
ನ್ಯೂಯಾರ್ಕ್ (ಮಾ.8): ತೆರಿಗೆ ವಿಚಾರಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಭಾರತವು ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ ಎಂದು ಪುನರುಚ್ಚರಿಸಿದ್ದಾರೆ.
ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ದೇಶಗಳ ಮೇಲೆ ಏ.2ರಿಂದ ಪ್ರತಿ ತೆರಿಗೆ ಹಾಕುವುದು ಖಚಿತ. ಸದ್ಯಕ್ಕೆ ನಾವು ಸಣ್ಣಮಟ್ಟದ ತೆರಿಗೆ ಹಾಕುತ್ತಿದ್ದೇವೆ. ಏ.2ರಿಂದ ದೊಡ್ಡಮಟ್ಟದಲ್ಲಿ ಪ್ರತಿ ತೆರಿಗೆ ವಿಧಿಸಲಿದ್ದೇವೆ. ಅದು ಭಾರತ ಅಥವಾ ಚೀನಾ ಅಥವಾ ಇತರೆ ಯಾವುದೇ ದೇಶ ಆಗಿರಬಹುದು ಎಂದ ಅವರು, ಭಾರತ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶ ಎಂದು ಪ್ರತಿಕ್ರಿಯಿಸಿದ್ದಾರೆ.
ಕೆನಡಾವು ನಮ್ಮ ಹಾಲಿನ ಉತ್ಪನ್ನಗಳು ಮತ್ತು ಇತರೆ ಉತ್ಪನ್ನಗಳಿಗೆ ಶೇ.250ರಷ್ಟು ತೆರಿಗೆ ವಿಧಿಸುತ್ತಿದೆ. ಇದಕ್ಕೆ ಪ್ರತಿಯಾಗಿ ನಾವು ಅವರ ಟಿಂಬರ್ ಉತ್ಪನ್ನಗಳಿಗೆ ಭಾರೀ ತೆರಿಗೆ ವಿಧಿಸುತ್ತೇವೆ. ನಮಗೆ ಅವರ ಟಿಂಬರ್ ಬೇಡ. ಅವರಿಗಿಂತ ಹೆಚ್ಚಿನ ಟಿಂಬರ್ ನಮ್ಮಲ್ಲಿದೆ ಎಂದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ವಿರೋಧ: ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲ ಕೋರಿದ ಸ್ಟಾಲಿನ್!
ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.2ರಷ್ಟು ಹೆಚ್ಚಳ ಸಂಭವ
ನವದೆಹಲಿ: ಹೋಳಿ ಹಬ್ಬದ ಆಚರಣೆಗೆ ಸಜ್ಜಾಗಿರುವ ತನ್ನ ನೌಕರರಿಗೆ ಕೇಂದ್ರ ಸರ್ಕಾರ ಶೇ.2ರಷ್ಟು ತುಟ್ಟಿ ಭತ್ಯೆ ಘೋಷಿಸುವ ಮೂಲಕ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಮಾ.14ರ ಹೋಳಿ ಹಬ್ಬಕ್ಕೂ ಮುನ್ನವೇ ಈ ಕುರಿತು ಘೋಷಣೆ ಹೊರಬೀಳಲಿದೆ. ಹಣದುಬ್ಬರಕ್ಕೆ ಅನುಗುಣವಾಗಿ ಸರ್ಕಾರ ತನ್ನ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಈ ನೆರವು ಪ್ರಕಟಿಸುತ್ತದೆ. ಅದರಂತೆ ಜನವರಿ - ಜುಲೈ ಅವಧಿಗೆ ಹಾಲಿ ಶೇ.53ರಷ್ಟು ಇರುವ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಏರಿಸುವ ಸಾಧ್ಯತೆ ಇದೆ. ಕಳೆದ ಅಕ್ಟೋಬರ್‌ನಲ್ಲಿ ಶೇ.3ರಷ್ಟು ತುಟ್ಟಿಭತ್ಯೆ ಪ್ರಕಟಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