ಕರ್ನಾಟಕ ವಕ್ಫ್‌ ಗದ್ದಲ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು!

ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಚರ್ಚೆ ವೇಳೆ ಅಮಿತ್‌ ಶಾ ಅವರು ಕರ್ನಾಟಕದ ವಕ್ಫ್‌ ಮಂಡಳಿಯಲ್ಲಿನ ಅಕ್ರಮಗಳು, ಆಸ್ತಿ ಕಬಳಿಕೆ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಅನುರಾಗ್ ಠಾಕೂರ್ ಕೂಡ ಕರ್ನಾಟಕದ ವಕ್ಫ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

Union Home Minister Amit Shah hit back at Congress by proposing the Karnataka Waqf riot rav

ನವದೆಹಲಿ (ಏ.3): ವಕ್ಫ್‌ ತಿದ್ದುಪಡಿ ವಿಷಯದಲ್ಲಿ ವಿಪಕ್ಷ ಕಾಂಗ್ರೆಸ್ ನಾಯಕರನ್ನು ಬುಧವಾರ ಲೋಕಸಭೆಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕರ್ನಾಟಕದಲ್ಲಿ ವಕ್ಫ್‌ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ, ವಕ್ಫ್‌ ಆಸ್ತಿ ಕಬಳಿಕೆ ವಿವಾದಗಳನ್ನು ಎಳೆಎಳೆಯಾಗಿ ಪ್ರಸ್ತಾಪಿಸಿ ಬಿಸಿ ಮುಟ್ಟಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ಸಚಿವ ಅನುರಾಗ್ ಠಾಕೂರ್‌ ಕೂಡಾ ಕರ್ನಾಟಕದ ಬೆಳವಣಿಗೆ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಚಾಟಿ ಏಟು ನೀಡಿದ್ದಾರೆ.

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬಲವಾಗಿ ಬೆಂಬಲಿಸಿ ಮಾತನಾಡಿದ ಅಮಿತ್‌ ಶಾ, ತಿದ್ದುಪಡಿಗೆ ಅಗತ್ಯವೇನು? ಇಲ್ಲದಿದ್ದರೆ ಏನೆಲ್ಲಾ ಅನಾಹುತ ಆಗಿದೆ, ಮುಂದೆ ಏನು ಅನಾಹುತ ಆಗಲಿದೆ ಎಂದು ವಿವರಿಸಿದರು. ಇದಕ್ಕೆ ಕರ್ನಾಟಕದ ಹಲವು ಉದಾಹರಣೆ ನೀಡಿದ ಅಮಿತ್‌ ಶಾ, ‘ಕರ್ನಾಟಕದಲ್ಲಿ ವಕ್ಫ್‌ ಮಂಡಳಿ ಅಕ್ರಮದ ಬಗ್ಗೆ ಮಾಣಿಪ್ಪಾಡಿ ವರದಿಯಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ. ಇದರ ಜೊತೆಗೆ ಇತ್ತೀಚೆಗೆ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ 15000 ಎಕರೆ ಭೂಮಿಯನ್ನು ವಕ್ಫ್‌ ಆಸ್ತಿಯೆಂದು ಏಕಾಏಕಿ ಘೋಷಿಸಿ ಹೊಸ ವಿವಾದ ಸೃಷ್ಟಿಸಲಾಯಿತು. 5000 ಕೋಟಿ ರು.ಬೆಲೆಬಾಳುವ ಭೂಮಿಯನ್ನು ವಾರ್ಷಿಕ ಎಕರೆಗೆ ಕೇವಲ 12000 ರು. ನಂತೆ ಬಾಡಿಗೆಗೆ ನೀಡಲಾಯ್ತು. ಇದನ್ನೆಲ್ಲಾ ಪ್ರಶ್ನಿಸಿದರೆ ವಿಪಕ್ಷ ನಾಯಕರು ಅದರ ಲೆಕ್ಕಾಚಾರ ಮಾಡಬೇಡಿ, ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಾರೆ’ ಎಂದು ಕಿಡಿಕಾರಿದರು.

