ಒಂದೇ ದಿನ ಮಾವ & ಸೊಸೆಯ ಸಾವು; ಅಮ್ಮನ ಮಡಿಲಿಗಾಗಿ ಅಳುತ್ತಿದೆ 6 ತಿಂಗಳ ಕಂದಮ್ಮ

By Mahmad RafikFirst Published Jul 9, 2024, 6:53 PM IST
Highlights

ಒಂದೇ ದಿನ ಮಾವ ಮತ್ತು ಸೊಸೆ ಮೃತರಾಗಿದ್ದು, ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಇತ್ತ ಮಹಿಳೆ ಆರು ತಿಂಗಳ ಅಮ್ಮನಿಗಾಗಿ ಅಳುತ್ತಿದೆ. ಮಗುವಿನ ಕಣ್ಣೀರಿಗೆ ಇಡೀ ಊರಿಗೆ ಊರು ದುಃಖದಿಂದ ಅಳುತ್ತಿದೆ.

ಜೈಪುರ: ರಾಜಸ್ಥಾನದ ಅಲ್ವರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಇಂದು ಬೆಳಗ್ಗೆ ಇಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಎರಡು ಜೀವಗಳನ್ನು ಕಳೆದುಕೊಂಡ ಒಂದೇ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಮಾವ ಮತ್ತು ಸೊಸೆ ಬೈಕ್‌ನಲ್ಲಿ ರಸ್ತೆಯನ್ನು ಕ್ರಾಸ್ ಮಾಡುತ್ತಿರುವಾಗ ವೇಗವಾಗಿ ಬಂದ ವಾಹನವೊಂದು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಇಬ್ಬರು ಮೃತರಾಗಿದ್ದಾರೆ. ಮಹಿಳೆಯ ಆರು ತಿಂಗಳ ಮಗು ತಾಯಿ ಮಡಿಲಿಗಾಗಿ ಅಳುತ್ತಿದೆ. ತಾಯಿ ಇನ್ನೆಂದೂ ಬಾರದ ಲೋಕಕ್ಕೆ ಹೋಗಿದ್ದಾಳೆ ಎಂಬ ವಿಷಯವನ್ನು ಕಂದನಿಗೆ ಅರ್ಥ ಮಾಡಿಸೋದು ಹೇಗೆ ಎಂದು ಕುಟುಂಬಸ್ಥರು ಕಣ್ಣೀರು ಇಡುತ್ತಿದ್ದಾರೆ.

ರಾಜಸ್ಥಾನದ ಅಲ್ವರಾ ಜಿಲ್ಲೆಯ ಹರ್ಸೌಲ್ ಠಾಣಾ ಕ್ಷೇತ್ರದ ಮಾಜರಾ ಗ್ರಾಮದ 50 ವರ್ಷದ ಸುಭಾಷ್ ಯಾದವ್ ಮತ್ತು 23 ವರ್ಷದ ಪೂಜಾ ಯಾವದ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ರಾಜ್ಯ ಹೆದ್ದಾರಿ-52 ಕ್ರಾಸ್ ಮಾಡುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಕಾರ್, ಮಾವ-ಸೊಸೆಯಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಬಳಿಕ ಬೈಕನ್ನ ಸುಮಾರು 100 ಮೀಟರ್ ವರೆಗೆ ಎಳೆದುಕೊಂಡು ಹೋಗಿದೆ. ಸ್ಥಳದಲ್ಲಿಯೇ ಇಬ್ಬರು ಜೀವ ಬಿಟ್ಟಿದ್ದಾರೆ. ಘಟನೆ ಬಳಿಕ ಚಾಲಕ ಕಾರ್ ಬಿಟ್ಟು ಪರಾರಿಯಾಗಿದ್ದಾನೆ. ಆತನನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೂಜಾ ಯಾದವ್ ಇಂದು ಬಿಎ ಅಂತಿಮ ಪರೀಕ್ಷೆ ನೀಡಲು ಮಾವನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

Latest Videos

ಕ್ಲಾಸ್‌ರೂಮ್‌ನಲ್ಲಿಯೇ ಟೀಚರ್‌ಗೆ ಚಾಕುವಿನಿಂದ ಇರಿದ ವಿದ್ಯಾರ್ಥಿ

ಎರಡು ವರ್ಷದ ಹಿಂದೆ ಮದುವೆ ಆಗಿತ್ತು!

ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಸೂತಕದ ಕರಿ ಛಾಯೆ ಆವರಿಸಿದೆ. ಎರಡು ವರ್ಷದ ಹಿಂದೆ ಸುಭಾಷ್ ಯಾದವ್ ಪುತ್ರ ಸುಕೇಶ್ ಜೊತೆ ಪೂಜಾ ಮದುವೆಯಾಗಿತ್ತು. ಮದುವೆ ಬಳಿಕವೂ ಪೂಜಾ ತಮ್ಮ ಶಿಕ್ಷಣ ಮುಂದುವರಿಸಿದ್ದರು. ಆರು ತಿಂಗಳ ಹಿಂದೆಯಷ್ಟೇ ಮುದ್ದಾದ ಮಗುವಿನ ತಾಯಿ ಆಗಿದ್ದರು. ಪೂಜಾ ಪತಿ ಸುಕೇಶ್ ಕೃಷಿ ಕೆಲಸದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಸುಭಾಷ್ ಯಾದವ್ ಸಹ ಕೃಷಿ ಜೊತೆಯಲ್ಲಿ ಎಲ್‌ಐಸಿ ಏಜೆಂಟ್ ಕೆಲಸ ಮಾಡಿಕೊಂಡಿದ್ದರು.

ಹಿಟ್ ಆಂಡ್ ರನ್ ಕೇಸ್‌ ಹೆಚ್ಚಳ

ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ಹಿಟ್ ಆಂಡ್ ರನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಜಾಗರೂಕತೆಯ ಚಾಲನೆಯಿಂದ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ನಡೆದ ಅಪಘಾತದಲ್ಲಿ ಚಾಲಕ ಕಾರ್ ವೇಗವಾಗಿ ಚಾಲನೆ ಮಾಡಿಕೊಂಡು ಬಂದಿದ್ದರಿಂದಲೇ ಅಪಘಾತ ನಡೆದಿದೆ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 

ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳಿ; ಜಾಹೀರಾತು ವೈರಲ್

click me!