ರತನ್ ಟಾಟಾ ಬಿಟ್ಟು ಹೋದ ಸುಮಾರು 3,800 ಕೋಟಿ ರೂಪಾಯಿ ಆಸ್ತಿಯನ್ನು ಯಾರಿಗೆಲ್ಲಾ ಹಂಚಿಕೆ ಮಾಡಿದ್ದಾರೆ ಅನ್ನೋ ವಿವರ ಹಲವರು ಕಣ್ಣಾಲಿ ತೇವಗೊಳಿಸಿದೆ. ಈ ಆಸ್ತಿಯ ಪಾಲಿನಲ್ಲಿ ರತನ್ ಟಾಟಾ ಮುದ್ದಿನ ನಾಯಿ ಟಿಟೂಗೆ ಲಕ್ಷ ಲಕ್ಷ ರೂಪಾಯಿ ತೆಗೆದಿಟ್ಟಿದ್ದಾರೆ. ಇದರ ತಿಂಗಳ ಖರ್ಚಿಗೆ ಎಷ್ಟು ರೂಪಾಯಿ ಇದೆ ಗೊತ್ತಾ?
ಮುಂಬೈ(ಏ.02) ರತನ್ ಟಾಟಾ ನಿಧನದ ಬಳಿಕ ಅವರ ಆಸ್ತಿ ಹಂಚಿಕೆ ಕುರಿತು ಸಂಪೂರ್ಣ ವಿಲ್ ಮಾಹಿತಿ ಇದೀಗ ಹೊರಬಿದ್ದಿದೆ. ರತನ್ ಟಾಟಾ ಬಿಟ್ಟು ಹೋದ 3,800 ಕೋಟಿ ರೂಪಾಯಿ ಆಸ್ತಿಯಲ್ಲಿ ಎರಡು ಟ್ರಸ್ಟ್‌ಗೆ ಬಹುಪಾಲು ನೀಡಿದ್ದಾರೆ. ಹಾಗಂತ ರತನ್ ಟಾಟಾ ಯಾರನ್ನೂ ಮರೆತಿಲ್ಲ. ಅದರಲ್ಲೂ ಪ್ರಮುಖವಾಗಿ ತಮ್ಮ ಮುದ್ದಿನ ಸಾಕು ನಾಯಿ ಟೀಟೂಗೂ ಆಸ್ತಿಯಲ್ಲೂ ಪಾಲು ಹಂಚಿಕೆ ಮಾಡಿದ್ದಾರೆ. ಇನ್ನು ರತನ್ ಟಾಟಾ ಮನೆ ಹಾಗೂ ಕಚೇರಿ ಸಿಬ್ಬಂದಿಗಳಿಗೂ ಪಾಲು ನೀಡಿದ್ದಾರೆ.
ರತನ್ ಟಾಟಾ ಹೃದಯಶ್ರೀಮಂತಿಕೆ
ರತನ್ ಟಾಟಾಗೆ ನಾಯಿ ಎಂದರೆ ಪಂಚಪ್ರಾಣ. ಕೇವಲ ಅವರ ಸಾಕು ನಾಯಿ ಮಾತ್ರವಲ್ಲ, ಯಾವುದೇ ನಾಯಿ ಕಂಡರೂ ರತನ್ ಟಾಟಾಗೆ ಪ್ರೀತಿ ಹೆಚ್ಚು. ತಮ್ಮ ಆಸ್ತಿಯಲ್ಲಿ ಮುದ್ದಿನ ನಾಯಿ ಟೀಟೂಗೆ 12 ಲಕ್ಷ ರೂಪಾಯಿ ಹಂಚಿಕೆ ಮಾಡಿದ್ದಾರೆ. ಪ್ರತಿ 3 ತಿಂಗಳಗೆ ಟೀಟೂ ಖರ್ಚಿಗೆ 30,000 ರೂಪಾಯಿ ಸಿಗಲಿದೆ. ಈ ನಾಯಿಯನ್ನು ರತನ್ ಟಾಟಾಗೆ ರುಚಿ ರುಚಿಯಾದ ಆಡಗೆ ತಯಾರಿಸುತ್ತಿದ್ದ ರಾಜನ್ ಶಾ ನೋಡಿಕೊಳ್ಳುವಂತೆ ವಿಲ್‌ನಲ್ಲಿ ಸೂಚಿಸಿದ್ದರು. ಇದರಂತೆ ರಾಜನ್ ಶಾ, ನಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.
