ರಾಮ ದೇವರಲ್ಲ ಕಥೆಯಲ್ಲಿನ ಪಾತ್ರವಷ್ಟೇ: ಬಿಹಾರ ಮಾಜಿ ಸಿಎಂ ಹೇಳಿಕೆ

Published : Apr 15, 2022, 09:06 PM IST
ರಾಮ ದೇವರಲ್ಲ ಕಥೆಯಲ್ಲಿನ ಪಾತ್ರವಷ್ಟೇ: ಬಿಹಾರ ಮಾಜಿ ಸಿಎಂ ಹೇಳಿಕೆ

ಸಾರಾಂಶ

ಹಿಂದೂ ದೇವ ಶ್ರೀರಾಮ ದೇವರಲ್ಲ ರಾಮ ಪುರಾಣದ ಒಂದು ಪಾತ್ರವಷ್ಟೇ ಬಿಹಾರ ಮಾಜಿ ಸಿಎಂ ವಿವಾದಾತ್ಮಕ ಹೇಳಿಕೆ

ಪಾಟ್ನಾ: ಹಿಂದೂ ಸಮುದಾಯದ ಆರಾಧ್ಯ ದೈವ ಶ್ರೀರಾಮಚಂದ್ರ ದೇವರಲ್ಲ ಆತ ಪುರಾಣದ ಒಂದು ಪಾತ್ರವಷ್ಟೇ ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ (Jitan Ram Manjhi) ಹೊಸ ವಿವಾದ ಸೃಷ್ಟಿಸಿದ್ದಾರೆ.  ರಾಮ, ತುಳಸಿದಾಸ್ ಮತ್ತು ವಾಲ್ಮೀಕಿ ಅವರ ಸಂದೇಶವನ್ನು ಹರಡಲು ಸೃಷ್ಟಿಸಿದ ಪಾತ್ರವಷ್ಟೇ ಎಂದು ಅವರು ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಮ್ ಮೋರ್ಚಾದ ನಾಯಕ ಹಾಗೂ ಬಿಹಾರದ ಮಾಜಿ ಸಿಎಂ ಕೂಡ ಆಗಿರುವ ಜಿತನ್ ರಾಮ್ ಮಾಂಝಿ ಅವರ ಈ ಹೇಳಿಕೆ ಬಿಜೆಪಿ ಸೇರಿದಂತೆ ಆಡಳಿತ ಮೈತ್ರಿಕೂಟದಲ್ಲಿ ಹಲವರನ್ನು ದಿಗ್ಭ್ರಮೆಗೊಳಿಸಿದೆ. ರಾಮನು ತುಳಸಿದಾಸ್ (Tulsidas) ಮತ್ತು ವಾಲ್ಮೀಕಿ (Valmiki) ಅವರ ಸಂದೇಶವನ್ನು ಹರಡಲು ಸೃಷ್ಟಿಸಿದ ಪಾತ್ರ ಅವರು ರಾಮಾಯಣವನ್ನು(Ramayan) ಬರೆದಿದ್ದಾರೆ ಮತ್ತು ಅವರ ಬರಹಗಳಲ್ಲಿ ಅನೇಕ ಉತ್ತಮ ಪಾಠಗಳಿವೆ. ನಾವು ಅದನ್ನು ನಂಬುತ್ತೇವೆ.

Kolar: ಶ್ರೀರಾಮ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ: ಬೈಕ್‌ಗೆ ಬೆಂಕಿ

ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆ ಆದರೆ ರಾಮನನ್ನಲ್ಲ ಎಂದು  ಮಾಂಝಿ ಹೇಳಿದರು. ಮಾಂಝಿ ಅವರ ಮಗ ಸಂತೋಷ್ ಮಾಂಝಿ (Santosh Manjhi) ಬಿಹಾರದಲ್ಲಿ (Bihar) ನಿತೀಶ್ ಕುಮಾರ್ (Nitish Kumar) ಹಾಗೂ ಬಿಜೆಪಿ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) (Hindustan Awam Morcha) ಮುಖ್ಯಸ್ಥರೂ ಆಗಿರುವ ಜಿತನ್‌ ಮಾಂಝಿ ಅವರು ಭಾರತದ ಸಂವಿಧಾನದ ನಿರ್ಮಾತೃ ಬಿ.ಆರ್. ಅಂಬೇಡ್ಕರ್ (BR Ambedkar) ಅವರ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Ram Navami: ದಿನವಿಡೀ ರಾಮ ಸ್ಮರಣೆ ಮಾಡಿದರೆ ಯಶಸ್ಸು ಪ್ರಾಪ್ತಿ
ನಿಮಗೆ ರಾಮನಲ್ಲಿ ನಂಬಿಕೆಯಿದ್ದರೆ, ರಾಮನು ಶಬರಿಯು ತಿಂದು ರುಚಿ ನೋಡಿದಂತಹ ಹಣ್ಣನ್ನು ತಿಂದಿದ್ದಾನೆ ಎಂಬುವ ಕತೆಯನ್ನು ನೀವು ಕೇಳಿರುತ್ತೀರಿ. ಆದರೆ ನಾವು ಕಚ್ಚಿದ ಹಣ್ಣನ್ನು ನೀವು ತಿನ್ನುವುದಿಲ್ಲ ಆದರೆ ಕನಿಷ್ಠ ನಾವು ಮುಟ್ಟಿದ್ದನ್ನು ತಿನ್ನಿ ಎಂದು ಮಾಂಝಿ ಹೇಳಿದ್ದು, ದೇಶದಲ್ಲಿರುವ ಜಾತಿ ವಿಭಜನೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಜಗತ್ತಿನಲ್ಲಿ ಕೇವಲ ಎರಡು ಜಾತಿಗಳಿವೆ ಅದು ಶ್ರೀಮಂತ ಮತ್ತು ಬಡವ ಎಂದ ಮಾಂಝಿ ಇದೇ ವೇಳೆ ಬ್ರಾಹ್ಮಣರ ವಿರುದ್ಧ ವಾಗ್ದಾಳಿ ನಡೆಸಿದರು, ದಲಿತರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಶ್ರೀರಾಮನವಮಿ ಆಚರಣೆ ವೇಳೆ ನಡೆದ ಮೆರವಣಿಗೆಗಳ ಸಮಯದಲ್ಲಿ ಕೆಲವು ರಾಜ್ಯಗಳಲ್ಲಾದ ಘರ್ಷಣೆಯ ನಂತರ ಜಿತನ್ ರಾಮ್‌ ಮಾಂಝಿ ಅವರ ಈ ಹೇಳಿಕೆಗಳು ಬಂದಿವೆ. ಗುಜರಾತ್ (Gujarat), ಮಧ್ಯಪ್ರದೇಶ (Madhya Pradesh), ಜಾರ್ಖಂಡ್ (Jharkhand) ಮತ್ತು ಪಶ್ಚಿಮ ಬಂಗಾಳ (West Bengal) ದಂತಹ ರಾಜ್ಯಗಳಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಘರ್ಷಣೆಗಳು ನಡೆದಿದ್ದವು. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.
 

ರಾಜ್ಯದ ಕೋಲಾರದಲ್ಲಿಯೂ ಕೂಡ ರಾಮನವಮಿ ಆಚರಣೆ ವೇಳೆ ಘರ್ಷಣೆ ನಡೆದಿತ್ತು. ನಗರದಲ್ಲಿ ನಡೆದ ಶ್ರೀರಾಮ ಶೋಭಾಯಾತ್ರೆ ಪಲ್ಲಕ್ಕಿಯಲ್ಲಿನ 16 ಅಡಿಗಳ ಶ್ರೀರಾಮ ದೇವರ ವಿಗ್ರಹಕ್ಕೆ ಕೆಲ ಕಿಡಿಗೇಡಿಗಳು ಕಲ್ಲುತೂರಿದ ಘಟನೆ ನಡೆದಿತ್ತು. ಜಹಾಂಗೀರ್‌ ಮೊಹಲ್ಲ ಮುಂಭಾಗದಲ್ಲಿ ಹಾದು ವಿರೂಪಾಕ್ಷಿ ರಸ್ತೆಗೆ ಹೋಗುವ ಸಂದರ್ಭದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಶ್ರೀರಾಮ ಪ್ರತಿಮೆಗೆ ಕಲ್ಲುಗಳನ್ನು ತೂರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!