ಬಂಗಾಳ ಬಿಜೆಪಿ ಶಾಸಕರು, ನಾಯಕರಿಗೆ ನೀಡಿದ ಭದ್ರತೆ ಹಿಂತೆಗೆದ ಕೇಂದ್ರ!

By Suvarna NewsFirst Published Jun 4, 2021, 3:24 PM IST
Highlights
  • ಪ. ಬಂಗಾಳ ಬಿಜೆಪಿ ನಾಯಕರಿಗೆ ನೀಡಿದ್ದ ಭದ್ರತೆ ವಾಪಸ್
  • ನಾಯಕರ ಮನವಿ ಮೇರೆಗೆ ಭದ್ರತೆ ಹಿಂತೆಗೆದ ಕೇಂದ್ರ ಗೃಹ ಇಲಾಖೆ
  • ಸೆಕ್ಯೂರಿಟಿಯಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ ಎಂದ ಬಂಗಾಳ ಬಿಜೆಪಿ
     

ಕೋಲ್ಕತಾ(ಜೂ.04): ಪಶ್ಚಿಮ ಬಂಗಾಳದಲ್ಲಿನ ಹಿಂಸೆ, ಬಿಜೆಪಿ ನಾಯಕರ ಮೇಲಿದ್ದ ಜೀವಬೆದರಿಕೆ ಹಾಗೂ ನಾಯಕ ಮೇಲೆ ನಡೆದದ ಮಾರಣಾಂತಿಕ ಹಲ್ಲೆ, ಕೊಲೆಗಳಿಂದ ಕೇಂದ್ರ ಗೃಹ ಇಲಾಖೆ ನಾಯಕರಿಗೆ ಕೇಂದ್ರ ಭದ್ರತಾ ಪಡೆಯನ್ನು ನೀಡಿತ್ತು. ಇದೀಗ ಸ್ವತಃ ಪಶ್ಚಿಮ ಬಂಗಾಳ ಬಿಜೆಪಿ ನಾಯಕರ ಮನವಿ ಮೇರೆಗೆ ಕೇಂದ್ರ ಗೃಹ ಇಲಾಖೆ ನೀಡಿದ್ದ ಭದ್ರತೆಯನ್ನು ವಾಪಸ್ ಪಡೆದಿದೆ.

14 ಬಿಜೆಪಿ ಕಾರ‍್ಯಕರ್ತರ ಹತ್ಯೆ, ಲಕ್ಷ ಮಂದಿ ಗುಳೆ!.

ಪಶ್ಚಿಮ ಬಂಗಾಳದ 100ಕ್ಕೂ ಹೆಚ್ಚು ನಾಯಕರಿಗೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಿತ್ತು. ಆದರೆ ಕೆಲ ನಾಯಕರು ಭದ್ರತೆ ಸ್ವೀಕರಿಸಲು ನಿರಾಕರಿಸಿದ್ದರು. ಇದರಿಂದ ಪಕ್ಷದ ಸಾರ್ವಜನಿಕ ಇಮೇಜ್‌ಗೆ ಧಕ್ಕೆ ಬರುತ್ತದೆ. ಭದ್ರತಾ ಸಿಬ್ಬಂಧಿಗಳು ಸುತ್ತುವರೆದಿರುವ ಕಾರಣ ಜನರ ಪಕ್ಷ ಅನ್ನೋ ಭಾವನೆ ಹೊರಟು ಹೋಗಲಿದೆ ಎಂದು ನಾಯಕರು ಹೇಳಿದ್ದಾರೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ಭದ್ರತೆಯನ್ನು ವಾಪಸ್ ತೆಗೆದುಕೊಂಡಿದೆ.

ಪಶ್ಚಿಮ ಬಂಗಾಳ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಬಿಎಲ್ ಸಂತೋಷ್

ಶಾಸಕರು, ನಾಯಕರ ಆತಂಕದ ಕುರಿತು ಪಕ್ಷ ಅಧ್ಯಯನ ನಡೆಸಿತ್ತು. ಈ ಅಧ್ಯಯನದಲ್ಲಿ ಬಂಗಾಳ ನಾಯಕರ ಮಾತು ನಿಜವಾಗಿದೆ. ಜನರ ಜೊತೆ ಸಂವನಕ್ಕೆ ಭದ್ರತಾ ಪಡೆಗಳಿಂದ ಅಡ್ಡಿಯಾಗುತ್ತದೆ. ಭದ್ರತಾ ಪಡೆಗಳಿಂದ ಜನರ ಬಳಿ ಹೋಗುವುದು ಅವರ ಸಮಸ್ಯೆ ಅಲಿಸುವುದು ಕಷ್ಟ. ಜೊತೆಗೆ ಈ ರೀತಿ ಜನಪ್ರತಿನಿಧಿನಿ ಭದ್ರತಾ ಪಡೆಗಳೊಂದಿಗೆ ಜನರ ಬಳಿ ತೆರಳು ರಾಜಕಾರಣವನ್ನು ಬಂಗಾಳ ಜನತೆ ಒಪ್ಪುವುದಿಲ್ಲ ಎಂದು ಬಂಗಾಳ ಹಿರಿಯ ಬಿಜೆಪಿ ನಾಯಕರು ಹೇಳಿದ್ದಾರೆ.

ಬಿಜೆಪಿ ಕಚೇರಿ, ಅಭ್ಯರ್ಥಿ ಮನೆಗೆ ಬೆಂಕಿ, ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ!.

ಬಂಗಾಳ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ಬಾರಿ ವಾಗ್ದಾಳಿ ನಡೆಸುವ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಭದ್ರತಾ ಪಡೆಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಅನ್ನೋ ಆರೋಪ ಹಿಂದಿನಿಂದಲೂ ಮಾಡುತ್ತಲೇ ಬರುತ್ತಿದ್ದಾರೆ. ಹೀಗಾಗಿ ಭದ್ರತಾ ಪಡೆಯೊಂದಿಗೆ ಜನಪ್ರತಿನಿಧಿಗಳು ತೆರಳಿದರೆ ಪಕ್ಷಕ್ಕೆ ಮತ್ತಷ್ಟು ಹಾನಿಯಾಗಲಿದೆ ಎಂದಿದ್ದಾರೆ. ಚುನಾವಣೆ ವೇಳೆ 18 ನಾಯಕರು ಭದ್ರತಾ ಪಡೆಗಳ ನೆರವು ಪಡೆದಿದ್ದರೆ, ಇನ್ನುಳಿದ 168 ನಾಯಕರು ಯಾವುದೇ ಭದ್ರತಾ ಪಡೆಗಳ ಸಹಾಯವಿಲ್ಲದೆ ಚುನಾವಣೆ ಎದುರಿಸಿದ್ದರು.

click me!