ಅಲಿಘಡ ಮುಸ್ಲಿಂ ಯೂನಿವರ್ಸಿಟಿ ಅಲ್ಪಸಂಖ್ಯಾತ ಸ್ಥಾನಮಾನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್!

By Chethan Kumar  |  First Published Nov 8, 2024, 1:07 PM IST

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 1967ರ ತೀರ್ಪು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯಕ್ಕಿದ್ದ ಅಲ್ಪಸಂಖ್ಯಾತ ಸ್ಥಾನಮಾನವನ್ನು ತೆಗೆದುಹಾಕಿದೆ. 


ನವದೆಹಲಿ(ನ.8) ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ 1967ರಿಂದ ಅಲ್ಪಸಂಖ್ಯಾತ ಸ್ಥಾನಮಾನ ಅನುಭವಿಸುತ್ತಾ ಬಂದಿದೆ. ಇಷ್ಟೇ ಅಲ್ಲ ಹಲವು ಪರ ವಿರೋಧಗಳ ವೇಳೆ ಅಲ್ಪಸಂಖ್ಯಾತ ಸ್ಥಾನಾಮಾನ ಕಾರ್ಡ್ ಮುಂದಿಡಲಾಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನಿವೃತ್ತಿ ಅಂಚಿನಲ್ಲಿ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಇನ್ನು ಮುಂದೆ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಇರುವುದಿಲ್ಲ. ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ಸರ್ಕಾರ ಮೂಲಕ ಸ್ಥಾಪಿತವಾದ ಸಂಸ್ಥೆ ಅಲ್ಪಸಂಖ್ಯಾತ ಸ್ಥಾನಮಾನ ಪಡೆಯಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟೀಸ್ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.  ಈ ಮೂಲಕ 1967ರಲ್ಲಿ ನೀಡಿದ್ದ ತೀರ್ಪನ್ನು ಕೋರ್ಟ್ ತಳ್ಳಿ ಹಾಕಿದೆ.  ಸುಪ್ರೀಂ ಕೋರ್ಟ್ 7 ನ್ಯಾಯಾಧೀಶರ ಪೀಠದಲ್ಲಿ ನಾಲ್ವರು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯಕ್ಕಿದ್ದ ಸ್ಥಾನಮಾನ ರದ್ದುಗೊಳಿಸುವಂತೆ ಸೂಚಿಸಿದರೆ, ಇನ್ನುಳಿದ ಮೂವರು ನ್ಯಾಯಧೀಶರು ಅಲ್ಪಸಂಖ್ಯಾ ಸ್ಥಾನ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇದು ಸುಪ್ರೀಂ ಕೋರ್ಟ್ ಪೀಠದ ಸರ್ವಾನುಮತದ ಅಭಿಪ್ರಾಯವಲ್ಲ, ಹೀಗಾಗಿ  ಎಎಂಯು ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನ ಮಾನ ಮಂಜೂರು ಮಾಡಬೇಕೆ ಅನ್ನೋದು ನಿರ್ಧರಿಸಲು ಮತ್ತೊಂದು ಪೀಠಕ್ಕೆ ಈ ಪ್ರಕರಣ ವರ್ಗಾವಣೆ ಮಾಡಲಾಗಿದೆ.

Latest Videos

 ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಸಂಜೀವ್ ಖನ್ನ ನೇಮಕ!

ಜಸ್ಟೀಸ್ ಸೂರ್ಯ ಕಾಂತ್, ದೀಪಾಂಕರ್ ಗುಪ್ತ ಹಾಗೂ ಎಸ್‌ಸಿ ಶರ್ಮಾ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸರ್ಕಾರ,ಶಾಸಕಾಂಗದ ನಿಯಮಕ್ಕೆ ಒಳಪಟ್ಟಿರುವ ವಿದ್ಯಾಸಂಸ್ಥೆ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಲು ಸಾಧ್ಯವಿಲ್ಲ ಎಂದು ಜಸ್ಟೀಸ್ ಸಂಜೀವ್ ಖನ್ನ(ಮುಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ), ಜಸ್ಟೀಸ್ ಜೆಬಿ ಪರಿದಿವಾಲ, ಹಾಗೂ ಮನೋಜ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

1967ರಲ್ಲಿ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಒಳಪಟ್ಟ ಸಂಸ್ಥೆ ಎಂದು ತೀರ್ಪು ನೀಡಿತ್ತು. 2019ರಲ್ಲಿ ಮತ್ತೆ ಅಲ್ಪಸಂಖ್ಯಾತ ಸ್ಥಾನಮಾನ ಕುರಿತು ಭಾರಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 1981ರಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ತಿದ್ದುಪಡಿಯನ್ನು 2006ರಲ್ಲಿ ಅಲಹಬಾದ್ ಹೈಕೋರ್ಟ್ ರದ್ದು ಮಾಡಿತ್ತು. ಇದರ ಮೇಲ್ಮನವಿಯನ್ನು 2019ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನ್ ಗೋಗೊಯ್ ವಿಚಾರಣೆ ಆರಂಭಿಸಿದ್ದರು. 2019ರಲ್ಲಿ ಈ ಪ್ರಕರಣವನ್ನು 7 ನ್ಯಾಯಾಧೀಶರ  ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು.  
 

click me!