ಸುಖ್ವಿಂದರ್ ಸಮೋಸ ಯಾರ್ ತಿಂದಿದ್ದು? ಸಿಐಡಿ ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ!

By Chethan Kumar  |  First Published Nov 8, 2024, 3:06 PM IST

ಇದು ಒಂದು ಸಮೋಸಾ ಕತೆ.  ಹಿಮಾಚಲ ಪ್ರದೇಶ ಮುಖ್ಯಮಂತ್ರಿಗೆ ತಿನ್ನಲು ತಂದ ಸಮೋಸಾ ನಾಪತ್ತೆಯಾಗಿದೆ. ಇಷ್ಟೆ ನೋಡಿ, ಸಿಐಡಿ ಪೊಲೀಸರು ಇದೀಗ ನಾಪತ್ತೆಯಾದ ಸಮೋಸಾ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಈ ರೋಚಕ ಘಟನೆ ಹೇಗಾಯ್ತು? 
 


ಶಿಮ್ಮಾ(ನ.08) ಸಾವಿರಾರು ಕೋಟಿ ಹಗರಣ, ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಪ್ರಕರಣಗಳ ತನಿಖೆಯನ್ನು ಉನ್ನತ ತನಿಖಾ ಸಂಸ್ಥೆಗಳ ಹೆಗಲಿಗೆ ಜವಾಬ್ದಾರಿ ನೀಡುವುದು ಸಾಮಾನ್ಯ. ಇನ್ನು ಇತರ ಪ್ರಕರಣಗಳನ್ನು ಆಯಾ ರಾಜ್ಯ ಪೊಲೀಸ್ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ನಡೆಸುತ್ತದೆ. ಇದೀಗ ನಾಪತ್ತೆಯಾದ ಸಮೋಸಾಗಾಗಿ ಸಿಐಡಿ ತನಿಖೆ ನಡೆಯುತ್ತಿರುವ ಮೊದಲ ಹಾಗೂ ವಿಶೇಷ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಒಂದು ಸಮೋಸಾ ಇದೀಗ ದೇಶಾದ್ಯಂತ ಭಾರಿ ಸುದ್ದಿಯಾಗಿದೆ. ಸರ್ಕಾರ, ಪೊಲೀಸರು, ಅಧಿಕಾರಿಗಳು ಈ ಸಮೋಸಾ ಹಿಂದೆ ಬಿದ್ದಿದ್ದಾರೆ. ಸಮೋಸಾ ನಾವು ಕೊಡುತ್ತೇವೆ, ಪೊಲೀಸರು, ಅಧಿಕಾರಿಗಳು ಸಾಮಾನ್ಯ ಜನರ ಜ್ವಲಂತ ಸಮಸ್ಯೆಗಳಿಗೆ ನ್ಯಾಯ ಕೊಡಿಸಲಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಅಷ್ಟಕ್ಕೂ ಈ ಘಟನೆ ನಡೆದಿದ್ದು ರೋಚಕ, ತನಿಖೆ ಹಾಗೂ ಪೊಲೀಸರು ನೀಡಿರುವ ಟ್ವಿಸ್ಟ್ ಕೂಡ ಅಷ್ಟೆ ರೋಚಕ. ಹಿಮಾಚಲ ಪ್ರದೇಶ ಸಿಐಡಿ ಕಚೇರಿಯಲ್ಲಿ ಮುಖ್ಯ ಸಭೆ ಆಯೋಜಿಸಲಾಗಿತ್ತು. ಹಿಮಾಚಲ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಈ ಸಭೆಯಲ್ಲಿ ಪಾಲ್ಗೊಂಡು ಪ್ರಮಖ ವಿಚಾರಗಳ ಕುರಿತು ಚರ್ಚಿಸಲು ಮೀಟಿಂಗ್ ಆಯೋಜಿಸಲಾಗಿತ್ತು. ಸಿಐಡಿ ಅಧಿಕಾರಿಗಳು ಸೇರಿದಂತೆ ಸರ್ಕಾರದ ಕಾರ್ಯದರ್ಶಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

Latest Videos

undefined

20 ರೂಪಾಯಿ ಸಮೋಸಾ ಆರ್ಡರ್ ಮಾಡಿ 1.4 ಲಕ್ಷ ರೂ ಕಳೆದುಕೊಂಡ ಡಾಕ್ಟರ್!

ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.  ಮುಖ್ಯಮಂತ್ರಿ ಆಗಮನದ ಕಾರಣ ಸಿಐಡಿ ಅಧಿಕಾರಿಗಳು ಸಭೆ ಚಹಾ ಕೂಟಕ್ಕೆ ಸಮೋಸಾ ಹಾಗೂ ಇತರ ಕೆಲ ತಿನಿಸುಗಳನ್ನು ತರಿಸಲಾಗಿತ್ತು. ಸಭೆ ಮುಗಿದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಸಿಐಡಿ ಅಧಿಕಾರಿಗಳಿಗೆ ಚಹಾ ನೀಡಲಾಯಿತು. ಈ ವೇಳೆ ತಂದಿದ್ದ ಸಮೋಸಾ ನಾಪತ್ತೆಯಾಗಿದೆ. ಎಷ್ಟೇ ಹುಡುಕಾಡಿದರೂ ಸಮೋಸ ಪತ್ತೆಯಾಗಿಲ್ಲ. ಆಕ್ರೋಶಗೊಂಡ ಹಿಮಾಚಲ ಪ್ರದೇಶ ಸಿಬಿಐ ಡೈರೆಕ್ಟರ್ ಜನರಲ್ ಸಂಜೀವ್ ರಂಜನ್ ಓಜಾ ತನಿಖೆಗೆ ಸೂಚಿಸಿದ್ದಾರೆ. 

