ವಕ್ಫ್‌ ತಿದ್ದುಪಡಿ  ಜಾರಿ ಮಾಡಿದ್ದಕ್ಕೆ ಪ್ರಧಾನಿಗೆ ಬೊಹ್ರಾ ಮುಸ್ಲಿಂ ಸಮುದಾಯದ ಕೃತಜ್ಞತೆ 

Published : Apr 18, 2025, 09:40 AM ISTUpdated : Apr 18, 2025, 09:42 AM IST
ವಕ್ಫ್‌ ತಿದ್ದುಪಡಿ  ಜಾರಿ ಮಾಡಿದ್ದಕ್ಕೆ ಪ್ರಧಾನಿಗೆ ಬೊಹ್ರಾ ಮುಸ್ಲಿಂ ಸಮುದಾಯದ ಕೃತಜ್ಞತೆ 

ಸಾರಾಂಶ

ದಾವೂದಿ ಬೊಹ್ರಾ ಸಮುದಾಯದ ನಿಯೋಗವು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ವಕ್ಫ್‌ ಕಾಯ್ದೆ ಜಾರಿಗೆ ಕೃತಜ್ಞತೆ ಸಲ್ಲಿಸಿದೆ. ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ನವದೆಹಲಿ: ಮುಸ್ಲಿಂ ದಾವೂದಿ ಬೊಹ್ರಾ ಸಮುದಾಯದ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ವಕ್ಫ್‌ (ತಿದ್ದುಪಡಿ) ಕಾಯ್ದೆ ಜಾರಿ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದೆ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬ ಮೋದಿ ದೃಷ್ಟಿಕೋನದಲ್ಲಿ ನಂಬಿಕೆ ಇಟ್ಟ ಸಮುದಾಯ, ಇದು ಬಹುಕಾಲದ ಬೇಡಿಕೆ ಆಗಿತ್ತು ಎಂದು ಮೋದಿಗೆ ಬೊಹ್ರಾ ಸಮುದಾಯ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ತಾಲಿಬಾನ್ ಮೇಲೆ ರಷ್ಯಾ ಹಾಕಿದ್ದ ನಿಷೇಧ ತೆರವು 
ಮಾಸ್ಕೋ: ಮಹತ್ವದ ಬೆಳವಣಿಗೆಯಲ್ಲಿ, 2 ದಶಕಗಳಿಂದ ಅಫ್ಘಾನಿಸ್ತಾನದ ತಾಲಿಬಾನ್‌ಗಳ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ರಷ್ಯಾದ ಸುಪ್ರೀಂ ಕೋರ್ಟ್ ತೆರವುಗೊಳಿ ಸಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಮೂಲಕ ಉಭಯ ದೇಶಗಳ ಸಂಬಂಧ ವೃದ್ಧಿಗೆ ಮುಂದಾದಂತಿದೆ. ಇದಕ್ಕೆ ಆಫ್ಘನ್ ಸರ್ಕಾರ ಹರ್ಷ ವ್ಯಕ್ತಪಡಿಸಿದೆ. 

ಫ್ಲೋರಿಡಾ ವಿವಿ ಶೂಟೌಟ್‌: 6 ಜನಕ್ಕೆ ಗಾಯ, ವಿವಿ ಬಂದ್ 
ಫ್ಲೋರಿಡಾ: ಅಮೆರಿಕದ ಫ್ಲೋರಿಡಾ ವಿವಿಯಲ್ಲಿ ಗುರುವಾರ ಶೂಟೌಟ್ ನಡೆದಿದೆ. ಘಟನೆಯಲ್ಲಿ 6 ಮಂದಿಗೆ ಗಾಯವಾಗಿದೆ. ಘಟನೆಯ ಬಳಿಕ ಶಂಕಿತ ಶೂಟರ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಶೂಟೌಟ್ ಘಟನೆಯ ನಂತರ ವಿವಿಯನ್ನು ಬಂದ್ ಮಾಡಲಾಗಿದ್ದು, ಅಲ್ಲಿನ ಎಲ್ಲ ಕ್ಲಾಸ್, ಕಾಠ್ಯಕ್ರಮ ರದ್ದು ಮಾಡಲಾಗಿದೆ.

ಸೆನ್ಸೆಕ್ಸ್ 1508 ಅಂಕ ನೆಗೆತ: ಮತ್ತೆ 78 ಸಾವಿರಕ್ಕೆ ಜಿಗಿತ 
ಮುಂಬೈ: ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೊಡೆತದಿಂದ ಕುಸಿದಿದ್ದ ಬಾಂಬೆ ಷೇರು ಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 1508 ಅಂಕ ಏರಿಕೆ ಕಂಡು ಮತ್ತೆ 78 ಸಾವಿರ ಅಂಕ ತಲುಪಿದೆ. ಸೆನ್ಸೆಕ್ಸ್ 1,508 ಅಂಕ ಜಿಗಿದು 78,553.20ಕ್ಕೆ ಹಾಗೂ ನಿಫ್ಟಿ 414 ಅಂಕ ಜಿಗಿದು 23,851ಕ್ಕೆ ಸ್ಥಿರವಾದವು. ವಿದೇಶಿ ಸುಂಕದ ಕುರಿತು ಅಮೆರಿಕ- ಜಪಾನ್ ವ್ಯಾಪಾರ ಮಾತುಕತೆ ಫಲಪ್ರದ ಆಗುವ ನಿರೀಕ್ಷೆ ಕಂಡು ಬಂದ ಕಾರಣ ವಿದೇಶಿ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡಿದರು. ಆದ್ದರಿಂದ ಪೇಟೆ, ಶೇ.2ರಷ್ಟು ಏರಿಕೆ ದಾಖಲಿಸಿವೆ ಎಂದು ವಿಶ್ಲೇಷಿಸಲಾಗಿದೆ. 

ಜಪಾನ್‌ನಿಂದ ಭಾರತಕ್ಕೆ 2 ಬುಲೆಟ್ ರೈಲು ಉಡುಗೊರೆ: ಮುಂಬೈ-ಅಹಮದಾಬಾದ್‌ ...

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು