Round Up 2021 : ಇಲ್ಲಿವೆ ಇಂಟರ್‌ನೆಟ್‌ನಲ್ಲಿ ಸೋಜಿಗ ಮೂಡಿಸಿದ 2021ರ ವಿದ್ಯಮಾನಗಳು

By Suvarna News  |  First Published Dec 26, 2021, 12:13 PM IST

ಗಾಜಿಯಾಬಾದ್ ಗುರುದ್ವಾರವೊಂದು 'ಆಮ್ಲಜನಕ ಪೂರೈಕೆ ಘಟಕ' ತೆರೆಯುವುದರೊಂದಿಗೆ ಸ್ಪೈಡರ್‌ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲೆಂಡ್ ತನ್ನ ಸಹೋದರಿಯನ್ನು ಉಳಿಸಿದ ಚಿಕ್ಕ ಹುಡುಗನಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವವರೆಗೆ, ಹಲವಾರು ಸಕಾರಾತ್ಮಕ ಸುದ್ದಿಗಳು ವರ್ಷದಲ್ಲಿ ನಮ್ಮ ಉತ್ಸಾಹವನ್ನು ಹೆಚ್ಚಿಸಿವೆ.


ನವದೆಹಲಿ( ಡಿ.26) ಕೋವಿಡ್‌ ಸೋಂಕು ಇದರ ಪರಿಣಾಮವಾಗಿ ಬಂದ ಲಾಕ್‌ಡೌನ್‌ಗಳು,  ಅದರೊಂದಿಗೆ ಹೊಸ ಉದ್ಯೋಗ ಪ್ರಮಾಣಗಳ ಇಳಿಕೆಯಿಂದಾಗಿ ಆರ್ಥಿಕ ಕುಸಿತ, ಜೊತೆಗೆ ಕೋವಿಡ್‌ನ ಹೊಸ ಹೊಸ ರೂಪಾಂತರಿಗಳು ಈ ಪ್ರಪಂಚವನ್ನು ಹಿಡಿತದಲ್ಲಿಟ್ಟುಕೊಂಡ ಪರಿಣಾಮ 2021 ರ ವರ್ಷದಲ್ಲಿ ಜನರನ್ನು ಖುಷಿ ಪಡಿಸುವ ಒಳ್ಳೆಯ ಸುದ್ದಿಗಳು ಒಳ್ಳೆಯ ಘಟನೆಗಳ ಕಡಿಮೆಯಾಗಿದ್ದವು ಅದಾಗ್ಯೂ ಪ್ರಪಂಚಾದಾದ್ಯಂತ ನಡೆದ ಕೆಲವು ಘಟನೆಗಳು ನಮ್ಮನ್ನು ಖುಷಿ ಪಡಿಸಿದವು.  2021ರಲ್ಲಿಜನರಲ್ಲಿ ಆಶಾಭಾವ ಮೂಡಿಸಿದ ಆ ಕೆಲವು ಘಟನೆಗಳ ಮೆಲುಕು ನೋಟ ಇಲ್ಲಿದೆ. 

ಸಹೋದರಿಯ ರಕ್ಷಿಸಿದ ಹುಡುಗನಿಗೆ ಸೂಪರ್ ಹೀರೋ ರೀತಿ ಸ್ವಾಗತ ಕೋರಿದ ಟಾಮ್ ಹಾಲೆಂಡ್ 
ಬ್ರಿಡ್ಜರ್ ವಾಕರ್ (Bridger Walker) ಎಂಬ 6 ವರ್ಷದ ಬಾಲಕ ತನ್ನ ಚಿಕ್ಕ ತಂಗಿಯನ್ನು ನಾಯಿ ದಾಳಿಯಿಂದ ರಕ್ಷಿಸಿದ್ದಕ್ಕಾಗಿ ಜುಲೈನಲ್ಲಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಆಗಿದ್ದರು.  ಮಾರ್ವೆಲ್ ಸೂಪರ್ ಹೀರೋಗಳು ಸಹ ಈ ಬಾಲಕನ್ನು ಗೌರವಿಸಿದರು. ಆದರೆ ಸ್ಪೈಡರ್ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲೆಂಡ್ (Tom Holland)ಅವರಿಗೆ ನಿಜವಾಗಿಯೂ ವಿಶೇಷವಾದ ಉಡುಗೊರೆಯನ್ನು ನೀಡಿದರು. 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಸೆಟ್‌ನಲ್ಲಿ ಇಡೀ ಪಾತ್ರವರ್ಗದೊಂದಿಗೆ  ಅವರನ್ನು ಸುತ್ತಾಡಿಸಿ ಪರಿಚಯ ಮಾಡಿಸಿದ್ದರು. 

