
ರೈಲೊಂದರಲ್ಲಿ ಸುಮಾರು ಐದು ಅಡಿ ಉದ್ದದ ಹಾವು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದೆ. ಕೊನೆಗೂ ಹಾವು ಸಿಗದೇ ಪ್ರಯಾಣಿಕರು ಕಕ್ಕಾಬಿಕ್ಕಿಯಾದ ಘಟನೆ ಇದಾಗಿದೆ. ಜಬಲ್ಪುರ-ಮುಂಬೈ ಗರೀಬ್ ರಥ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲಿನ ಏರ್ ಕಂಡೀಷನ್ (AC) ಬೋಗಿಯಲ್ಲಿ ಹಾವು ಪತ್ತೆಯಾಗಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊದಲಿಗೆ ಈ ಹಾವು ಎರಡು ಸೀಟುಗಳ ನಡುವೆ ಹರಿದಾಡಿರುವುದು ವೈರಲ್ ಆಗಿರುವ ವಿಡಿಯೋದಲ್ಲಿನ ನೋಡಬಹುದು. ಕೊನೆಗೆ ಎಲ್ಲರೂ ಚೀರಿಕೊಂಡಿದ್ದರಿಂದ ಹಾವು ಅತ್ತಿತ್ತ ಸುಳಿದಾಡಿದೆ. ಮೇಲೆ ಹೋಗಿ ನೇತಾಡಿದೆ. ಪ್ರಯಾಣಿಕರೊಬ್ಬರು ಇದನ್ನು ನೋಡಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ರೈಲು ಅಧಿಕಾರಿಗಳು ಕೂಡಲೇ ರೈಲನ್ನು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಅದರೆ ಹಾವು ಪತ್ತೆಯಾಗಲಿಲ್ಲ.
ಆದರೆ ಹಾವು ಕಂಡ ತಕ್ಷಣ ಪ್ರಯಾಣಿಕರು ಅದರ ವಿಡಿಯೋ ತೆಗೆದಿದ್ದರಿಂದ ಅದು ಇರುವುದು ತಿಳಿದಿದೆ. ಬಳಿಕ ಹಾವು ಎಲ್ಲಿಗೆ ಹೋಗಿದೆ ಎಂದು ತಿಳಿಯಲಿಲ್ಲ. ಕೂಡಲೇ ಅಧಿಕಾರಿಗಳು ಪ್ರಯಾಣಿಕರನ್ನು ಬೇರೆ ಬೋಗಿಗೆ ಶಿಫ್ಟ್ ಮಾಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ, ಹಾವು ಎಲ್ಲಿ ಹೋಗಿದೆ ಎಂದು ತಿಳಿಯದ ಕಾರಣ, ಆತಂಕದಲ್ಲಿಯೇ ಜನರು ಪ್ರಯಾಣಿಸಬೇಕಾದ ಪರಿಸ್ಥಿತಿ ಬಂತು. ರೈಲು ಕಸರಾ ರೈಲ್ವೆ ನಿಲ್ದಾಣವನ್ನು ಸಮೀಪಿಸಿದಾಗ ಜಿ 3 ಬೋಗಿಯ ಮೇಲಿನ ಬೆರ್ತ್ ಸೀಟ್ ಸಂಖ್ಯೆ 23ರಲ್ಲಿ ಹಾವು ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ.
ಯಶ್ ಜೊತೆ ಏನೇನು ಮಾಡ್ಬೇಕೆಂಬ ಮನದಾಸೆ ತೆರೆದಿಟ್ಟ ಬೋಲ್ಡ್ ನಟಿ ಚೈತ್ರಾ ಆಚಾರ್
ಕೆಲ ದಿನಗಳ ಹಿಂದೆಷ್ಟೇ ಉತ್ತರಾಖಂಡ ರಿಷಿಕೇಶದ ಯೋಗನಗರಿ ರೈಲು ನಿಲ್ದಾಣದಲ್ಲಿ ಹಾವು ಕಂಡು ಜನರು ಬೆಚ್ಚಿಬಿದ್ದಿದ್ದರು. ಪ್ಲಾಟ್‌ಫಾರ್ಮ್‌ನಲ್ಲಿ ಹಾವೊಂದು ನುಸುಳುತ್ತಿರುವುದನ್ನು ಕಂಡು ಭಯಭೀತರಾದ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಓಡಿದ್ದರು. ರಿಷಿಕೇಶ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಳಿಯಿಂದ ಹಠಾತ್ತನೆ ಹೊರಬಂದ ಹಾವು ರೈಲಿಗಾಗಿ ಕಾಯುತ್ತಿದ್ದವರಲ್ಲಿ ಆತಂಕ ಮೂಡಿಸಿತ್ತು.
ರೈಲು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಆದರೆ ಹೇಳಿಕೇಳಿ ಅದು ಹಾವು. ಎಲ್ಲಿ ನಾಪತ್ತೆಯಾಯಿತೋ ಗೊತ್ತಾಗಲಿಲ್ಲ. ತಮ್ಮ ಲಗೆಜ್ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಪ್ರಯಾಣಿಕರಂತೂ ಉಸಿರು ಹಿಡಿದುಕೊಂಡಿದ್ದರು. ಏಕೆಂದರೆ ಹಾವು ಪತ್ತೆಯಾಗಿರಲಿಲ್ಲ. ಓಪನ್ ಆಗಿ ತೆರೆದಿಟ್ಟ ಬ್ಯಾಗ್ ಒಳಗೆ ಹೆದರಿದ ಹಾವು ಹೊಕ್ಕಿಕೊಂಡು ಬಿಟ್ಟರೆ ಏನು ಗತಿ ಎಂದು ಲಗೆಜ್ ಕೂಡ ಮುಟ್ಟಲು ಭಯಪಡುವ ವಾತಾವರಣ ನಿರ್ಮಾಣವಾಗಿತ್ತು. ಇದೀಗ ರೈಲಿನ ಒಳಗೇ ಹಾವು ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ.
28 ಸಿನಿಮಾ ಹಿಂದಿಕ್ಕಿ ಆಸ್ಕರ್ ಅಂಗಳಕ್ಕೆ 'ಲಾಪತಾ ಲೇಡೀಸ್': ಚೊಚ್ಚಲ ಚಿತ್ರದಲ್ಲಿ ಮೂವರು ತಾರೆಯರಿಗೆ ಧಮಾಕಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