ ಆರ್ಟ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬುವುದು. ಇದಕ್ಕಾಗಿ ಬಾಲ್ಯದಿಂದಲೇ ಕನಸ್ಸಿನ ಹಕ್ಕಿಗೆ ರೆಕ್ಕೆ ಕಟ್ಟಲು ಶುರುಮಾಡಿದರು. ವೃತಿಯಲ್ಲಿ ಎಂಜಿನಿಯರ್ ಆಗಿದ್ದ ಇವರು ದುಬೈನಲ್ಲಿ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಕ್ರೀಡೆಗೆ ಸಂಬಂಧ ಪಟ್ಟ ತರಬೇತಿಯನ್ನು ಪಡೆಯುತ್ತಾ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. 

ಗುರುಗಳ ಮಾರ್ಗದರ್ಶನದ ದಾರಿಯಲ್ಲಿ ಸಾಧಿಸಬೇಕೆಂಬ ಛಲದ ಬರದಲ್ಲಿ ಸಾಗುತ್ತಿರುವ ಇವರಿಗೆ  ಮಾರ್ಗದರ್ಶನ ನೀಡಿ ಮುನ್ನಡೆಸುತ್ತಿರುವ ಗುರುಗಳಾದ ಟರ್ಕಿಯ ಸಿಜೋ, ಯುಕ್ಸೆಲ್ ಯಿಲ್ಮಜ್ ,
ದುಬೈ ಪೊಲೀಸ್ ತರಬೇತಿಗಾರರಾದ ಅಬ್ದುಲ್ ಜಲೀಲ್, ಫ್ರೆಂಚ್ ಬಾಕ್ಸಿಂಗ್ ಸೆಕ್ರೆಟರಿ ಸಿವಶ್, ಮುಂತಾದವರ ಮಾರ್ಗದರ್ಶನದಲ್ಲಿ, 2017ರಲ್ಲಿ ಏಷಿಯನ್ ಫೆಡರೇಶನ್ ನಿಂದ ಶ್ರೀಲಂಕಾಕ್ಕೆ ಹೋಗಲು ಅವಕಾಶ ಗಳಿಸಿಕೊಂಡರು.

'ಬೆನ್ನು ತಟ್ಟಿ ಪ್ರೋತ್ಸಾಹಿಸಿ ಸಹಾಯಸ್ತ ನೀಡಿದ ದುಬೈಯ ಮ್ಯಾನೇಜಿಂಗ್ ಡೈರೆಕ್ಟರ್ ಸೇಫ್( safe)  ಲೈನ್ ಗ್ರೂಪ್ ಆಫ್ ಕಂಪನೀಸ್ ನ ಅಬೂಬಕ್ಕರ್ ಮತ್ತು  ಕರ್ನಾಟಕ NRI ಯ ಪ್ರೆಸಿಡೆಂಟ್ ಪ್ರವೀಣ್ ಕುಮಾರ್ ಶೆಟ್ಟಿ  ಇವರ ಸಹಾಯಕ್ಕೆ ಕೃತಜ್ಞನಾಗಿರುವೆ' ಎಂದು ಸಂತೋಷ ವ್ಯಕ್ತ ಪಡಿಸುತ್ತಾರೆ.  ಸಾಧನೆಯ ಹಾದಿಯಲ್ಲಿ ಕಂಡ ಕನಸನ್ನು ಒಂದಲ್ಲ ಒಂದು ದಿನ ನನಸಾಗಿಸುವೆ ಎಂಬ ನಂಬಿಕೆ ಛಲದೊಡನೆ ಮುಂದುವರೆಯುತ್ತಿರುವ ಇವರು   2017ರಲ್ಲಿ ಶ್ರೀಲಂಕಾದಲ್ಲಿ  ನಡೆದ ಏಷಿಯನ್ ಚಾಂಪಿಯನ್ ಶಿಪ್  ಹಾಂಕಾಂಗ್(hongkong)ನಲ್ಲಿ ನಡೆದ ಇಂಟರ್ನ್ಯಾಷನಲ್ ವರ್ಲ್ಡ್ ಚಾಂಪಿಯನ್ಶಿಪ್ ಕುಂಗ್ ಫು ( kung fu), ವಿಭಾಗದಲ್ಲಿ ಗೋಲ್ಡ್ ಮೆಡಲ್ ಗೆದ್ದರು. ಬೇರೆ ಬೇರೆ ದೇಶಗಳಿಂದ ಅವಕಾಶಗಳು  ಇವರನ್ನ ಕೈ ಬೀಸಿ ಕರೆಯುವಂತೆ ಮಾಡಿತು.

