
ರಾಂಚಿ(ಸೆ.23) ರಸ್ತೆ ಗುಂಡಿ ವಿಚಾರದಲ್ಲಿ ಕರ್ನಾಟಕದಲ್ಲಿ ಆರೋಪ ಪ್ರತ್ಯಾರೋಪಗಳು ತೀವ್ರ ಸ್ಪರೂಪ ಪಡೆದುಕೊಂಡಿದೆ. ಗುಂಡಿ ಮುಚ್ಚುವ ಹಲವು ಡೆಡ್‌ಲೈನ್ ಮುಗಿದು ಹೋಗಿದೆ. ಈ ರಸ್ತೆ ಗುಂಡಿ ಸಮಸ್ಯೆ ಹಲವು ರಾಜ್ಯಗಳಲ್ಲಿದೆ. ಇದೀಗ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಸಂಚರಿಸುತ್ತಿದ್ದ ಕಾರ ರಸ್ತೆ ಗುಂಡಿಯಲ್ಲಿ ಹೂತು ಹೋದ ಘಟನೆ ಜಾರ್ಖಂಡ್‌ನಲ್ಲಿ ನಡೆದೆ. ಭಾರಿ ಮಳೆಯಿಂದಾಗಿ ರಸ್ತೆಯ ಗುಂಡಿಗಳು ನೀರಿನಿಂದ ತುಂಬಿತ್ತು. ಇದೇ ರಸ್ತೆಯಲ್ಲಿ ಸಾಗಿದ ಸಚಿವರ ಕಾರು ಹಿಂಬದಿ ಚಕ್ರ ಗುಂಡಿಯಲ್ಲಿ ಹೂತು ಹೋಗಿದೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇದೀಗ ರಾಜಕೀಯ ಚಟುವಟಿಕೆ ಜೋರಾಗಿದೆ. ಇದರ ನಡುವೆ ಶಿವರಾಜ್ ಸಿಂಗ್ ಚೌವ್ಹಾಣ್ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಹರಗೋರಾದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶಕ್ಕೆ ತೆರಳಿದ ಶಿವರಾಜ್ ಸಿಂಗ್ ಚೌವ್ಹಾಣ್ ಮಳೆಯಲ್ಲಿ ಕೊಡೆ ಹಿಡಿದುಕೊಂಡೆ ಸಮಾವೇಶಕ್ಕೆ ತಲುಪಿದ್ದರು. ಸಮಾವೇಶದ ಸ್ಥಳಕ್ಕೆ ಕಾರಿನಲ್ಲಿ ಆಗಮಿಸಿದ ಸಚಿವರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ವೇದಿಕೆಯತ್ತ ಸಾಗಿದ್ದರು. ಈ ವೇಳೆ ಮಳೆಯಲ್ಲೇ ಹಲವರು ಶಿವರಾಜ್ ಸಿಂಗ್ ಬಳಿ ಬಂದು ಫೋಟೋ ಕ್ಲಿಕ್ಲಿಸಿಕೊಂಡಿದ್ದಾರೆ. ಹಲವರು ಕೈಕುಲುಕಿ ಸಂತಸ ವ್ಯಕ್ತಪಡಿಸಿದ್ದಾರೆ.
ರಸ್ತೆಗುಂಡಿ ಮುಚ್ಚದಿದ್ರೆ ಎಷ್ಟು ಜನ ಸಸ್ಪೆಂಡ್ ಆಗ್ತೀರೋ ಗೊತ್ತಿಲ್ಲ; ಡಿಕೆಶಿ ಖಡಕ್ ವಾರ್ನಿಂಗ್!
ಬೃಹತ್ ಸಮಾವೇಶದಲ್ಲಿ ಜಾರ್ಖಂಡ್ ಜನತೆಯನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌವ್ಹಾಣ್, ಕೇಂದ್ರ ಸರ್ಕಾರದ ಹಲವು ಯೋಜನೆಗಳ ಕುರಿತು ವಿವರಿಸಿದ್ದರು. ಭಾರಿ ಮಳೆಯ ನಡುವೆ ಕಾರ್ಯಕ್ರಮ ಮುಗಿಸಿದ ಶಿವರಾಜ್ ಸಿಂಗ್ ಕಾರಿನಲ್ಲಿ ಹಿಂದಿರುವಾಗ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ರಸ್ತೆಯಲ್ಲಿನ ಗುಂಡಿಗಳು ಕಾಣದಾಗಿದೆ. ಆದರೆ ದೊಡ್ಡ ರಸ್ತೆ ಗಂಡಿಯಲ್ಲಿ ಸಚಿವರು ಸಾಗುತ್ತಿದ್ದ ಕಾರಿನ ಹಿಂಭಾಗದ ಚಕ್ರಗಳು ಹೂತು ಹೋಗಿದೆ.
ತಕ್ಷಣವೇ ಬೆಂಗಾವಲು ವಾಹನ ಪಡೆಯ ಪೊಲೀಸರು, ಅಧಿಕಾರಿಗಳು ಆಗಮಿಸಿ ಸಚಿವರನ್ನು ಕಾರಿನಿಂದ ಸುರಕ್ಷಿತವಾಗಿ ಇಳಿಸಿ ಬೇರೆ ಕಾರಿನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದಾರೆ. ಸಚಿವರ ಕಾರು ರಸ್ತೆ ಗುಂಡಿಯಲ್ಲಿ ಹೂತು ಹೋದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಸರಿಯಾದ ರಸ್ತೆ ಮಾಡಿಲ್ಲ ಎಂದು ಆರೋಪಿಸಿದ್ದರು. ಮತ್ತೆ ಕೆಲವರು ಜಾರ್ಖಂಡ್ ಹೇಮಂತ್ ಸೊರೆನ್ ಸರ್ಕಾರವನ್ನ ಟೀಕಿಸಿದ್ದಾರೆ. ರಾಜ್ಯದ ರಸ್ತೆಗಳು ತುಂಬಾ ಗುಂಡಿ ಬಿದ್ದಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಜೈಲು ಸೇರಿ ಇದೀಗ ಬಿಡುಗಡೆಯಾಗಿರುವ ಮುಖ್ಯಮಂತ್ರಿಯಿಂದ ಇದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.
ದತ್ತಪೀಠದ ರಸ್ತೆ ಗುಂಡಿಮಯ; ಗುದ್ದಲಿ, ಪಿಕಾಸಿ ಹಿಡಿದು ರಸ್ತೆ ರಿಪೇರಿಗೆ ನಿಂತ ಖಾಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