ಸಿಯಾಚಿನ್‌ನಲ್ಲಿ ಹಿಮಪಾತ: ಇಬ್ಬರು ಸೈನಿಕರು ಹುತಾತ್ಮ!

By Web Desk  |  First Published Nov 30, 2019, 8:31 PM IST

ಲಡಾಖ್‌ನ ದಕ್ಷಿಣ ಸಿಯಾಚಿನ್‌ನಲ್ಲಿ ಹಿಮಪಾತ| ಭೀಕರ ಹಿಮಪಾತಕ್ಕೆ ಇಬ್ಬರು ಭಾರತೀಯ ಯೋಧರು ಬಲಿ| 18,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈನಿಕರು| ಇತರ ಸೈನಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಅವಲಾಂಚ್ ರಿಸ್ಕ್ ಟೀಂ (ಎಆರ್‌ಟಿ)| ಕಳೆದ ಎರಡು ವಾರಗಳಲ್ಲಿ ಎರಡನೇ ಬಾರಿಗೆ ಸಿಯಾಚಿನ್‌ನಲ್ಲಿ ಹಿಮಪಾತ| 


ಶ್ರೀನಗರ(ನ.30): ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ದಕ್ಷಿಣ ಸಿಯಾಚಿನ್‌ನ ಸುಮಾರು 18,000 ಅಡಿ ಎತ್ತರದಲ್ಲಿ ಹಿಮಪಾತವಾಗಿದ್ದು, ಈ ವೇಳೆ ಗಸ್ತು ತಿರುಗುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ದಕ್ಷಿಣ ಸಿಯಾಚಿನ್ ಹಿಮನದಿಯ ಸುಮಾರು 18,000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೇನೆಯ ಗಸ್ತು ವಿಭಾಗದ ಇಬ್ಬರು ಸೈನಿಕರು,  ಹಿಮಪಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ್ ಕಲಿಯಾ ತಿಳಿಸಿದ್ದಾರೆ.

Tap to resize

Latest Videos

ಸಿಯಾಚಿನ್‌ನಲ್ಲಿ ಶತ್ರುಗಳ ಜೊತೆ ಮಾತ್ರವಲ್ಲ, ನಿಸರ್ಗದೊಂದಿಗೂ ಸೆಣಸಬೇಕು ಸೈನಿಕರು!

ಗಸ್ತು ಸೈನಿಕರನ್ನು ಹಿಂಬಾಲಿಸಿರುವ ಅವಲಾಂಚ್ ರಿಸ್ಕ್ ಟೀಂ (ಎಆರ್‌ಟಿ) ಕೂಡಲೇ ಸ್ಥಳಕ್ಕೆ ಧಾವಿಸಿ ಸಂಕಷ್ಟಕ್ಕೆ ಸಿಲುಕಿದ್ದ ಇತರ ಸೈನಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹಿಮಪಾತದಿಂದ ಸಂತ್ರಸ್ತರನ್ನು ಸ್ಥಳಾಂತರಿಸಲು ಸೇನೆಯ ಹೆಲಿಕಾಪ್ಟರ್‌ ಬಳಕೆ ಮಾಡಲಾಗಿದೆ. 

ವೈದ್ಯಕೀಯ ತಂಡಗಳ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಬ್ಬರು ಸೇನಾ ಸಿಬ್ಬಂದಿಗಳು ಹಿಮಪಾತದಲ್ಲಿ ಮೃತಪಟ್ಟಿದ್ದಾರೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ

ಕಳೆದ ಎರಡು ವಾರಗಳಲ್ಲಿ ಎರಡನೇ ಬಾರಿಗೆ ಸಿಯಾಚಿನ್‌ನಲ್ಲಿ ಹಿಮಪಾತ ಸಂಭವಿಸಿದೆ. ಇದಕ್ಕೂ ಮುನ್ನ ನವೆಂಬರ್ 18 ರಂದು ಸಿಯಾಚಿನ್ ಹಿಮನದಿಯ ಉತ್ತರ ಭಾಗದಲ್ಲಿ ನಡೆದ ಹಿಮಪಾತದಲ್ಲಿ ನಾಲ್ಕು ಭಾರತೀಯ ಸೇನಾ ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.

click me!