ವೃತಿ ಜೀವನದಲ್ಲಿ ಮೆಕಾನಿಕ್ ಎಂಜಿನಿಯರ್ ಆಗಿರುವ ಇವರು ಈ ಕ್ಷೇತ್ರದಲ್ಲೂ ಅನೇಕ ಸಾಧನೆಗಳನ್ನು ಮಾಡಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹೊರದೇಶಗಳಲ್ಲಿ ಸಾಧಿಸುತ್ತಿರುವ ಇವರು ತುಳುನಾಡಿನವರಾಗಿ  ನಮ್ಮ ನೆಲ ನಮ್ಮ ಊರು ಎಂಬ ಅಪಾರವಾದ ಪ್ರೀತಿ , ಗೌರವವನ್ನು ಇಟ್ಟು ಕೊಂಡಿರುವ ಕಾರಣ 'ತುಳುನಾಡ ಟ್ರಾವೆಲರ್ 'ಎಂದು ಯುಟ್ಯೂಬ್ ಚಾನೆಲ್ ತೆರೆದು ತುಳು ಲಿಪಿಯನ್ನ ಒಳಗೊಂಡ ಲೋಗೋ ಅಳವಡಿಸಿ ದೈವದ ನಾಡಿನ ಸಾಂಸ್ಕೃತಿಕ ಮತ್ತು ಕ್ರೀಡೆಗೆ ಸಂಬಂಧಪಟ್ಟ ವಿಚಾರ ಗಳನ್ನು ರಾಜ್ಯ ದೇಶ ವಿದೇಶಗಳಿಗೆ ತಿಳಿಯುವಂತೆ ಮಾಡುವ ಉದ್ದೇಶದಿಂದ ಪ್ರಾಮುಖ್ಯತೆ ಪಡೆದ  ಹುಲಿವೇಷ, ಕಂಬಳ , ಕೋಳಿ ಅಂಕ , ಮುಂತಾದ ಕ್ರೀಡೆಗಳಿಗೆ ಸಂಬಂಧ ಪಟ್ಟ ಮಾಹಿತಿ ಜೊತೆಗೆ ವೀಡಿಯೋ ಸಾಕ್ಷ್ಯಚಿತ್ರಗಳನ್ನು ತಯಾರಿಸಿರುತ್ತಾರೆ.

ತುಳುನಾಡ ಕ್ರೀಡಾಪಟುಗಳ ಕ್ರೀಡಾ ಸಾಮರ್ಥ್ಯದ ವಿಡಿಯೋ, ಹಾಗೂ ಮಂಗಳೂರಿನಲ್ಲಿ ನಡೆಯುವ ಪಾರಿವಾಳ ಸ್ಪರ್ಧೆಯ  ಇಪತ್ತು  ಸಾಕ್ಷ್ಯಚಿತ್ರವನ್ನ ಸೆರೆಹಿಡಿದು ಇಡೀ ದೇಶವೇ ನೋಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವೈರಲ್ ಆಗಿ ಬಹುತೇಕ ಪ್ರತಿಕ್ರಿಯೆಗಳು , ಪ್ರಶಂಸೆಯ ಮಾತುಗಳು ಇವರ  ಪ್ರಯತ್ನಕ್ಕೆ ಶಕ್ತಿಯನ್ನ ತುಂಬಿದೆ ಎಂದು ಸಂತೋಷದಿಂದ ಹೇಳುತ್ತಾರೆ. ಒಟ್ಟಿನಲ್ಲಿ ತುಳುನಾಡಿನ ಜನರ ಪ್ರಚಲಿತ ದಿನಚರಿಯನ್ನು ಅಚ್ಚುಕಟ್ಟಾಗಿ ಜನರಿಗೆ ತಿಳಿಸಿಕೊಡುವ ಪ್ರಯತ್ನ ಇವರದು.

click me!