ಸುಖ್ವಿಂದರ್ ಸಿಂಗ್ ಸಿಖುಗೆ ತಂದಿದ್ದ ಸಮೋಸ್ ತಿಂದಿದ್ದು ಯಾರು? ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ಪರಿಶೀಲನೆ ಆರಂಭಗೊಂಡಿದೆ. ಸಮೋಸಾವನ್ನು ಪೊಲೀಸರು ತಿಂದಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ವಿಚಾರ ಮಾಧ್ಯಮದ ಮೂಲಕ ಬಹಿರಂಗವಾಗಿತ್ತು. ಅಷ್ಟರಲ್ಲೇ ಹಮಾಚಲ ಪ್ರದೇಶ ಟ್ರೋಲ್, ಟೀಕೆ ಎದುರಿಸಲು ಆರಂಭಿಸಿದೆ. ಹಿಮಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಸಮೋಸಾಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ ಅನ್ನೋ ಮಾಹಿತಿ ಕಾಡ್ಗಿಚ್ಚಿನಂತೆ ಹರಿದಾಡಿತ್ತು. ಸರ್ಕಾರದ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗಿತ್ತು.

ಅಷ್ಟೊತ್ತಿಗೆ ಸಂಜೀವ್ ರಂಜನ್ ಓಜಾ ಪ್ರತಿಕ್ರಿಯೆ ನೀಡಿದ್ದಾರೆ.ಇದು ಆಂತರಿಕ ವಿಚಾರ. ಸರ್ಕಾರ ಇಲ್ಲಿ ತನಿಖೆಗೆ ಆದೇಶಿಸಿಲ್ಲ. ತಂದಿದ್ದ ಸಮೋಸಾ ನಾಪತ್ತೆಯಾಗಿದ್ದು ಹೇಗೆ ಎಂದು ಕೇಳಿದ್ದೇವೆ. ಆತಂರಿಕವಾಗಿ ಹೇಗೆ ಅನ್ನೋ ವಿಚಾರವನ್ನು ಕೇಳಲಾಗಿದೆ.ಆತಂರಿಕ ವಿಚಾರಣೆಯಲ್ಲಿ ಸರ್ಕಾರದ ಪಾತ್ರ ಇಲ್ಲ. ಸುಖ್ವಿಂದರ್ ಸಿಂಗ್ ಸುಖು ಸಮೋಸಾ ತಿನ್ನುವುದಿಲ್ಲ. ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿ ರಾಜೀಯಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾಯ್ ಬಿಸ್ಕೆಟ್ ಮಾತ್ರ, ಸಮೋಸಾ ಕೊಟ್ಟಿಲ್ಲ; ಕಾಂಗ್ರೆಸ್ ವಿರುದ್ಧ ಇಂಡಿ ಮೈತ್ರಿ ನಾಯಕ ಗರಂ! 

ತಂದಿಟ್ಟ ಬಾಕ್ಸ್ ಸಮೋಸಾ ನಾಪತ್ತೆಯಾಗಿದ್ದು ಹೇಗೆ? ಚಹಾ ವೇಳೆ ಕೊಡಲು ಇಟ್ಟಿದ್ದ ಸಮೋಸಾ ಇಲ್ಲಾ ಎಂದಾಹ ಸಹಜವಾಗಿ ಪ್ರಶ್ನಿಸಲಾಗಿದೆ. ಇದರಲ್ಲಿ ತನಿಖೆ ಇಲ್ಲ, ಆತಂರಿಕವಾಗಿ ಕೇಳಿರುವ ಪ್ರಶ್ನೆ. ಇತ್ತ ಮುಖ್ಯಮಂತ್ರಿ ಕಾರ್ಯಾಲಯ ಕೂಡ ವಿಚಾರಣೆಗೆ ಸರ್ಕಾರ ಆದೇಶ ನೀಡಿರುವ ಮಾಹಿತಿಯನ್ನು ಅಲ್ಲಗೆಳೆದಿದ್ದಾರೆ. ಈ ರೀತಿಯ ಯಾವುದೇ ಆದೇಶವನ್ನು ಸರ್ಕಾರ ನೀಡಿಲ್ಲ. ಇದು ಸಿಐಡಿ ಆಂತರಿಕ ವಿಚಾರ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ನರೇಶ್ ಚವ್ಹಾಣ್ ಹೇಳಿದ್ದಾರೆ. ಪ್ರತಿಪಕ್ಷಗಳು ಈ ವಿಚಾರವನ್ನು ರಾಜಕೀಯವಾಗಿ ಬಳಸಿದ್ದಾರೆ ಎಂದು ನರೇಶ್ ಹೇಳಿದ್ದಾರೆ.
 

click me!