Padma Shri;ರಾಷ್ಟ್ರಪತಿ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಜೋಗತಿ ಮಂಜಮ್ಮ, ವೈರಲ್ ಆಯ್ತು ವಿಶೇಷ ಘಟನೆ!

By Suvarna News  |  First Published Nov 9, 2021, 9:34 PM IST
  • ಜಾನಪದ ಕಲಾ ಕ್ಷೇತ್ರದ ಸಾಧನೆಗೆ ಜೋಗತಿ ಮಂಜಮ್ಮಗೆ ಪದ್ಮಶ್ರಿ
  • ಕರ್ನಾಟಕ ಜಾನಪದ ಅಕಾಡೆ ಅಧ್ಯಕ್ಷೆಯಾಗಿರುವ ಜೋಗತಿ ಮಂಜಮ್ಮ
  • ರಾಷ್ಟ್ರಪತಿ ಕೋವಿಂದ್ ದೃಷ್ಟಿ ತೆಗೆದು ಪ್ರಶಸ್ತಿ ಸ್ವೀಕರಿಸಿದ ಕನ್ನಡತಿ

ನವದೆಹಲಿ(ನ.09):  ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ( Padma Shri Award) ಕರ್ನಾಟದ ಐವರು ಸ್ವೀಕರಿಸಿದ್ದಾರೆ. ಹರೇಕಳ ಹಾಜಬ್ಬ(harekala hajabba) ಸರಳತೆ ಮುಗ್ದತೆ ಹಾಗೂ ಸಾಧನೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ.  ಇದರ ಜೊತೆಗೆ ಜಾನಪದಾ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡತಿ ಜೋಗತಿ ಮಂಜಮ್ಮ(Manjamma Jogati) ಪ್ರಶಸ್ತಿ ಸ್ವೀಕರಣೆ ದೃಶ್ಯ ಕೂಡ ವೈರಲ್ ಆಗಿದೆ. ಕರ್ನಾಟಕ ಜನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಜೋಗತಿ ಮಂಜಮ್ಮ ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುವ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೃಷ್ಟಿ ತೆಗೆದಿದ್ದಾರೆ. 

ರಾಷ್ಟ್ರಪತಿ ರಾಮನಾಥ್(Ramnath Kovind) ಕೋವಿಂದ್ 2021ರ ಪ್ರದ್ಮಶ್ರಿ ಪ್ರಶಸ್ತಿ ವಿತರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಜೋಗತಿ ಮಂಜಮ್ಮ ನಗು ಎಲ್ಲರ ಹೃದಯ ಗೆದ್ದಿತು. ಕೋವಿಂದ್ ಬಳಿ ಆಗಮಿಸಿದ ಮಂಜಮ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ದೃಷ್ಟಿ ತೆಗೆದಿದ್ದಾರೆ. ತಮ್ಮ ನಗು ಮುಖದಿಂದಲೇ ದೃಷ್ಟಿ ತೆಗೆದ ಸಂದರ್ಭ ರಾಮನಾಥ್ ಕೋವಿಂದ್ ಮುಖದಲ್ಲೂ ನಗು ತರಿಸಿತ್ತು.

Tap to resize

Latest Videos

ದೃಷ್ಟಿ ತೆಗೆದು ರಾಮನಾಥ್ ಕೋವಿಂದ್‌ಗೆ ಶುಭಕೋರಿದ್ದಾರೆ.  ಜೋಗತಿ ಮಂಜಮ್ಮಗೆ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಶಭೋರಿದ್ದಾರೆ. ಇದೀಗ ದೃಷ್ಟಿ ತೆಗೆದು ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುತ್ತಿರುವ ಜೋಗತಿ ಮಂಜಮ್ಮ ವಿಡಿಯೋ ವೈರಲ್ ಆಗಿದೆ.  ಹಾಜಬ್ಬ, ಜೋಗತಿ ಮಂಜಮ್ಮ, ವೈದ್ಯ ಬಿಂಎಂ ಹೆಗ್ಡೆ, ಸಾಹಿತಿ ಚಂದ್ರಶೇಖರ ಕಂಬಾರ ಸೇರಿದಂತೆ ಐವರು ಕರ್ನಾಟಕದ ಸಾಧಕರು ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

 

| Transgender folk dancer of Jogamma heritage and the first transwoman President of Karnataka Janapada Academy, Matha B Manjamma Jogati receives the Padma Shri award from President Ram Nath Kovind. pic.twitter.com/SNzp9aFkre

— ANI (@ANI)

Padma Awards 2021| ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

ಮೂಲತ ಹೊಸಪೇಟೆಯ ಜೋಗತಿ ಮಂಜಮ್ಮ ಹಲವು ಸಂಕಷ್ಟಗಳನ್ನು, ಅಡೆ ತಡೆಗಳನ್ನು ಎದುರಿಸಿ ಇದೀಗ ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಜ್ಯೋತ್ಸವ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಾನಪದಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಜೋಗತಿ ಮಂಜಮ್ಮ ಅರಸಿಕೊಂಡು ಬಂದಿದೆ. ಈಗಲೂ ಜೋಗತಿ ಮಂಜಮ್ಮ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. 

