ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆಹಾರ ನೀಡಿದ ಕೇರಳದ ಸೂಪರ್ ಹೀರೋ..! ಬ್ರಿಟಿಷ್ ಸರ್ಕಾರದ ಗೌರವ

By Suvarna NewsFirst Published Jun 4, 2021, 12:30 PM IST
Highlights
  • ಕೊರೋನಾ ಸಂದರ್ಭ ಸಮುದಾಯ ಸೇವೆ ನೀಡಿದ ವ್ಯಕ್ತಿ
  • ಪತ್ನಿ, ಮಗನ ಜೊತೆ ಸೇರಿ ಜನರಿಗೆ ನೆರವಾದ ವ್ಯಕ್ತಿಗೆ ಬ್ರಿಟನ್ ಅವಾರ್ಡ್

ತಿರುವನಂತಪುರಂ(ಜೂ.04): ಕೇರಳ ಮೂಲದ 34 ವರ್ಷದ ಪ್ರಭು ನಟರಾಜನ್ ಅವರ COVID-19 ಪರಿಹಾರ ಕಾರ್ಯಗಳಿಗಾಗಿ ಬ್ರಿಟಿಷ್ ಸರ್ಕಾರವು ‘ಪಾಯಿಂಟ್ಸ್ ಆಫ್ ಲೈಟ್ ಅವಾರ್ಡ್’ ನೀಡಿ ಗೌರವಿಸಿದೆ.

ಮಾರ್ಚ್ 2020 ರಲ್ಲಿ ಯುಕೆಗೆ ತೆರಳಿದ ನಟರಾಜನ್, ಪತ್ನಿ ಮತ್ತು ಮಗನ ಸಹಾಯದೊಂದಿಗೆ ಬ್ಯಾನ್‌ಬರಿಯಲ್ಲಿ ನೂರಾರು ಜನರಿಗೆ ಆಹಾರವನ್ನು ತಲುಪಿಸಿದ್ದಾರೆ. ನಟರಾಜನ್ ಸ್ಥಳೀಯ ಪ್ರದೇಶದಾದ್ಯಂತ ಅಗತ್ಯವಿರುವ ಜನರಿಗೆ ನಿಯಮಿತವಾಗಿ ಆಹಾರ ಪಾರ್ಸೆಲ್‌ಗಳನ್ನು ಸಂಗ್ರಹಿಸಿ ತಲುಪಿಸುವ ಮೂಲಕ ಬೆಂಬಲಿಸಿದ್ದಾರೆ.

ರಾಮ್‌ದೇವ್ ಮಾತಿಗೆ ನಿರ್ಬಂಧವಿಲ್ಲ ಎಂದ ಹೈಕೋರ್ಟ್

ಜೊತೆಗೆ ತಮ್ಮದೇ ಆದ ಫುಡ್ ಬ್ಯಾಂಕ್ ಸ್ಥಾಪಿಸಿದ್ದಾರೆ. ನಿವಾಸಿಗಳಿಗೆ ಆಹಾರವನ್ನು ತಲುಪಿಸುವಾಗ, ನಟರಾಜನ್ ಸೂಪರ್‌ ಹೀರೋ, ಸಾಂತಾಕ್ಲಾಸ್ ಮತ್ತು ಈಸ್ಟರ್ ಬನ್ನಿಯಂತೆ ಬಟ್ಟೆ ಧರಿಸುತ್ತಾರೆ.

ನಟರಾಜನ್‌ಗೆ ಬರೆದ ವೈಯಕ್ತಿಕ ಪತ್ರದಲ್ಲಿ, ಪಿಎಂ ಜಾನ್ಸನ್ ಅವರು ತಮ್ಮೂರಿನ ಕುಟುಂಬಗಳಿಗೆ ಸಂತೋಷವನ್ನು ತರುವ ಸಲುವಾಗಿ ಕಳೆದ ವರ್ಷ ಮಾಡಿದ ಎಲ್ಲ ಸೇವೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ನೀವು ನಗರಾದ್ಯಂತದ ಜನರಿಗೆ 11,000 ಕ್ಕೂ ಹೆಚ್ಚು ಆಹಾರ ಪೊಟ್ಟಣ ನೀಡಿದ್ದೀರಿ, ಇದು ಅದ್ಭುತ ಸಾಧನೆಯಾಗಿದೆ. ಸೂಪರ್ಹೀರೋ ಉಡುಪಿನಲ್ಲಿ ಸಹಾಯ ಮಾಡುವ ಮೂಲಕ ನೀವು ಸ್ಥಳೀಯ ಮಕ್ಕಳನ್ನು ಸಂತೋಷಪಡಿಸಿದ್ದೀರಿ, ಆದರೆ ನಿಜವಾದ ನಾಯಕ ನೀವೇ! ಎಂದು ಪಿಎಂ ಜಾನ್ಸನ್ ಬರೆದಿದ್ದಾರೆ. ನಟರಾಜನ್ ಪ್ರಧಾನ ಮಂತ್ರಿಗೆ ಧನ್ಯವಾದಗಳನ್ನು ಅರ್ಪಿಸಿ, ಅವರ ಪ್ರಯತ್ನದಲ್ಲಿ ಅವರ ಪತ್ನಿ ಮತ್ತು ಮಗನ ಬೆಂಬಲವನ್ನು ತಿಳಿಸಿದ್ದಾರೆ.

click me!