ರಾತ್ರಿ ಸುಮಾರು 1 ಗಂಟೆಯಿಂದ ವರುಣ್ ಮತ್ತು ಶಿಲ್ಪಾ ಪ್ರಜ್ಞೆ ಕಳೆದುಕೊಂಡಿದ್ದು, ಯಾವುದಕ್ಕೂ ಸ್ಪಂದಿಸುತ್ತಿಲ್ಲ. ವರುಣ್-ಶಿಲ್ಪಾ ದಂಪತಿಯ ಮಕ್ಕಳಾದ 18 ವರ್ಷದ ಮಗಳು ನಿಹಾರಿಕಾ ಮತ್ತು 10 ವರ್ಷದ ಮಗ ಶೌರ್ಯ ಆತಂಕದಲ್ಲಿದ್ದಾರೆ.
ಜೈಪುರ: ಉದಯಪುರ ಜಿಲ್ಲೆಯ ಸುಖೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಬೃಹತ್ ಬಂಗಲೆಯಲ್ಲಿ ವಾಸವಾಗಿದ್ದ ಕೋಟ್ಯಧಿಪತಿ ಕಳೆದ 20 ಗಂಟೆಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಾರಣ ರಾಜಸ್ಥಾನದಿಂದ ನೇಪಾಳದವರೆಗೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಆಗರ್ಭ ಶ್ರೀಮಂತರಾದ ವರುಣ್ ಗಾಂಧಿ ಮತ್ತು ಪತ್ನಿ ಶಿಲ್ಪಾ ಗಾಂಧಿ ಎಚ್ಚರವಾಗುವುದನ್ನೇ ಪೊಲೀಸರು ಕಾಯುತ್ತಿದ್ದಾರೆ. ರಾತ್ರಿ ಸುಮಾರು 1 ಗಂಟೆಯಿಂದ ವರುಣ್ ಮತ್ತು ಶಿಲ್ಪಾ ಪ್ರಜ್ಞೆ ಕಳೆದುಕೊಂಡಿದ್ದು, ಯಾವುದಕ್ಕೂ ಸ್ಪಂದಿಸುತ್ತಿಲ್ಲ. ವರುಣ್-ಶಿಲ್ಪಾ ದಂಪತಿಯ ಮಕ್ಕಳಾದ 18 ವರ್ಷದ ಮಗಳು ನಿಹಾರಿಕಾ ಮತ್ತು 10 ವರ್ಷದ ಮಗ ಶೌರ್ಯ ಆತಂಕದಲ್ಲಿದ್ದು, ಮಾತನಾಡಲು ಸಹ ಹೆದರುತ್ತಿದ್ದಾರೆ. ಶೌರ್ಯಾ ಇನ್ನು ಅಸ್ವಸ್ಥನಾಗಿದ್ದು, ನಿಹಾರಿಕಾ ಪೊಲೀಸರ ಜೊತೆ ಮಾತನಾಡಲು ಪ್ರಯತ್ನಿಸುತ್ತಿದ್ದಾಳೆ.
ಉದಯಪುರದಿಂದ ನೇಪಾಳದವರೆಗೂ ಅಲರ್ಟ್
undefined
ನಾವು ದಂಪತಿಯ ಎಚ್ಚರವಾಗೋದನ್ನೇ ಕಾಯುತ್ತಿದ್ದೇವೆ ಎಂದು ಉದಯಪುರ ಎಸ್‌ಪಿ ಯೋಗೇಶ್ ಗೋಯಲ್ ಹೇಳಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ವರದಿಗಳ ಪ್ರಕಾರ, ನೇಪಾಳದವರೆಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ವರುಣ್ ಮನೆಯಲ್ಲಿ ಕೆಲಸಕ್ಕಾಗಿ ಕರೀಷ್ಮಾ ಹೆಸರಿನ ಮಹಿಳೆಯನ್ನು ನೇಮಕ ಮಾಡಿಕೊಂಡಿದ್ದರು. ವರುಣ್ ಅವರಿಗೆ ಕರೀಷ್ಮಾ ಪರಿಚಯಸ್ಥರ ಮೂಲಕ ಪರಿಚಯವಾಗಿದ್ದಳು. ಕರೀಷ್ಮಾ ನೇಪಾಳ ಮೂಲದವಳಾಗಿದ್ದು, ಅಡುಗೆ ಸೇರಿದಂತೆ ಮನೆಗೆಲಸ ಮಾಡಿಕೊಂಡಿದ್ದಳು.
