
ಚೆನ್ನೈ (ಮಾ.8): ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರುದ್ಧ ಹೋರಾಟಕ್ಕೆ ನಿರ್ಧರಿಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಎನ್‌ಡಿಎಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖ್ಯಸ್ಥರಿಗೆ ಪತ್ರ ಬರೆದು ಬೆಂಬಲಯಾಚಿಸಿದ್ದಾರೆ.
ಕೇಂದ್ರದ ವಿರುದ್ಧದ ರಾಜಿರಹಿತ ಹೋರಾಟಕ್ಕಾಗಿ ರಚಿಸಲಾಗುವ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಯ ಭಾಗವಾಗುವಂತೆ ಆಗ್ರಹಿಸಿದ್ದಾರೆ.
ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿರುವ ಕರ್ನಾಟಕ, ಕೇರಳ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ತೆಲಂಗಾಣದ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸ್ಟಾಲಿನ್, ಕ್ಷೇತ್ರಮರುವಿಂಗಡಣೆ ವಿರುದ್ಧ ಬೆಂಬಲ ಯಾಚಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ಮಾ.22ರಂದು ಈ ಸಂಬಂಧ ಜಂಟಿ ಕ್ರಿಯಾ ಸಮಿತಿ ಸಭೆ ನಡೆಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Watch | ಲಂಡನ್‌ನಲ್ಲಿ ಜೈಶಂಕರ್ ಮೇಲೆ ಖಲಿಸ್ತಾನಿ ಉಗ್ರರ ದಾಳಿ ಯತ್ನ, ಭಾರತದ ಧ್ವಜ ಹರಿದು ಘೋಷಣೆ!
ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ನಡೆಸಲಾಗುತ್ತದೆ. ಇದನ್ನು ಎರಡು ವಿಧಾನದಲ್ಲಿ ನಡೆಸುವ ಸಾಧ್ಯತೆಗಳಿವೆ. ಮೊದಲ ವಿಧಾನದಲ್ಲಿ ಹಾಲಿ ಇರುವ 543 ಕ್ಷೇತ್ರಗಳನ್ನು ರಾಜ್ಯಗಳ ನಡುವೆ ಮರುಹಂಚಿಕೆ ಮಾಡಲಾಗುತ್ತದೆ. ಮತ್ತೊಂದು ಸಾಧ್ಯತೆಯಲ್ಲಿ ಒಟ್ಟಾರೆ ಕ್ಷೇತ್ರಗಳ ಪ್ರಮಾಣವನ್ನು 800ಕ್ಕೆ ಏರಿಸಲಾಗುತ್ತದೆ. ಈ ಎರಡೂ ವಿಧಾನದಲ್ಲೂ 2026ರ ಜನಸಂಖ್ಯೆಯನ್ನು ಪರಿಗಣಿಸಿದರೆ ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಂಡ ರಾಜ್ಯಗಳಿಗೆ ಅನ್ಯಾಯ ಆಗಲಿದೆ.
ಇದು ಗಂಭೀರ ವಿಚಾರವಾದರೂ ಕೇಂದ್ರ ಸರ್ಕಾರ ಈವರೆಗೆ ಸ್ಪಷ್ಟ ಮಾಹಿತಿ ನೀಡಿಲ್ಲ, ನಮ್ಮ ಕಳವಳ ಪರಿಹರಿಸಲು ಯತ್ನಿಸಿಲ್ಲ. ಸಮಾನಾನುಪಾತದಲ್ಲಿ ಮರುವಿಂಗಡಣೆ ನಡೆಯುತ್ತದೆ ಎಂದು ಅಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಈ ರೀತಿಯ ಸಮಾನಾನುಪಾತದ ವಿಂಗಡಣೆಗೆ ಮೂಲ ಯಾವುದು ಎಂಬುದನ್ನು ಹೇಳಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್ ಜನ್ಮದಿನ: ಹಿಂದಿ ಹೇರಿಕೆ ವಿರುದ್ಧ ಹೋರಾಟದ ಪ್ರತಿಜ್ಞೆ!
ಜೆಎಸಿ ಮೂಲಕ ನಾವು ನಮ್ಮ ಪ್ರಾತಿನಿಧ್ಯ ಕಾಯ್ದುಕೊಳ್ಳಲು ಪರ್ಯಾಯವೊಂದನ್ನು ಅಭಿವೃದ್ಧಿಪಡಿಸಬಹುದು ಎಂದಿರುವ ಸ್ಟಾಲಿನ್, ಈ ಸಂಬಂಧ ಆರು ರಾಜ್ಯಗಳ ಸಿಎಂಗಳು, ನಾಯಕರಿಂದ ಜೆಎಸಿ ರಚನೆ ಕುರಿತು ಔಪಚಾರಿಕ ಅನುಮತಿ ಕೇಳಿದ್ದಾರೆ. ಅಲ್ಲದೆ, ಪಕ್ಷದ ಹಿರಿಯ ಸದಸ್ಯರೊಬ್ಬರನ್ನು ಸಮಿತಿಗೆ ನಾಮನಿರ್ದೇಶನ ಮಾಡುವಂತೆಯೂ ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