ಭಯೋತ್ಪಾದನೆ ವಿರುದ್ದ ಕೇಂದ್ರ ಸರ್ಕಾರ ಮತ್ತೆ ಕಠಿಣ ಕ್ರಮ ಕೈಗೊಂಡಿದೆ. ಖಲಿಸ್ತಾನಿ ಬೆಂಬಲಿಸುವ ಸಿಖ್ ಫಾರ್ ಜಸ್ಟೀಸ್ ಉಗ್ರ ಸಂಘಟನೆ ಮೇಲಿನ ನಿಷೇಧವನ್ನು ಮತ್ತೆ 5 ವರ್ಷಗಳ ಕಾಲ ಮುಂದುವರಿಸಿದೆ.
ನವದೆಹಲಿ(ಜು.09) ಭಾರತದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ, ಹೀಗೆ ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟ ಸಿಖ್ ಫಾರ್ ಜಸ್ಟೀಸ್ ಉಗ್ರ ಸಂಘಟನೆ ಮೇಲಿನ ನಿಷೇಧವನ್ನು ಮತ್ತೆ 5 ವರ್ಷಕ್ಕೆ ವಿಸ್ತರಿಸಿದೆ. ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಸಿಖ್ ಫಾರ್ ಜಸ್ಟೀಸ್ ಸಂಘಟನೆಗೆ ಮತೆ ನಿಷೇಧಗೊಂಡಿದೆ.
ಖಲಿಸ್ತಾನಿ ಉಗ್ರ ನೀತಿ ಹಾಗೂ ಸಂಘಟನೆಯನ್ನು ಬೆಂಬಲಿಸುವ ಸಿಖ್ ಫಾರ್ ಜಸ್ಟೀಸ್(SFJ) ಸಂಘಟನೆಗೆ ಗುರುತ್ವಂತ್ ಸಿಂಗ್ ಪನ್ನೂನ್ ನಾಯಕ. ಭಾರತ ವಿರುದ್ಧ ಈಗಾಗಲೇ ಹಲವು ಭಯೋತ್ಪಾದನಾ ಕೃತ್ಯಗಳನ್ನು , ಬೆದರಿಕೆಗಳನ್ನು ನೀಡಿರುವ ಈ ಉಗ್ರ ಸಂಘಟನೆಯನ್ನು 2019ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು. ದೇಶದ ಸಾರ್ವಭೌಮತ್ವ, ಐಕ್ಯತೆ ಹಾಗೂ ಶಾಂತಿ ಸುವ್ಯಸ್ಥಗೆ ಧಕ್ಕೆ ತರುತ್ತಿರುವ SFJ ಉಗ್ರ ಸಂಘಟನೆಯನ್ನು ನಿಷೇಧಿಸಿತ್ತು. 2019ರಿಂದ ಜುಲೈ 10, 2024ರ ವರೆಗೆ ನಿಷೇಧ ವಿಧಿಸಲಾಗಿತ್ತು. ಇದೀಗ ಮತ್ತೆ 5 ವರ್ಷಗಳ ಕಾಲ ನಿಷೇಧ ವಿಸ್ತರಿಸಲಾಗಿದೆ.
undefined
ಮುಸ್ಲಿಂ ಸಮುದಾಯವನ್ನು ದೇಶದ ವಿರುದ್ಧ ಎತ್ತಿ ಕಟ್ಟುತ್ತಿದೆಯಾ ಸಿಖ್ ಪ್ರತ್ಯೇಕತವಾದಿ ಗುಂಪು ಎಸ್‌ಎಫ್‌ಜೆ
SFJ ಉಗ್ರ ಸಂಘಟನೆ ಪಂಜಾಬ್‌ನಲ್ಲಿ ಹಲವು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದೆ. ಕಳೆದ 5 ವರ್ಷದಲ್ಲಿ SFJ ಸಂಘಟನೆ ದೇಶದ ಐಕ್ಯತೆ, ಸೌರ್ವಭೌಮತ್ವ ಹಾಗೂ ಶಾಂತಿಗೆ ಧಕ್ಕೆ ತರುವ ಕೆಲಸ ಮಾಡಿದೆ. ಖಲಿಸ್ತಾನಿ ಚಳುವಳಿಗೆ ಬೆಂಬಲ ನೀಡಿದೆ. ಜೊತೆಗೆ ಪಂಜಾಬ್ ಸೇರಿದಂತೆ ಭಾರತದಲ್ಲಿನ ಭಯೋತ್ಪಾದಕರ ಜೊತೆ SFJ ಸಂಘಟನೆ ಸಂಪರ್ಕದಲ್ಲಿದೆ. ಈ ಉಗ್ರರ ಜೊತೆ ಸೇರಿ ದೇಶ ವಿರೋಧಿ ಚಟುವಟಿಕೆಯನ್ನು ನಡೆಸುತ್ತಿದೆ.
ವಿದೇಶದಲ್ಲಿದ್ದುಕೊಂಡು ಭಾರತದಲ್ಲಿ ಶಾಂತಿ ಕದಡುವ ನಿರಂತರ ಯತ್ನ ಮಾಡುತ್ತಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹಾಗೂ ಸಿಖ್ ಫಾರ್ ಜಸ್ಟೀಸ್ ಸಂಘಟನೆ ಹಲವು ಬೆದರಿಕೆ ಹಾಕಿದೆ. ಆಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ರ್‍ಯಾಲಿಯನ್ನು ಗುರಿಯಾಗಿಸಿ ದಾಳಿ ಮಾಡುವಂತೆ ಪನ್ನೂನ್ ಉತ್ತರಪ್ರದೇಶದ ಮುಸ್ಲಿಮರಿಗೆ ಕರೆ ನೀಡಿದ್ದ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ಕೃತ್ಯಕ್ಕೆ ಪನ್ನೂನ್ ಬೆಂಬಲ ವ್ಯಕ್ತಪಡಿಸಿದ್ದು, ಕಾಶ್ಮೀರ್-ಖಲಿಸ್ತಾನಿ ಡೆಸ್ಕ್ ಸ್ಥಾಪನೆ ಮಾಡಬೇಕು ಎಂದು ಕರೆ ನೀಡಿದ್ದ. ಪದೇ ಪದೇ ಭಾರತದ ಮೇಲಿ ದಾಳಿಗೆ ಕರೆ ನೀಡಲಾಗಿತ್ತು.
ಆಯೋಧ್ಯೆಯಲ್ಲಿ SFJ ಉಗ್ರ ಸಂಘಟನೆಯ ಮೂವರು ಅರೆಸ್ಟ್, ಹೈ ಅಲರ್ಟ್ ಘೋಷಣೆ!