
ಲಖ್ನೋ(15): ಉತ್ತರ ಪ್ರದೇಶದ ಬರೇಲಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಪಾಕಿಸ್ತಾನವನ್ನು ಶ್ಲಾಘಿಸುವ ಹಾಡುಗಳನ್ನು ನುಡಿಸುವ ಮೂಲಕ ರಾಷ್ಟ್ರೀಯ ಏಕೀಕರಣಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರು 16 ಹಾಗೂ 17 ವರ್ಷ ಪ್ರಾಯದ ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬರೇಲಿ (Bareilly) ಜಿಲ್ಲೆಯ ಭೂತಾ ಪ್ರದೇಶದ (Bhuta area)ಇಬ್ಬರು ಸೋದರ ಸಂಬಂಧಿ ಸಹೋದರರ ವಿರುದ್ಧ ಬುಧವಾರ ಎಫ್‌ಐಆರ್ (FIR) ದಾಖಲಿಸಲಾಗಿದೆ. ಪಾಕಿಸ್ತಾನವನ್ನು ಹಾಡಿ ಹೊಗಳಿದ್ದನ್ನು ವಿರೋಧಿಸಿ ಗ್ರಾಮದ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು. ದೂರುದಾರರು ಹಾಡುಗಳನ್ನು ಕೇಳುವುದನ್ನು ನಿಲ್ಲಿಸುವಂತೆ ಇಬ್ಬರನ್ನು ಕೇಳಿದಾಗ, ಅವರು ನಿಂದನೆಯನ್ನು ಪ್ರಾರಂಭಿಸಿದರು ಮತ್ತು ಭಾರತದ ಬಗ್ಗೆ ಕೆಟ್ಟ ಮಾತುಗಳನ್ನು ಹೇಳಿದರು ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ 6 SDPI ಕಾರ್ಯಕರ್ತರ ಬಂಧನ!
ಈ ಇಬ್ಬರು ಬಾಲಕರು ಜೋರಾಗಿ ಕೇಳುತ್ತಿದ್ದ ಈ ಹಾಡನ್ನು ದೂರುದಾರರು ರೆಕಾರ್ಡ್ ಮಾಡಿಕೊಂಡಿದ್ದಾರೆ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಪಾಕಿಸ್ತಾನವನ್ನು ಹೊಗಳುವ ಹಾಡು ಎಂಬುದರ ಅರಿವಿಲ್ಲದೇ ಬಾಲಕರು ಈ ಹಾಡನ್ನು ಕೇಳಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಬಾಲಕನ ಸಂಬಂಧಿಯೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ಘನತೆ ಹಾಗೂ ಏಕತೆಗೆ ಸೆಕ್ಷನ್ 153B, ಸೆಕ್ಷನ್ 504 ಉದ್ದೇಶಪೂರ್ವಕ ಅವಮಾನ, ಸೆಕ್ಷನ್ 506 ಅಪರಾಧ ಬೆದರಿಕೆ ಭಾರತೀಯ ದಂಡ ಸಂಹಿತೆಯ ಈ ಕಾಯಿದೆಗಳಡಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬುಧವಾರ ಸಂಜೆ ಈ ಬಾಲಕರನ್ನು ಪೊಲೀಸರು ಬಂದು ಬಂಧಿಸಿ ಕರೆದೊಯ್ದಿದ್ದು ನಂತರ ರಾತ್ರಿ ಇಡೀ ಠಾಣೆಯಲ್ಲೇ ಈ ಆರೋಪಿಗಳನ್ನು ಕುಳ್ಳಿರಿಸಿದ್ದರು ಎಂದು ತಿಳಿದು ಬಂದಿದೆ.
SDPI ವಿಜಯೋತ್ಸವ ವೇಳೆ ಪಾಕ್ ಪರ ಘೋಷಣೆ: ಮೂವರ ಬಂಧನ
ಬರೇಲಿ ಎಸ್‌ಎಸ್ಪಿ ರೋಹಿತ್ ಸಿಂಗ್ ಸಜ್ವನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೊಲೀಸರು ಬಾಲಕರನ್ನು ರಾತ್ರೀ ಇಡೀ ಬಂಧನದಲ್ಲಿ ಇರಿಸಿದ್ದರು ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ನನಗೆ ಹೇಳಿದ ಪ್ರಕಾರ ಅವರನ್ನು ಬೆಳಗ್ಗೆ ವಿಚಾರಣೆ ನಡೆಸಲು ಠಾಣೆಗೆ ಕರೆಸಲಾಗಿತ್ತು. ಇಂತಹ ಪ್ರಕರಣಗಳಲ್ಲಿ ನೋಟೀಸ್ ಕಳುಹಿಸುವ ನಿಯಮವಿದೆ. ರೆಕಾರ್ಡ್ ಆಗಿರುವ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗಿಲ್ಲ. ಹಿರಿಯ ಪೊಲೀಸರಿಗೆ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಿಳಿಸುವೆ ಎಂದು ಹೇಳಿದರು.
ಕಳೆದ ವರ್ಷ ಜನವರಿಯಲ್ಲಿ ಪಂಚಾಯತ್ ಚುನಾವಣೆ ಫಲಿತಾಂಶದ ಬಳಿಕ SDPI ಕಾರ್ಯಕರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ದೇಶದ್ರೋಹದ ಕೆಲಸ ಮಾಡಿದ್ದರು. ಪಾಕಿಸ್ತಾನ ಜಿಂದಾಬ್ ಘೋಷಣೆ ಕೂಗಿದ ವಿಡಿಯೋ ಬಳಿಕ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು 6 SDPI ಕಾರ್ಯಕರ್ತರನ್ನು ಬಂಧಿಸಿದ್ದರು.
ಎಸ್‌ಡಿಪಿಐ ಬೆಂಬಲಿತರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆಗಿ ಆಕ್ರೋಶಕ್ಕೆ ತುತ್ತಾಗಿದ್ದ ಹಿನ್ನೆಲೆ ಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿಗಳಾದ ಮೊಹಮ್ಮದ್ ಹರ್ಷದ್ (22), ದಾವೂದ್ (36) ಹಾಗೂ ಇಸಾಕ್ (28) ಎಂಬುವರನ್ನು ಬಂಧಿಸಿದ್ದರು.
ಎಸ್‌ಡಿಪಿಐ ಒಂದು ಸಂವಿಧಾನ ನಿಯಮದಡಿ ನೋಂದಣಿಯಾದ ರಾಜಕೀಯ ಪಾರ್ಟಿ ಎಂದುಕೊಂಡಿದ್ದೆವು. ಆದರೆ ಅದು ಭಯೋತ್ಪಾದನೆಗೆ ಪೂರಕವಾಗಿ ವರ್ತಿಸುತ್ತಿದೆ. ಅದು ಪಕ್ಷವಾದ್ದರಿಂದ ನಿಷೇಧಿಸುವುದು ಚುನಾವಣಾ ಆಯೋಗ ವ್ಯಾಪ್ತಿಗೆ ಬರುತ್ತದೆ ಎಂದು ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್ ಘಟನೆಯ ಬಳಿಕ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