Tap to resize

Latest Videos

undefined

ಉಳಿದ ಆಹಾರವನ್ನು ನಿರ್ಗತಿಕರಿಗೆ ನೀಡುವ ಬೆಂಗಾಲಿ ಮಹಿಳೆ 
ಮದುವೆ ಸಮಾರಂಭಗಳಲ್ಲಿ ಉಳಿದ ಆಹಾರವನ್ನು ಬಂಗಾಳದ ಮಹಿಳೆ(Bengal woman)ಯೊಬ್ಬರು ಸಮಾಜದಲ್ಲಿರುವ ನಿರ್ಗತಿಕರಿಗೆ ವಿತರಿಸುವ ಮೂಲಕ ಇಂಟರ್‌ನೆಟ್‌ನಲ್ಲಿ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಸೊಗಸಾದ ಉಡುಗೆ ಧರಿಸಿ ಸುಂದರವಾಗಿ ಸಿಂಗರಿಸಿಕೊಂಡ ಮಹಿಳೆಯೊಬ್ಬರು ಮದುವೆಯ ಆರತಕ್ಷತೆಯಲ್ಲಿ ಉಳಿದ ಆಹಾರವನ್ನು ಪಶ್ಚಿಮ ಬಂಗಾಳ(West Bengal)ದ ರೈಲ್ವೆ ಸ್ಟೇಷನ್ ಒಂದರ ಪ್ಲಾಟ್‌ಫಾರ್ಮ್‌ನಲ್ಲಿ ಬಕೆಟ್‌ಗಳಲ್ಲಿ ಇಟ್ಟುಕೊಂಡು ನೀಡುತ್ತಿರುವುದು ಎಲ್ಲರ ಗಮನ ಸೆಳೆದಿತ್ತು.

ಕ್ಯಾನ್ಸರ್‌ ಗೆದ್ದು ಬಂದ ಬಾಲಕಿ
ಕ್ಯಾನ್ಸರ್‌ ಗೆದ್ದು ಬಂದ ಯುಕೆ(UK)ಯ ಹುಡುಗಿಯೊಬ್ಬಳು ತಾನು ಸಾವು ಗೆದ್ದು ಬಂದ ಆಸ್ಪತ್ರೆಯ ಸಮೀಪದಲ್ಲೇ ಇದ್ದ ಶಾಲೆಗೆ ಸೇರ್ಪಡೆಯಾಗುತ್ತಾಳೆ. ಈ ವೇಳೆ ಬದುಕಿನಲ್ಲಿ ಬಂದ ದೊಡ್ಡ ಆಘಾತವನ್ನು ಎದುರಿಸಿ ಮತ್ತೆ ಹೊಸ ಬದುಕು ಆರಂಭಿಸಿದ ಮಗಳಿಗೆ ಶುಭ ಹಾರೈಸಿ ಆನ್‌ಲೈನ್‌ನಲ್ಲಿ  ಈ ಬಗ್ಗೆ ಪೋಸ್ಟ್‌ ಮಾಡಿದ್ದರು. ಇದು ಕೂಡನೆಟ್ಟಿಗರ ಮನ ಗೆದ್ದಿದ್ದಲ್ಲದೇ. ಬಾಲಕಿ ಆಸ್ಪತ್ರೆಯಲ್ಲಿದ್ದಾಗ ಆಕೆಯನ್ನು ಆರೈಕೆ ಮಾಡಿದ ದಾದಿಯೊಬ್ಬರು ಅವಳನ್ನುಮತ್ತೆ ಭೇಟಿ ಮಾಡುವಂತ ಅವಕಾಶವನ್ನು ಒದಗಿಸಿ ಕೊಟ್ಟಿತ್ತು.

