Uber for Teens ಟೀನೆಜ್ ಮಕ್ಕಳ ಸುರಕ್ಷತೆಗಾಗಿ ಹೊಸ ಸೇವೆ ಆರಂಭಿಸಿದ ಊಬರ್‌!

Uber ಭಾರತದಲ್ಲಿ 13-17 ವರ್ಷ ವಯಸ್ಸಿನ ಮಕ್ಕಳಿಗಾಗಿ 'Uber for Teens' ಸೇವೆಯನ್ನು ಪ್ರಾರಂಭಿಸಿದೆ. ಇದು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸುರಕ್ಷಿತ ಸಾರಿಗೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. GPS ಟ್ರ್ಯಾಕಿಂಗ್ ಮತ್ತು ತುರ್ತು ಬಟನ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Uber for Teens start Who can ride key benefits and how it works details here gow

ಬೆಂಗಳೂರು (ಎ.2): ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳೇ ಹೆಚ್ಚು. ಮನೆಯಿಂದ ಕಾಲೇಜಿಗೆ ಕಳುಹಿಸಲು ಪೋಷಕರು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಹೆಣ್ಣಿ ಮಕ್ಕಳು ಒಂಟಿಯಾಗಿ ಹೋಗಲು ಹೆದರುವವರೇ ಹೆಚ್ಚು. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಇದೀಗ ಪ್ರಯಾಣಿಕರಿಗೆ ಸೇವೆ ಒದಗಿಸುವ ಉಬರ್ ದೇಶದಲ್ಲಿ 13 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗಾಗಿ 'ಉಬರ್ ಫಾರ್ ಟೀನ್ಸ್' ಸೇವೆಯನ್ನು ಪ್ರಾರಂಭಿಸಿದೆ. ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸುರಕ್ಷಿತ, ಸುಭದ್ರ ಮತ್ತು ಸುಲಭ ಸಾರಿಗೆಯನ್ನು ನೀಡುವ ಸಲುವಾಗಿ ಈ ಹೊಸ ಸೇವೆಯನ್ನು ಒದಗಿಸುತ್ತಿದೆ.

ಇನ್ಮುಂದೆ ಕರ್ನಾಟಕದಲ್ಲಿ ಓಲಾ ಊಬರ್ ರ್ಯಾಪಿಡೊ ಬೈಕ್‌ ಸೇವೆ ಬಂದ್‌! ಹೈಕೋರ್ಟ್ ಮಹತ್ವದ ಆದೇಶ

Latest Videos

ವಿಶ್ವಾಸಾರ್ಹ ಸೇವೆ ನೀಡಲು  ಊಬರ್‌ ಹೊಸ ಹೆಜ್ಜೆ
ಉಬರ್‌ನ 'ಉಬರ್ ಫಾರ್ ಟೀನ್ಸ್'  ಯೋಜನೆಯು ಹದಿಹರೆಯದವರ ಸಾರಿಗೆ ಸಮಸ್ಯೆಗಳಿಗೆ , ಅವರ ಪೋಷಕರಿಗೆ ಧನಾತ್ಮಕವಾಗಿ ಸ್ಪಂದಿಸಲಿದೆ. ಮುಖ್ಯವಾಗಿ ಸುರಕ್ಷತೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ GPS ಟ್ರ್ಯಾಕಿಂಗ್ ಸೇವೆ, ಸರಿಯಾದ ಸಮಯಕ್ಕೆ ಸೇವೆ ನೀಡಲಿದೆ. ಇದರ ಜೊತೆಗೆ ಟ್ರ್ಯಾಕಿಂಗ್ ಮತ್ತು ಆ್ಯಪ್ ನಲ್ಲಿ ತುರ್ತು ಬಟನ್ ಕೂಡ ಇರಲಿದೆ. ಈ ಮೂಲಕ ವಿಶ್ವಾಸಾರ್ಹ ಸೇವೆ ನೀಡಲು  ಊಬರ್‌ ಹೊಸ ಹೆಜ್ಜೆ ಇಟ್ಟಿದೆ.

ಈಗಾಗಲೇ ಈ ಸೇವೆಯನ್ನು ದೆಹಲಿ ಎನ್‌ಸಿಆರ್, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಮತ್ತು ಇತರ ಮಹಾನಗರಗಳು ಸೇರಿದಂತೆ 37 ನಗರಗಳಲ್ಲಿ ಆರಂಭಿಸಿದೆ.'ಉಬರ್ ಫಾರ್ ಟೀನ್ಸ್' ಸೇವೆಗಾಗಿ, ಬಳಕೆದಾರರ ಸುರಕ್ಷತಾ ಅಗತ್ಯತೆಗೆ ಕೆಲವೊಂದು ಆಯ್ಕೆಗಳನ್ನು ಫಿಲ್‌ ಮಾಡಲು ಮತ್ತು  ಅಲ್ಲಿರುವ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ತುಂಬುವಂತೆ ಮನವಿ ಮಾಡಿದೆ.

ಓಲಾ, ಉಬರ್‌ ರೀತಿಯಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರದಿಂದಲೇ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ!

ಸೇವೆ ಪಡೆಯುವುದು ಹೇಗೆ
ಪ್ರತಿಯೊಂದು ಸವಾರಿಯನ್ನು ನಿರ್ದಿಷ್ಟ ಜಿಪಿಎಸ್ ಟ್ರ್ಯಾಕರ್‌ನೊಂದಿಗೆ ಗುರುತಿಸಲಾಗಿದೆ. ಇದು ತಮ್ಮವರು ಎಲ್ಲಿ ಬರುತ್ತಿದ್ದಾರೆ ಎಂಬುದನ್ನು ಗುರುತಿಸುತ್ತದೆ. ಪೋಷಕರಿಗೆ ನೈಜ-ಸಮಯದ ನವೀಕರಣಗಳನ್ನು ಒದಗಿಸಲಾಗುತ್ತದೆ ಮತ್ತು ಅವರು ತಮ್ಮದೇ ಆದ ಅಪ್ಲಿಕೇಶನ್ ಮೂಲಕ  ಸಂಚಾರವನ್ನು ಟ್ರ್ಯಾಕ್ ಮಾಡಲು ಸಂಪೂರ್ಣ ಅವಕಾಶವಿದೆ. ಜೊತೆಗೆ ತುರ್ತು ಬಟನ್ ಕೂಡ ಇದೆ. ಊಬರ್ ಖಾತೆಯನ್ನು ಹೊಂದಿರುವ ಪೋಷಕರು ಅಥವಾ ಹೆತ್ತವರು  ಆ್ಯಪ್ ನಲ್ಲಿ ತಮ್ಮ ಮಕ್ಕಳ ಹೆಸರನ್ನು ನಮೂದಿಸಬೇಕು. ಯಾರು ಪ್ರಯಾಣಿಸುತ್ತಾರೋ ಅವರು ತಮ್ಮ ವಿಳಾಸಗಳನ್ನು ಫಿಲ್ ಮಾಡಬೇಕು. ಇದು ಪೋಷಕರ ಮೊಬೈಲ್‌ ಗೂ ಸಂದೇಶ ಹೋಗುತ್ತದೆ.

vuukle one pixel image
click me!