ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿರುವ ವಿಷಯ ತಿಳಿದ ತಿರುಮಲ ಭಕ್ತರು ಆಘಾತಗೊಂಡಿದ್ದರು. ಇದೀಗ ಶ್ರೀನಿವಾಸನ ಭಕ್ತರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.
ತಿರುಮಲ: ಇಡೀ ದೇಶದ ತುಂಬೆಲ್ಲಾ ತಿರುಪತಿಯಲ್ಲಿ ನೀಡಲಾಗುವ ಲಡ್ಡುವಿನ ಪಾವಿತ್ರ್ಯತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಸ್ವತಃ ಸಿಎಂ ಚಂದ್ರಬಾಬು ನಾಯ್ಡು ಅವರೇ ಈ ಆರೋಪ ಮಾಡಿದ ಬೆನ್ನಲ್ಲೇ ಪ್ರಯೋಗಲಾಯದ ವರದಿಯಲ್ಲಿಯೂ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರೋದು ದೃಢಪಟ್ಟಿತ್ತು. ಈ ಆತಂಕಕಾರಿ ವಿಷಯದ ನಡುವೆಯೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ.
ತೆಲಂಗಾಣದ ಖಮ್ಮಂ ಜಿಲ್ಲೆಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ದೊಂತು ಪದ್ಮಾವತಿ ಎಂಬವರು ಸೆಪ್ಟೆಂಬರ್ 19ರಂದು ತಿರುಮಲಕ್ಕೆ ತೆರಳಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದರು. ದೇವಸ್ಥಾನದಿಂದ ಹಿಂದಿರುಗುವ ವೇಳೆ ಲಡ್ಡು ಪ್ರಸಾದ ತೆಗೆದುಕೊಂಡು ಬಂದಿದ್ದರು. ಭಾನುವಾರ (ಸೆಪ್ಟೆಂಬರ್ 22) ಕುಟುಂಬಸ್ಥರಿಗೆ ಪ್ರಸಾದ ಹಂಚಲು ಹೋದಾಗ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿದೆ ಎಂದು ತೆಲುಗಿನ ಸಮಯಂ ವೆಬ್‌ಸೈಟ್ ವರದಿ ಮಾಡಿದೆ.
ತಿರುಮಲದಲ್ಲಿ ನೀಡಲಾಗುವ ಲಡ್ಡುವನ್ನು ಅತ್ಯಂತ ಪವಿತ್ರ ಎಂದು ಭಕ್ತರು ನಂಬುತ್ತಾರೆ. ಸಾಮಾನ್ಯವಾಗಿ ಲಡ್ಡುವಿನಲ್ಲಿ ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಅನೇಕ ಪದಾರ್ಥಗಳನ್ನು ಹೊಂದಿರುತ್ತದೆ. ಆದರೆ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಕಂಡು ಭಕ್ತರು ಶಾಕ್ ಆಗಿದ್ದಾರೆ. ಇದೀಗ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿರುವ ಲಡ್ಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 2012ರಲ್ಲಿಯೂ ಇದೇ ರೀತಿ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಪತ್ತೆಯಾಗಿದ್ದರ ಬಗ್ಗೆ ವರದಿಯಾಗಿತ್ತು.
ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿ ಕೊಬ್ಬು ಪ್ರಕರಣ: ಎಸ್‌ಐಟಿ ತನಿಖೆಗೆ ಸಿಎಂ ಚಂದ್ರಬಾಬು ಘೋಷಣೆ
ಜುಲೈನಿಂದ ಕಳಪೆ ತುಪ್ಪ ಬಳಸಿಲ್ಲ ಎಂದ ಟಿಟಿಡಿ
ತಿರುಪತಿ ತಿಮ್ಮಪ್ಪನ ದೇಗುಲದ ಲಡ್ಡು ಪ್ರಸಾದ ತಯಾರಿಕೆಗೆ ಜುಲೈ ತಿಂಗಳಿನಿಂದ ನಾವು ಕಳಪೆ ತುಪ್ಪ ಬಳಸಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಮಂಡಳಿ ಸ್ಪಷ್ಟನೆ ನೀಡಿದೆ. ತನ್ಮೂಲಕ ಲಡ್ಡು ಪ್ರಸಾದದ ಕುರಿತು ಭಕ್ತರಲ್ಲಿರುವ ಶಂಕೆಯನ್ನು ತೊಡೆದುಹಾಕಲು ಯತ್ನಿಸಿದೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಸರ್ಕಾರ ಅಧಿಕಾರದಿಂದ ಇಳಿದು ಟಿಡಿಪಿ ನೇತೃತ್ವದ ಚಂದ್ರಬಾಬು ನಾಯ್ಡು ಸರ್ಕಾರ ಈ ವರ್ಷದ ಜೂನ್ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಿತು. ಬಳಿಕ ಟಿಟಿಡಿ ಆಡಳಿತ ಮಂಡಳಿಯೂ ಬದಲಾಯಿತು.
ಜುಲೈ 6ರಂದು ಎರಡು ಕಲಬೆರಕೆ ತುಪ್ಪದ ಟ್ಯಾಂಕರ್ ಹಾಗೂ ಜುಲೈ 12ರಂದು ಇನ್ನೆರಡು ಕಲಬೆರಕೆ ತುಪ್ಪದ ಟ್ಯಾಂಕರ್‌ಗಳು ಬಂದಿದ್ದವು. ಟಿಟಿಡಿಯ ಇತಿಹಾಸದಲ್ಲೇ ಮೊದಲ ಬಾರ ಹೊರಗಿನ ಪ್ರಯೋಗಾಲಯವೊಂದಕ್ಕೆ (ಗುಜರಾತ್‌ನ ಆನಂದ್) ಅದನ್ನು ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ತುಪ್ಪವನ್ನು ಲಡ್ಡು ತಯಾರಿಕೆಗೆ ಬಳಸಿಲ್ಲ. ಆ ಸಮಯದಲ್ಲಿ ಐದು ಕಂಪನಿಗಳು ಟಿಟಿಡಿಗೆ ತುಪ್ಪ ಪೂರೈಸುತ್ತಿದ್ದವು. ಅವುಗಳಲ್ಲಿ ಎಆರ್ ಡೈರಿಯ ತುಪ್ಪ ಮಾತ್ರ ಕಳಪೆ ಗುಣಮಟ್ಟದ್ದೆಂದು ಕಂಡುಬಂದಿತ್ತು ಎಂದು ಟಿಟಿಡಿ ಸಿಇಒ ಶ್ಯಾಮಲ ರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಿರುಪತಿ ಲಡ್ಡು ವಿವಾದದ ನಡುವೆಯೇ ಟಿಟಿಡಿ ಶಾಂತಿ ಹೋಮ