ಭಾರತದ ಭಗವದ್ಗೀತೆ ಹಾಗೂ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋ ಮನ್ನಣೆ: ಪ್ರಧಾನಿ ಸಂತಸ

Published : Apr 18, 2025, 12:12 PM ISTUpdated : Apr 18, 2025, 12:19 PM IST
ಭಾರತದ ಭಗವದ್ಗೀತೆ ಹಾಗೂ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋ ಮನ್ನಣೆ: ಪ್ರಧಾನಿ ಸಂತಸ

ಸಾರಾಂಶ

ಭಗವದ್ಗೀತೆ ಮತ್ತು ಭರತಮುನಿ ರಚಿತ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋದ ವಿಶ್ವ ದಾಖಲೆಯ ಪಟ್ಟಿಯಲ್ಲಿ ಸ್ಥಾನ. ಸಿಕ್ಕಿದೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಭಾರತದ ಜನರಿಗೆ ಒಂದು ಹೆಮ್ಮೆ ಪಡುವ ವಿಚಾರವೊಂದು ನಡೆದಿದೆ. ಭಾರತ ಹಿಂದೂ ಧಾರ್ಮಿಕ ಗ್ರಂಥ ಭಗವದ್ಗೀತೆ ಹಾಗೂ ಭರತಮುನಿ ರಚಿಸಿರುವ ನಾಟ್ಯಶಾಸ್ತ್ರಕ್ಕೆ ಯುನೆಸ್ಕೋ ಮನ್ನಣೆ ಸಿಕ್ಕಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ. ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರವನ್ನು ಈಗ ಯುನೆಸ್ಕೋದ ವಿಶ್ವ ದಾಖಲೆಯ ಪುಟಗಳಲ್ಲಿ ಕೆತ್ತಲಾಗಿದೆ ಹೀಗಾಗಿ ಭಾರತದ ಈ ಶಾಶ್ವತವಾದ ಬುದ್ಧಿವಂತಿಕೆ ಹಾಗೂ ಕಲಾತ್ಮಕ ಪ್ರತಿಭೆಗೆ ಜಾಗತಿಕ ಮನ್ನಣೆ ಸಿಕ್ಕಿದಂತಾಗಿದೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಚಾರ ಹಂಚಿಕೊಂಡ ಪ್ರಧಾನಿ ಮೋದಿಯವರು, ವಿಶ್ವದೆಲ್ಲೆಡೆ ಇರುವ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಗೀತೆ ಹಾಗೂ ನಾಟ್ಯಶಾಸ್ತ್ರವನ್ನು ಯುನೆಸ್ಕೋದ ಮೆಮರಿ ಆಫ್ ವರ್ಲ್ಡ್‌ ರಿಜಿಸ್ಟ್ರಾರ್‌ನಲ್ಲಿ ಅಳವಡಿಸಲಾಗಿದೆ. ಇದು ನಮ್ಮ ಕಲಾತೀತವಾದ ಬುದ್ಧಿವಂತಿಕೆ ಹಾಗೂ ಶ್ರೀಮಂತ ಸಂಸ್ಕೃತಿಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ. ಈ ಗೀತೆ ಹಾಗೂ ನಾಟ್ಯಶಾಸ್ತ್ರ ನಾಗರಿಕತೆಯನ್ನು ಬೆಳೆಸಿದೆ ಹಾಗೂ ಅದು ನಮ್ಮ ಶತಮಾನಗಳಿಗೂ ಹಿಂದಿನ ಪ್ರಜ್ಞೆಯಾಗಿದೆ. ಈ ಕೃತಿಗಳ ಒಳನೋಟಗಳು ಜಗತ್ತಿಗೆ ಸ್ಪೂರ್ತಿ ನೀಡುತ್ತಲೇ ಇವೆ ಎಂದು ಪ್ರಧಾನಿ ಮೋದಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. 

 

ಹಾಗೆಯೇ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವರು ಕೂಡ ಖುಷಿ ವ್ಯಕ್ತಪಡಿಸಿ ಇದೇ ರೀತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ನಾಗರಿಕ ಪರಂಪರೆಗೆ ಇದು ಒಂದು ಐತಿಹಾಸಿಕ ಕ್ಷಣ! ಶ್ರೀಮದ್ ಭಗವದ್ಗೀತೆ ಮತ್ತು ಭರತ ಮುನಿಗಳ ನಾಟ್ಯಶಾಸ್ತ್ರವನ್ನು ಈಗ ಯುನೆಸ್ಕೋದ ವಿಶ್ವ ದಾಖಲೆಯಲ್ಲಿ ಕೆತ್ತಲಾಗಿದೆ. ಈ ಜಾಗತಿಕ ಗೌರವವು ಭಾರತದ ಶಾಶ್ವತ ಬುದ್ಧಿವಂತಿಕೆ ಮತ್ತು ಕಲಾತ್ಮಕ ಪ್ರತಿಭೆಯನ್ನು ಸಂಭ್ರಮಿಸುವ ಕ್ಷಣವಾಗಿದೆ. ಈ ಕಾಲಾತೀತ ಕೃತಿಗಳು ಸಾಹಿತ್ಯಿಕ ಸಂಪತ್ತಿಗಿಂತ ಹೆಚ್ಚಿನ ಮೌಲ್ಯವುಳ್ಳದ್ದು,  ಅವು ಭಾರತದ ವಿಶ್ವ ದೃಷ್ಟಿಕೋನ ಮತ್ತು ನಾವು ಯೋಚಿಸುವ, ಅನುಭವಿಸುವ, ಬದುಕುವ ಮತ್ತು ವ್ಯಕ್ತಪಡಿಸುವ ವಿಧಾನವನ್ನು ರೂಪಿಸಿದ ತಾತ್ವಿಕ ಮತ್ತು ಸೌಂದರ್ಯದ ಅಡಿಪಾಯಗಳಾಗಿವೆ  ಇದರೊಂದಿಗೆ, ನಮ್ಮ ದೇಶದಿಂದ ಈಗ ಒಟ್ಟು 14 ಶಾಸನಗಳು ಈ ಅಂತರರಾಷ್ಟ್ರೀಯ ದಾಖಲೆಗೆ ಸೇರಿದಂತಾಗಿದೆ ಎಂದು ಸಚಿವ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು