
ಅಗರ್ತಲಾ(ಫೆ.16): ಬಿಜೆಪಿ ಆಡಳಿತವಿರುವ ಈಶಾನ್ಯ ರಾಜ್ಯ ತ್ರಿಪುರಾ, ದೇಶದಲ್ಲೇ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಜಾರಿಗೊಳಿಸಲು ಸಿದ್ದವಾಗಿದೆ.
ಈಗಾಗಲೇ ಎನ್‌ಪಿಆರ್ ಜಾರಿಗೊಳಿಸಲು ಅಗತ್ಯವಾದ ದತ್ತಾಂಶ ಸಂಗ್ರಹಕ್ಕೆ ತ್ರಿಪುರಾ ಅಗತ್ಯ ಸಿದ್ದತೆ ನಡೆಸಿದೆ. ಮುಂಬರುವ ಮೇ.16 ರಿಂದ ಮೊದಲ ಹಂತದ ಪ್ರಕ್ರಿಯೆಗೆ ತ್ರಿಪುರಾ ಸರ್ಕಾರ ಮುಂದಡಿ ಇಡಲಿದೆ.
ಅಘಾಡಿ ಗಡಗಡ, ಕಾಂಗ್ರೆಸ್ಸಿಗೆ ಶಿವಸೇನೆ ಸಡ್ಡು: NPR ಜಾರಿ!
ಮೇ.16 ರಿಂದ ಆರಂಭಗೊಳ್ಳುವ ಮೊದಲ ಹಂತದ ಪ್ರಕ್ರಿಯೆ ಜೂನ್ 30 ರಂದು ಮುಕ್ತಾಯಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮೂಲಕ ತ್ರಿಪುರಾ ಈಶಾನ್ಯ ಭಾರತದಲ್ಲಿ ಎನ್‌ಪಿಆರ್ ದಾಖಲೆಯ ತಯಾರಿ ಪ್ರಕ್ರಿಯೆಯನ್ನು ಘೋಷಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೊಬೈಲ್ ಆ್ಯಪ್ ಬಳಕೆಯ ಮೂಲಕ ಡೇಟಾವನ್ನು ಸಂಗ್ರಹಿಸಲು ರಾಜ್ಯಾದ್ಯಂತ 11,000 ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಜನಸಂಖ್ಯೆ ಹಾಗೂ ಬಯೋಮೆಟ್ರಿಕ್ ವಿವರಗಳೊಂದಿಗೆ ಪ್ರತಿ ನಿವಾಸಿಗಳ ಡೇಟಾಬೇಸ್ ಅನ್ನು ಈ ಅಧಿಕಾರಿಗಳು ಸಿದ್ಧಪಡಿಸಲಿದ್ದಾರೆ ಎಂದು ತ್ರಿಪುರಾ ಸರ್ಕಾರ ಸ್ಪಷ್ಟಪಡಿಸಿದೆ.
NPR ಕುರಿತ ‘ಸತ್ಯ’ ಬಿಚ್ಚಿಟ್ಟ ಮೋದಿ: ಬೆಚ್ಚಿ ಬಿದ್ದ ಸದನ!
ಫೆಬ್ರವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