ಕರೀಷ್ಮಾ ಮನೆಯಲ್ಲಿ ಎಲ್ಲರ ಜೊತೆ ಬೆರೆತು ಕೆಲಸ ಮಾಡುತ್ತಿದ್ದಳು. ಆಕೆ ಮಾಡಿದ ಅಡುಗೆ ನಮಗೆಲ್ಲರಿಗೂ ಇಷ್ಟವಾಗುತ್ತಿತ್ತು. ನಿನ್ನೆ ರಾತ್ರಿಯೂ ಸಹ ಆಕೆಯೇ ಅಡುಗೆ ಮಾಡಿದ್ದಳು. ನಾವು ಸಹ ಊಟ ಮಾಡಿದ್ದೇವು. ಊಟಕ್ಕೂ ಮೊದಲು ಕರೀಷ್ಮಾಳನ್ನು ಭೇಟಿಯಾಗಲು ಮೂವರು ಬಂದಿದ್ದರು. ಮೂವರು ಸಹ ನೇಪಾಳದಿಂದ ಬಂದಿದ್ದರು. ರಾತ್ರಿ ಊಟ ಮಾಡಿದ ಬಳಿಕ ಯಾರಿಗೂ ಪ್ರಜ್ಞೆಯೇ ಇಲ್ಲ ಎಂದು ವರುಣ್ ಗಾಂಧಿಯವರ ಮಗಳು ನಿಹಾರಿಕಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಬೈಕ್‌ನಲ್ಲಿ ಕುಳಿತಾಗ ಅಮ್ಮನ ಕೈಯಿಂದ ಜಾರಿ ಬಿದ್ದ 8 ತಿಂಗಳು ಮಗು ಸಾವು
ಸನ್ನೆ ಮೂಲಕ ಉತ್ತರ ನೀಡುತ್ತಿರುವ ನಿಹಾರಿಕಾ
ವರುಣ್ ಕುಟುಂಬ ವಾಸಿಸುತ್ತಿರುವ ಸೊಸೈಟಿಯಲ್ಲಿರುವ ವಿಕಾಸ ಸಮಿಯಿ ಅಧ್ಯಕ್ಷ ವಿವೇಕ್ ಸಿಂಗ್ ರಜಪೂತ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಬೆಳಗಿನ ಜಾವ ಸುಮಾರು 5 ಗಂಟೆಗೆ ಎದ್ದಾಗ, ನಿಹಾರಿಕಾ ಕೈ ಸನ್ನೆ ಮೂಲಕ ಹೇಳುತ್ತಿರೋದ ಕಿಟಕಿಯಲ್ಲಿ ಕಾಣಿಸಿತು. ಸೂಕ್ಷವಾಗಿ ಗಮನಹರಿಸಿದಾಗ ಆಕೆಯ ಕಾಲುಗಳನ್ನು ಕಟ್ಟಲಾಗಿತ್ತು. ನಾನು ಕೂಡಲೇ ಪತ್ನಿಯನ್ನು ಕರೆದುಕೊಂಡು ಅವರ ಮನೆಗೆ ಹೋಗಿ ನಿಹಾರಿಕಳನ್ನು ಬಂಧನದಿಂದ ಬಿಡಿಸಿದೇವು. ನಮ್ಮನ್ನು ನೋಡಿ ಮಗು ನಿಹಾರಿಕಾ ಜೋರಾಗಿ ಅಳಲು ಆರಂಭಿಸಿದಳು ಎಂದು ಹೇಳಿದ್ದಾರೆ.
ನಿಹಾರಿಕಾ ಅಳುತ್ತಲೇ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕರೀಷ್ಮಾನ ನಮ್ಮನ್ನು ಬಂಧಿಸಿದ್ದಾಳೆ. ಊಟ ಮಾಡಿದ ಬಳಿಕ ಮನೆಯಲ್ಲಿ ಯಾರಿಗೂ ಪ್ರಜ್ಷೆಯೇ ಇಲ್ಲ. ಮನೆಯಲ್ಲಿ ಎಲ್ಲರ ಕೈ-ಕಾಲುಗಳನ್ನು ಕಟ್ಟಲಾಗಿತ್ತು ಎಂದು ವಿವೇಕ್ ಸಿಂಗ್ ರಜಪೂತ್ ಹೇಳಿದ್ದಾರೆ. ರಾತ್ರಿ ನಿಹಾರಿಕಾ ಕಡಿಮೆ ಊಟ ಮಾಡಿದ ಪರಿಣಾಮ ಆಕೆ ದೀರ್ಘಕಾಲದವರೆಗೆ ಪ್ರಜ್ಞೆ ತಪ್ಪಿಲ್ಲ ಎಂದು ತಿಳಿದು ಬಂದಿದೆ. ಆಹಾರದಲ್ಲಿ ಜ್ಞಾನ ತಪ್ಪಿಸುವ ಔಷಧಿ ಸೇರಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಒಂದೇ ದಿನ ಮಾವ & ಸೊಸೆಯ ಸಾವು; ಅಮ್ಮನ ಮಡಿಲಿಗಾಗಿ ಅಳುತ್ತಿದೆ 6 ತಿಂಗಳ ಕಂದಮ್ಮ
ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ವರುಣ್ ಗಾಂಧಿ ಉದಯಪುರ ಮತ್ತು ರಾಜಸ್ಥಾನದ ಅನೇಕ ನಗರಗಳಲ್ಲಿ ಖನಿಜಗಳ ಉದ್ಯಮವನ್ನು ಹೊಂದಿದ್ದಾರೆ. ಇದಲ್ಲದೇ ಹಲವು ರಾಜ್ಯಗಳಲ್ಲಿ ವ್ಯಾಪಾರ ಹೊಂದಿದ್ದಾರೆ. ಕರೀಷ್ಮಾ ಜೊತೆ ದೊಡ್ಡ ಗ್ಯಾಂಗ್ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಎಸ್‌ಪಿ ಯೋಗೀಶ್ ಗೋಯಲ್ ಮಾಹಿತಿ ನೀಡಿದ್ದಾರೆ.