
ಅಹ್ಮದಾಬಾದ್: ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೇಂದ್ರ ಸರ್ಕಾರದ ನೀತಿಯಿಂದಾಗಿ ಮುಂದಿನ 10 ವರ್ಷಗಳಲ್ಲಿ ದೇಶವು ದಾಖಲೆ ಸಂಖ್ಯೆಯ ವೈದ್ಯರನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಲಾದ 200 ಹಾಸಿಗೆಗಳ ಕೆ.ಕೆ. ಪಟೇಲ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದರು. ಈ ಆಸ್ಪತ್ರೆಯನ್ನು ಲೆಯುವಾ ಪಟೇಲ್ ಸಮುದಾಯದವರು ನಿರ್ಮಿಸಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಹೊಂದುವ ಗುರಿ ಮತ್ತು ವೈದ್ಯಕೀಯ ಶಿಕ್ಷಣವು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವ ಗುರಿಯಿಂದಾಗಿ 10 ವರ್ಷಗಳ ನಂತರ ದೇಶವು ದಾಖಲೆ ಸಂಖ್ಯೆಯ ವೈದ್ಯರನ್ನು ಪಡೆಯಲು ಕಾರಣವಾಗಲಿದೆ ಎಂದು ಪ್ರಧಾನಿ ಹೇಳಿದರು. ಎರಡು ದಶಕಗಳ ಹಿಂದೆ ಗುಜರಾತ್ ಕೇವಲ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು, ಆದರೆ ಕಳೆದ 20 ವರ್ಷಗಳಲ್ಲಿ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣದ ಸನ್ನಿವೇಶವು ಅಗಾಧವಾಗಿ ಸುಧಾರಿಸಿದೆ ಎಂದು ಶ್ರೀ ಮೋದಿ ಹೇಳಿದರು.
Russia-Ukraine War: ವೈದ್ಯಕೀಯ ಶಿಕ್ಷಣ ಬಿಟ್ಟು ಬಂದ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು?
ಈಗ ರಾಜ್ಯವು ಒಂದು AIIMS ಮತ್ತು ಮೂರು ಡಜನ್‌ಗಿಂತಲೂ ಹೆಚ್ಚು ಇತರ ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಈ ಹಿಂದೆ ಗುಜರಾತ್‌ನ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 1,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈಗ ಈ ಕಾಲೇಜುಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ರಾಜ್‌ಕೋಟ್‌ನಲ್ಲಿರುವ AIIMS 2021 ರಿಂದ 50 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ ಎಂದು ಮೋದಿ ಹೇಳಿದರು.
ಇನ್ನು ಕೋವಿಡ್ ಬಗ್ಗೆ ಮಾತನಾಡಿದ ಪ್ರಧಾನಿ ಕೋವಿಡ್ ಇನ್ನೂ ದೂರವಾಗಿಲ್ಲ ಮತ್ತು ಜನರು ಅದನ್ನು ಸುಲಭವಾಗಿ ತೆಗೆದುಕೊಳ್ಳಬಾರದು ಎಂದು ಒತ್ತಿ ಹೇಳಿದ ಪ್ರಧಾನಿ, ಭಾರತದಲ್ಲಿ ತನ್ನ ಮೂಲವನ್ನು ಹೊಂದಿರುವ ಯೋಗ ಮತ್ತು ಆಯುರ್ವೇದವು ೀ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಗಮನ ಸೆಳೆದಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗದ ಆಗಮನದ ನಂತರ ಜಗತ್ತಿನಾದ್ಯಂತ ಜನರು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿದ್ದರಿಂದ ಭಾರತದಿಂದ ಅರಿಶಿನ ರಫ್ತು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಇಡೀ ವಿಶ್ವಕ್ಕೆ ಆಹಾರ ಪೂರೈಸಲು ನಾವು ಸಿದ್ಧ: ಮೋದಿ
ಆರೋಗ್ಯಕರ ಜೀವನದ ಸಂದೇಶವನ್ನು ಹರಡಲು, ಜೂನ್ 21 ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನದಂದು ಜಿಲ್ಲೆಯ ನಾಗರಿಕರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಬೇಕೆಂದು ಮೋದಿ ಅವರು ಕಚ್‌ನ ಜನರನ್ನು ಒತ್ತಾಯಿಸಿದರು. ಗುಜರಾತ್ ಮತ್ತು ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ವಿದೇಶದಲ್ಲಿ ವಾಸಿಸುವ ಕಚ್‌ನ ಜನರ ಸಹಾಯವನ್ನು ಕೇಳಿದ ಪ್ರಧಾನಿ ಅವರು ರಾನ್ ಉತ್ಸವದ ಸಮಯದಲ್ಲಿ ವೈಟ್ ರನ್ ಆಫ್ ಕಚ್ ಮತ್ತು ಸರ್ದಾರ್ ಪಟೇಲ್‌ಗೆ ಸಮರ್ಪಿಸಲಾದ ನರ್ಮದಾ ಜಿಲ್ಲೆಯ 182 ಮೀಟರ್ ಎತ್ತರದ ಏಕತಾ ಪ್ರತಿಮೆಯಂತಹ ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡುವಂತೆ ವಿದೇಶಿಯರ ಮನವೊಲಿಸುವಂತೆ ಕೇಳಿದರು.
ವಿಶ್ವದಾದ್ಯಂತ ಹರಡಿರುವ ಕಚ್ಚಿ ವಲಸಿಗರಿಗೆ ಇದು ನನ್ನ ಮನವಿ. ಪ್ರತಿ ವರ್ಷ ಅಂತಹ ಒಂದು ಕಚ್ಚಿ ಕುಟುಂಬವು ಕನಿಷ್ಠ ಐದು ವಿದೇಶಿಯರನ್ನು ರಾನ್ ಆಫ್ ಕಚ್ ಮತ್ತು ಏಕತೆಯ ಪ್ರತಿಮೆಗೆ ಭೇಟಿ ನೀಡುವಂತೆ ಮನವೊಲಿಸಬೇಕು. ಇದು ಖಂಡಿತವಾಗಿಯೂ ಪ್ರವಾಸೋದ್ಯಮ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ಆಟೋ ಚಾಲಕರು ಮತ್ತು ಚಹಾ ಮಾರಾಟಗಾರರಂತಹ ಬಡವರಿಗೆ ಜೀವನೋಪಾಯವನ್ನು ಗಳಿಸಲು ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