
ವಿವಿಧತೆಯಲ್ಲಿ ಏಕತೆ ಸಾರುವ ಭಾರತ ದೇಶವೂ ವಿಭಿನ್ನವಾದ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ದೇಶವಾಗಿದೆ. ಕನಿಷ್ಠ 700ಕ್ಕೂ ಹೆಚ್ಚು ಬುಡಕಟ್ಟು ಸಮುದಾಯದ ಜನರು ನಮ್ಮ ದೇಶದಲ್ಲಿದ್ದಾರೆ. ಇಲ್ಲಿ ಒಂದೊಂದು ಸಮುದಾಯದ ಆಚಾರ ವಿಚಾರ ಸಂಸ್ಕೃತಿಗಳು ವಿಭಿನವಾಗಿದ್ದು, ಪ್ರತಿಯೊಂದು ಸಮುದಾಯವು ವಿಭಿನ್ನವಾಗಿ ತಮ್ಮ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದೆ. ಹಾಗೆಯೇ ದೇಶದ ಈಶಾನ್ಯ ಭಾಗದಲ್ಲಿರುವ ಅರುಣಾಚಲ ಪ್ರದೇಶವೂ ಕೂಡ ಸಾಕಷ್ಟು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಜೊತೆಗೆ ವಿಭಿನ್ನ ಸಂಪ್ರದಾಯ ಆಚರಣೆಗಳನ್ನು ಹೊಂದಿದೆ. ಅಲ್ಲಿಯವರೆ ಆದ ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ಅಲ್ಲಿನ ಬುಡಕಟ್ಟು ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸೊಗಸಾಗಿ ನೃತ್ಯ ಮಾಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು ಅರುಣಾಚಲ ಪ್ರದೇಶದವರಾದ ಕಿರೆನ್ ರೆಜಿಜು ಅವರು ಕೇಂದ್ರ ಸಚಿವರಾದರು ತಮ್ಮ ಮೂಲ ಸಂಸ್ಕೃತಿಯನ್ನು ಮರೆತಿಲ್ಲ. ಯಾವಾಗಲೂ ತಮ್ಮ ಸಂಸ್ಕೃತಿಯ ಮೂಲ ಬೇರು ಆಚಾರ ವಿಚಾರಗಳ ಬಗ್ಗೆ ಸದಾ ಮಾತನಾಡುವ ಸಚಿವರು ಈಗ ತಾವು ಅರುಣಾಚಲ ಪ್ರದೇಶದ ಬಾನಾದಲ್ಲಿ ಸರೊಕ್ ಹಬ್ಬದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಅಲ್ಲಿನ ಅಕ ಸಮುದಾಯದ (AKA community)ನೃತ್ಯವನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರ್ಯಕ್ರಮವು ಅಕ ಮಿಜಿ ಬುಡಕಟ್ಟು ಸಮುದಾಯದ (AKA-Miji tribe) ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಸಂಪ್ರದಾಯಗಳನ್ನು ಪರಿಚಯಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಸಂಪೂರ್ಣವಾಗಿ ತಲ್ಲೀನರಾಗಿ ಭಾಗವಹಿಸಿದ್ದು, ಅಲ್ಲಿನ ಸಂಪ್ರದಾಯಿಕ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಕಂದು ಬಣ್ಣದ ಜಾಕೆಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ಕಿರೆನ್ ರಿಜಿಜು ಅವರು ರೋಮಾಂಚನಕಾರಿಯಾದ ಈ ಸಂಪ್ರದಾಯಿಕ ನೃತ್ಯವನ್ನು ಮಾಸ್ಟರ್‌ನಂತೆ ಮಾಡಿದರು. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಮಾಡಿ ಬರೆದುಕೊಂಡಿರುವ ಕಿರೆನ್ ರಿಜಿಜು, ನನ್ನ ಸಾಂಪ್ರದಾಯಿಕ ನಂಬಿಕೆ ಮತ್ತು ಸಂಸ್ಕೃತಿಯಲ್ಲಿ ನಾನು ಆಳವಾಗಿ ಬೇರೂರಿದ್ದೇನೆ, ಅದಿಲ್ಲದೇ ನಾನು ಏನೂ ಅಲ್ಲ. ಅಕಾ ಮಿಜಿ ಸಾಂಸ್ಕೃತಿಕ ಸಂಜೆಯ ಸಮಯದಲ್ಲಿ ಸಂತೋಷಪಡುವುದು ಅಂತಿಮ. ಅರುಣಾಚಲ ಪ್ರದೇಶದ ಬಾನಾದಲ್ಲಿ ಅಕಾ ಸಮುದಾಯದ ಸರೋಕ್ ಉತ್ಸವದ ಸುವರ್ಣ ಮಹೋತ್ಸವದ ಕೊನೆಯ ದಿನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಕಾರ್ಯಕ್ರಮವು ಪೀಳಿಗೆಯಿಂದ ಪೀಳಿಗೆಗೆ ಬಂದಿರುವ ಸಂಗೀತ, ನೃತ್ಯ ಮತ್ತು ಆಚರಣೆಗಳನ್ನು ಅನುಭವಿಸಲು ಒಂದು ಅನನ್ಯ ಅವಕಾಶವನ್ನು ನೀಡಿತು. ಸಚಿವ ರಿಜಿಜು ಅವರು ಇದರಲ್ಲಿ ಭಾಗವಹಿಸುವುದರೊಂದಿಗೆ ಸ್ಥಳೀಯ ಸಂಪ್ರದಾಯಗಳನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದ್ದಲ್ಲದೇ ಈ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಚಿವರು ಹೊಂದಿರುವ ಕೊಂಡಿಯನ್ನು ಪ್ರದರ್ಶಿಸಿದೆ. ಅವರ ಉಪಸ್ಥಿತಿಯು ಅಕಾ ಸಮುದಾಯದ ಇತಿಹಾಸ ಮಾತ್ರವಲ್ಲದೆ ಅರುಣಾಚಲ ಪ್ರದೇಶದ ಸಾಂಸ್ಕೃತಿಕ ವೈಭವಕ್ಕೆ ಅವರ ಕೊಡುಗೆಗಳನ್ನು ಸಹ ಆಚರಿಸುವ ಉತ್ಸವಕ್ಕೆ ಹೆಚ್ಚುವರಿ ಪ್ರಾಮುಖ್ಯತೆಯನ್ನು ತಂದಿತು.
ಕಿರಣ್ ರಿಜಿಜು ಅವರು ಅರುಣಾಚಲ ಪ್ರದೇಶದ ಪ್ರಮುಖ ಭಾರತೀಯ ರಾಜಕಾರಣಿಯಾಗಿದ್ದು, ಭಾರತ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುವಜನ ವ್ಯವಹಾರಗಳು, ಕ್ರೀಡೆ ಮತ್ತು ಕಾನೂನು ಸಚಿವರಾಗಿ ಅವರು ಕೆಲಸ ಮಾಡಿದ್ದಾರೆ. ತಮ್ಮ ರಾಜಕೀಯ ಜವಾಬ್ದಾರಿಗಳ ಜೊತೆಗೆ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಮಹತ್ವವನ್ನು ಹೆಚ್ಚಾಗಿ ಎತ್ತಿ ತೋರಿಸಿರುವ ಅವರು. ಸ್ಥಳೀಯ ಉತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮತ್ತು ರಾಜ್ಯಾದ್ಯಂತ ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳುವುದಕ್ಕೆ ಖ್ಯಾತಿ ಗಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