ರತನ್ ಟಾಟಾ ಬಿಟ್ಟು ಹೋದ 3800 ಕೋಟಿ ರೂ ಆಸ್ತಿ ಹಂಚಿಕೆ ವಿಲ್ ಬಹಿರಂಗ, ಯಾರಿಗೆ ಎಷ್ಟೆಷ್ಟು?
ಟಾಟಾ ನಾಯಿ ಪ್ರೀತಿ
ರತನ್ ಟಾಟಾ ಪ್ರಾಣಿಗಳಿಗಾಗಿ ಮುಂಬೈನಲ್ಲಿ ಆಸ್ಪತ್ರೆ ಕಟ್ಟಿದ್ದಾರೆ. ಈ ಆಸ್ಪತ್ರೆ ಸಾಕು ಪ್ರಾಣಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತದೆ. ರತನ್ ಟಾಟಾ ಸಾವಿಗೂ ಕೆಲ ತಿಂಗಳ ಮುನ್ನ ಬೀದಿ ನಾಯಿಯೊಂದಕ್ಕೆ ರಕ್ತ ಬೇಕಿದೆ. ಸೂಕ್ತ ಬ್ಲಡ್ ಗ್ರೂಪ್ ಇರುವ ನಾಯಿಯಿಂದ ರಕ್ತದಾನ ಮಾಡಲು ಇಚ್ಚಿಸುವ ಮಾಲೀಕರು ಸಂಪರ್ಕಿಸಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಹಲವರು ಆಸ್ಪತ್ರೆಯತ್ತ ದೌಡಾಯಿಸಿದ್ದರು. ಕೊನೆಗೆ ಬ್ಲಡ್ ಗ್ರೂಪ್ ಮ್ಯಾಚ್ ಆಗುವ ನಾಯಿಯಿಂದ ರಕ್ತ ಪಡೆದು ಚಿಕಿತ್ಸೆ ಪಡೆಯುತ್ತಿದ್ದ ನಾಯಿಯ ಜೀವ ಉಳಿಸಿದ್ದರು.
ತಾಜ್ ಹೊಟೆಲ್‌ನಲ್ಲಿ ಬೀದಿ ನಾಯಿಗೆ ರಾಜ ಮರ್ಯಾದೆ
ಮುಂಬೈನಲ್ಲಿ ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚು. ಉರಿ ಬಿಸಿಲು ವಿಪರೀತ. ಈ ವೇಳೆ ರತನ್ ಟಾಟಾ, ಮುಂಬೈನ ಗೇಟ್ ಆಫ್ ಆಫ್ ಇಂಡಿಯಾ ಬಳಿ ಇರುವ ತಾಜ್ ಹೊಟೆಲ್‌ಗೆ ಖಡಕ್ ವಾರ್ನಿಂಗ್ ನೀಡಿದ್ದರು. ತಾಜ್ ಹೊಟೆಲ್ ಬಾಗಿಲುಗಳನ್ನು ತೆರೆದಿಡಬೇಕು, ಯಾವುದೇ ಬೀದಿ ನಾಯಿ ಬಿಸ ಬೇಗೆಯಿಂದ ತಾಜ್ ಹೊಟೆಲ್ ಮುಂಭಾಗದಲ್ಲಿ, ಲಾಂಜ್ ಏರಿಯಾದಲ್ಲಿ ಮಲಗಿದ್ದರೆ ಓಡಿಸಬಾರದು ಎಂದು ಸೂಚಿಸಿದ್ದರು.
ರತನ್ ಟಾಟಾ ಮನೆ ಹಾಗೂ ಕಚೇರಿ ಸಿಬ್ಬಂದಿಗೆ ಆಸ್ತಿ ಹಂಚಿಕೆ
ರತನ್ ಟಾಟಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ರತನ್ ಟಾಟಾ ಕಚೇರಿಯಲ್ಲಿ ಅಂದರೆ ಟಾಟಾ ಸಂಸ್ಥೆಗಳಲ್ಲಿ ಅಲ್ಲ. ರತನ್ ಟಾಟಾ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಒಟ್ಟು 3 ಕೋಟಿ ರೂಪಾಯಿ ಹಂಚಿದ್ದಾರೆ.
ರತನ್ ಟಾಟಾ ಮೊದಲ ಪ್ರೀತಿಗೆ ಅಡ್ಡಿಯಾದ ಇಂಡೋ-ಚೀನಾ ಯುದ್ಧ, ಮದುವೆ ಮುರಿದು ಬಿದ್ದಿದ್ದೇಕೆ?