ಪ್ರತಿಭಾವಂತ  ಹುಡುಗನಿಗೆ ನೀಡಿದ ಭರವಸೆ ಈಡೇರಿಸಿದ ಆನಂದ್ ಮಹೀಂದ್ರಾ

ಮಣಿಪುರದ ಹೀರೋಕ್‌ (Heirok)ನ ಪ್ರೇಮ್ ನಿಂಗೋಂಬಮ್ (Prem Ningombam) ಎಂಬ ಯುವಕ, ಬೇಡದ ನಿರುಪಯುಕ್ತ ವಸ್ತುಗಳನ್ನು (scrap items) ಅದ್ಭುತವಾದ ವಸ್ತುಗಳಾಗಿ ಪರಿವರ್ತಿಸುವ ಪ್ರಭಾವಶಾಲಿ ಸಾಮರ್ಥ್ಯದೊಂದಿಗೆ ಈ ವರ್ಷದ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದರು. ಈತನ ಸಾಮರ್ಥ್ಯ ನೋಡಿ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಅವರು ತಮ್ಮ ಕಂಪನಿಯು ಈ ಪ್ರತಿಭಾವಂತ ಹುಡುಗನಿಗೆ ಅವನ ಕನಸುಗಳನ್ನು ಮುಂದುವರಿಸಲು ಸಹಾಯ ಮಾಡುವ ಜೊತೆ ಆತನ ಒಡಹುಟ್ಟಿದವರ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದ್ದರು. ನಂತರ ಈ ವರ್ಷದ ನವೆಂಬರ್‌ನಲ್ಲಿ ಅವರು ತಮ್ಮ ಭರವಸೆಯನ್ನು ಪೂರೈಸಿದ್ದಾರೆ ಎಂದು ತಿಳಿದು ಬಂದಿತ್ತು. 


ಪ್ಯಾರಾಲಿಂಪಿಕ್ಸ್‌ನಲ್ಲಿ  ಚಿನ್ನದ ಪದಕ ಪಡೆದ ಯುವಕನಿಗೆ ಭಾವುಕ ಪತ್ರ

ಟೋಕಿಯೊ 2020 ರ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಹೈ ಜಂಪ್ T63 ವಿಭಾಗದಲ್ಲಿಅಮೆರಿಕಾದ ಸ್ಯಾಮ್ ಗ್ರೂವ್ (Sam Grewe)ಅವರು ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆ ಮಾಡುವ ಮೊದಲು ಕಾರ್ಯಕ್ರಮ ಸಂಘಟಕರು ಆತನಿಗೆ ಪತ್ರವೊಂದನ್ನು ನೀಡಿದ್ದರು. ಇದು  13 ವರ್ಷದ ಹುಡುಗ ಹರುಕಿ (Haruki)ಯ ತಂದೆ ಮಸಾಕಿ ಕಾಂಡೋ ( Masaki Kando) ಅವರು ಬರೆದ ಪತ್ರವಾಗಿತ್ತು. ಬಾಲಕ ಹರುಕಿ  ತಮ್ಮ 10 ನೇ ವಯಸ್ಸಿನಲ್ಲಿ ತಮ್ಮ ಬಲ ಮೊಣಕಾಲಿನ ಆಸ್ಟಿಯೊಸಾರ್ಕೊಮಾದಿಂದ (osteosarcoma) ಬಳಲುತ್ತಿದ್ದರು ಅಲ್ಲದೇ  23 ವರ್ಷದ ಅಮೆರಿಕನ್ ಅಥ್ಲೀಟ್‌ ಸ್ಯಾಮ್ ಗ್ರೂವ್‌ರಂತೆ 'ರೋಟೇಶನ್ ಪ್ಲಾಸ್ಟಿ' ಹೆಸರಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದರು.

ಸಹಾಯ ಮಾಡಿದ ಟ್ರಕ್ ಚಾಲಕನ ನೆನೆದ ಮೀರಾಬಾಯಿ ಚಾನು 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ( Mirabai Chanu)ಅವರು ತನಗೆ ಸಹಾಯ ಮಾಡಿದ ಟ್ರಕ್ ಡ್ರೈವರ್‌ಗಳನ್ನು ಅಭಿನಂದಿಸುವಾಗ ಭಾವುಕರಾದರು. ಮಣಿಪುರದ ಯುವ ಅಥ್ಲೀಟ್  ಮೀರಾಬಾಯಿ ಚಾನು ಚಿಕ್ಕ ಹಳ್ಳಿಯಲ್ಲಿರುವ ತನ್ನ ಮನೆಯಿಂದ ಸುಮಾರು 30 ಕಿಮೀ ದೂರದ ಇಂಫಾಲ್‌ನಲ್ಲಿರುವ ತನ್ನ ತರಬೇತಿ ಅಕಾಡೆಮಿಗೆ ದಿನಾ ಹೋಗಿ ಬರಲು ಟ್ರಕ್ ಡ್ರೈವರ್‌ಗಳು ಲಿಫ್ಟ್‌ ನೀಡುವ ಮೂಲಕ ಸಹಾಯ ಮಾಡಿದ್ದರು. ಹೀಗಾಗಿ ತನಗೆ ಸಹಾಯ ಮಾಡಿದ್ದ ಟ್ರಕ್‌ ಚಾಲಕರಿಗೆ ಚಾನು ಕೃತಜ್ಞತೆ ಸಲ್ಲಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಿದ್ದರು. 


ಸುಡುವ ಕಾರಿನಿಂದ ದಂಪತಿಯ ರಕ್ಷಿಸಿದ ಜನ
ಈಸ್ಟ್ ಕೌಂಟಿಯ (East County) ಸ್ಯಾನ್ ಡಿಯಾಗೋ (San Diego) ದಲ್ಲಿ ಉರಿಯುತ್ತಿರುವ ವಾಹನದಿಂದ ದಂಪತಿಯನ್ನು ರಕ್ಷಿಸಿದ್ದಕ್ಕಾಗಿ  ಸಾಮಾಜಿಕ ಜಾಲತಾಣಗಳಲ್ಲಿ ಸಮರಿಟನ್‌ಗಳು (ಸಹಾಯ ಮಾಡುವ ಸಮಾನ ಮಾನಸ್ಕರು) ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.  

ಆಮ್ಲಜನಕ ಪೂರೈಕೆ ಘಟಕ ಸ್ಥಾಪಿಸಿದ ಗುರುದ್ವಾರ
ಉತ್ತರಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ (Shri Guru Singh Sabha Gurdwara)ವು ಖಾಲ್ಸಾ ಹೆಲ್ಪ್ ಇಂಟರ್‌ನ್ಯಾಶನಲ್ ಎಂಬ ಎನ್‌ಜಿಒ(NGO) ಜೊತೆಗೆ ಈ ವಿಶಿಷ್ಟವಾದ ಆಮ್ಲಜನಕ ಪೂರೈಕೆ ಘಟಕವನ್ನು ತೆರೆಯಿತು. ಇದು ಕೋವಿಡ್‌ ಸಂದರ್ಭದಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಅನೇಕರ ಜೀವ ಉಳಿಸಲು ಸಹಾಯ ಮಾಡಿದೆ. ಕೋವಿಡ್ -19 ರ ಎರಡನೇ ಅಲೆಯು ಭಾರತದಲ್ಲಿ ಉಲ್ಬಣಗೊಂಡಾಗ ಈ ಸೇವೆಯನ್ನು ಪ್ರಾರಂಭಿಸಲಾಗಿತ್ತು. 


ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ತಾನು ಗರ್ಭಿಣಿ ಎಂಬುದೇ ತಿಳಿಯದ ಮಹಿಳೆ  ಲಾವಿನಿಯಾ  ಲಾವಿ ಮೌಂಗಾ (Lavinia Lavi Mounga) ತನ್ನ ರಜೆಯನ್ನು ಸಂಭ್ರಮಿಸುವ ಸಲುವಾಗಿ ಸಾಲ್ಟ್ ಲೇಕ್ ಸಿಟಿ (Salt Lake City)ಯಿಂದ ಹವಾಯಿಯ ಹೊನೊಲುಲುವಿಗೆ ವಿಮಾನ ಹತ್ತಿದರು. ಆದರೆ ಆಕೆಗೆ ವಿಮಾನದಲ್ಲಿಯೇ ಹೆರಿಗೆಯಾಗಿತ್ತು. ಆರೋಗ್ಯವಂತ ಗಂಡು ರೇಮಂಡ್‌ (Raymond) ಅವರು ಜನ್ಮ ನೀಡಿದ್ದರು. ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ ಇದು ಭಾರಿ ಸುದ್ದಿಯಾಗಿತ್ತು.

ಕೋವಿಡ್ ಸಮಯದಲ್ಲಿ ಉಚಿತ ಆಹಾರ ವಿತರಿಸಿದ ತಾಯಿ-ಮಗ

ಮುಂಬೈನಲ್ಲಿನ ತಾಯಿ ಮಗನ ಜೋಡಿಯು ಕೋವಿಡ್ ಎರಡನೇ ಅಲೆಯ ನಡುವೆ ಅಗತ್ಯವಿರುವವರಿಗೆ ಉಚಿತವಾಗಿ ಆಹಾರವನ್ನು ನೀಡಿದ್ದರು. ಇವರ ಮಾನವೀಯತೆ ಜನರ ಹೃದಯ ಗೆದ್ದಿತ್ತು. ಒಟ್ಟಾಗಿ ಕೋವಿಡ್ -19 ಸಮಯದಲ್ಲಿ ಅವರು 22,000 ಊಟ, 55,000 ರೊಟ್ಟಿಗಳು ಮತ್ತು 6000 ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳನ್ನು ವಿತರಿಸಿದ್ದಾರೆ ಎಂದು ಅವರು ಹ್ಯೂಮನ್ಸ್‌ ಅಫ್‌ ಬಾಂಬೆ (Humans of Bombay)ವೆಬ್‌ಸೈಟ್‌ಗೆ ತಿಳಿಸಿದ್ದರು.


ಪ್ರತಿದಿನ ಡೂಡಲ್  ತಯಾರಿಸಿದ ಹಿರಿಯ ಕಲಾವಿದ
ಸಾಂಕ್ರಾಮಿಕ ಸಮಯದಲ್ಲಿ ಸಮಯವನ್ನು ಕಳೆಯುವ ಸಲುವಾಗಿ  88 ವರ್ಷ ವಯಸ್ಸಿನ ಕಲಾವಿದರೊಬ್ಬರು ಇಡೀ ವರ್ಷ ವಿಸ್ತಾರವಾದ ದೈನಂದಿನ ಡೂಡಲ್‌ಗಳನ್ನು ಬಿಡಿಸಿದ್ದರು. ಕಲಾವಿದ ಸೀಮನ್(Seaman) ಅವರು ಹುಡುಗನಾಗಿದ್ದಾಗಿನಿಂದಲೂ ಚಿತ್ರಕಲೆ ಹವ್ಯಾಸವನ್ನು ಆರಂಭಿಸಿದರು. 

ಇವು ಈ ವರ್ಷ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದ ಕೆಲವು ಸ್ಟೋರಿಗಳಾಗಿವೆ. 

click me!