Latest Videos

ಇದನ್ನೂ ಓದಿ: ಮುಸ್ಲಿಮ್ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಅವಕಾಶ,ತಿದ್ದುಪಡಿ ಬಿಲ್

ಕರ್ನಾಟಕದಲ್ಲಿ ದತ್ತಪೀಠ ಭೂಮಿಯನ್ನೂ ಅತಿಕ್ರಮಿಸಿಕೊಳ್ಳಲಾಗಿದೆ. ಅದೇ ರೀತಿ ಇತರೆ ಧಾರ್ಮಿಕ ಸಮುದಾಯಕ್ಕೆ ಸೇರಿದ ಭೂಮಿಯೂ ಕಬಳಿಕೆಯಾಗಿದೆ. ಇದನ್ನೆಲ್ಲಾ ತಡೆಯಲು ವಕ್ಫ್‌ ಕಾಯ್ದೆಗೆ ತಿದ್ದುಪಡಿ ಅಗತ್ಯವಾಗಿತ್ತು ಎಂದು ಅಮಿತ್‌ ಶಾ ಪ್ರತಿಪಾದಿಸಿದರು.

ಇನ್ನು ಇದೇ ವಿಷಯವಾಗಿ ಲೋಕಸಭೆಯಲ್ಲ ಮಾತನಾಡಿದ ಸಚಿವ ಅನುರಾಗ್ ಠಾಕೂರ್‌, ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ವಕ್ಫ್ ಹಗರಣದ ಕುರಿತು ಪ್ರಸ್ತಾಪಿಸಿದರು. 2012ರ ವಕ್ಫ್‌ ಭೂ ಹಗರಣದ ಬಗ್ಗೆ ಪ್ರಸ್ತಾಪಿಸಿ, ಇದರಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರವು 4.50 ಕೋಟಿ ರು.ಗಳನ್ನು ಸಂಗ್ರಹಿಸಿದೆ. ಅದನ್ನು ನೀವು ಎಲ್ಲಿ ವ್ಯಯ ಮಾಡಿದ್ದೀರಿ? ಅದನ್ನು ನೀವು ಮಸೀದಿ ಅಥವಾ ವಕ್ಫ್‌ ಮಂಡಳಿಯಿಂದ ಪಡೆದಿರಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ನಡೆದ ಹಗರಣಗಳಲ್ಲಿ ಆ ಕಾಂಗ್ರೆಸ್‌ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

ಮಾಣಿಪ್ಪಾಡಿ ವರದಿಯಲ್ಲಿ ಕರ್ನಾಟಕದ ವಕ್ಫ್‌ ಅಕ್ರಮ ಬೆಳಕಿಗೆ

- ವಿಜಯಪುರದಲ್ಲಿ 15000 ಎಕರೆ ವಕ್ಫ್‌ದೆಂದು ಘೋಷಿಸಿ ವಿವಾದ

- ಕರ್ನಾಟಕದಲ್ಲಿ ದತ್ತ ಪೀಠದ ಜಾಗವನ್ನೂ ಅತಿಕ್ರಮಿಸಲಾಗಿದೆ: ಕಿಡಿ

ಶಾ ಹೇಳಿದ್ದೇನು?

- ಕರ್ನಾಟಕದಲ್ಲಿ ದತ್ತಪೀಠ ಭೂಮಿಯನ್ನೂ ಅತಿಕ್ರಮಿಸಿಕೊಳ್ಳಲಾಗಿದೆ

- ಅದೇ ರೀತಿ ಇತರೆ ಧರ್ಮೀಯರ ಭೂಮಿ ಕೂಡ ವಕ್ಫ್‌ನಿಂದ ಕಬಳಿಕೆ

- ವಕ್ಫ್‌ ಮಂಡಳಿ ಅಕ್ರಮ ಬಗ್ಗೆ ಮಾಣಿಪ್ಪಾಡಿ ವರದಿಯಲ್ಲಿ ವಿಸ್ತೃತ ಮಾಹಿತಿ

- ಇದನ್ನು ತಡೆಯಲು ವಕ್ಫ್‌ ಕಾಯ್ದೆಗೆ ತಿದ್ದುಪಡಿ ಅಗತ್ಯವಾಗಿದೆ: ಅಮಿತ್ ಶಾ

vuukle one pixel image
click me!