ಜಾನಪದ ಕಲಾ ಕ್ಷೇತ್ರಕ್ಕೆ ಜೋಗತಿ ಮಂಜಮ್ಮ ಕೊಡುಗೆ ಅಪಾರ. ಇವರ ಕೊಡೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದೆ. ಶೋಷಿತರ, ತನ್ನಂತೆ ಸಾಮಾಜದಿಂದ ದೂಷಿಸಲ್ಪಟ್ಟವರ ಧನಿಯಾಗಿರುವ ಜೋಗತಿ ಮಂಜಮ್ಮ ಹಲವರಿಗೆ ಆಸರೆಯಾಗಿದ್ದಾರೆ. ಹವರಿಗೆ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದಾರೆ.

harekala hajabba;ಪದ್ಮಶ್ರಿ ಪ್ರಶಸ್ತಿ ಪಡೆದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮನದಾಳ ಬಿಚ್ಚಿಟ್ಟ ಅಕ್ಷರ ಸಂತ!

ಬಾಲಕನಾಗಿದ್ದ ಮಂಜಮ್ಮ 10ನೇ ತರಗತಿ ಬಳಿಕ ದೇಹದಲ್ಲಾದ ಬದಲಾವಣೆಯಿಂದ ಜೋಗತಿ ಮಂಜಮ್ಮ ಆಗಿ ಬದಲಾದರು. ಮೊದಲ ಹೆಸರು ಮಂಜುನಾಥ್. ಅತೀವ ಬಡತನದಲ್ಲಿ ಬೆಳೆದ ಮಂಜಮ್ಮ ಭಿಕ್ಷೆ ಬೇಡಿ ಜೀವನ ಸಾಗಿಸಿದ್ದಾರೆ.  ಮಂಜುನಾಥ್ ಮಂಜಮ್ಮ ಆಗಿ ಪರಿವರ್ತನೆ ಕುಟುಂಬವನ್ನು ಇನ್ನಿಲ್ಲದಂತೆ ಕಾಡಿತು. ಪೋಷಕರು ಮಗನ ಜೀವನ ನೋಡಿ ಕುಸಿದು ಹೋದರು. ಊರಲ್ಲಿ ಪೋಷಕರನ್ನು ಹೀಯಾಳಿಸುವವರ ಸಂಖ್ಯೆ ಹೆಚ್ಚಾಯಿತು. ಪೋಷಕರ ವಿರುದ್ಧ ಟೀಕೆ, ಆರೋಪಗಳು ಕೇಳಿಬಂದಿತ್ತು. ಇದರಿಂದ ನೊಂದ ಮಂಜಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಕೂದಲೆಳೆಯುವ ಅಂತರದಿಂದ ಪಾರಾದ ಮಂಜಮ್ಮ, ಕುಟುಂಬದಿಂದ ದೂರ ಉಳಿದರು. ಸಣ್ಣ ಜೋಪಡಿಯಲ್ಲಿ ಬುದುಕು ಮುಂದುವರಿಸಿದರು.

ಜೋಗತಿ ಮಂಜಮ್ಮ ಅವರ ಸುಳಿವ ಹೆಣ್ಣು ಆತ್ಮಕಥನ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿದೆ. ಮಂಜಮ್ಮ ಜೋಗತಿ ಅವರ ಸಂಕಷ್ಟದ ಜೀವನ ಹಾದಿಯನ್ನು ಡಾ.ಅರುಣ ಜೋಳದ ಕೂಡ್ಲಿಗೆ ಆತ್ಮಕಥನವಾಗಿ ಹೊರತಂದದ್ದಾರೆ. ವಿಜಯಪುರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಜೋಗತಿ ಮಂಜಮ್ಮ ಜೀವನ ಚರಿತ್ತೆ ಇದೆ. 

ಹೊಟ್ಟೆಪಾಡಿಗಾಗಿ ಸಂತೆ ಜಾತ್ರೆಗಳಲ್ಲಿ ಕಲಾ ಪ್ರದರ್ಶನ ನೀಡುವ ಜೋಗತಿ ಮಂಜಮ್ಮ ಬಳಿ 15 ಸದಸ್ಯರ ತಂಡವಿದೆ. ಇನ್ನು ಹಲವು ಜಾನಪದ ವೇದಿಕೆಗಳಿಂದ ಬಂದ ಅಹ್ವಾನ ಸ್ವೀಕರಿಸಿ ಜೋಗತಿ ಜಾನಪದ ನೃತ್ಯ ಕಲಾ ಪ್ರದರ್ಶವನ್ನು ನೀಡುತ್ತಾರೆ. ಇದರ ಜೊತೆಗೆ ಕರ್ನಾಟಕ ಜಾನಪದ ಕಲೆಯನ್ನು ಶ್ರೀಮಂತಿಕೆಗೊಳಿಸುವಲ್ಲಿ ಜೋಗತಿ ಮಂಜಮ್ಮ ಅವಿರತವಾಗಿ ಶ್ರಮಿಸುತ್ತಿದ್ದಾರೆ

click me!