Balan Pootheri: ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ದಿನವೇ ಪತ್ನಿ ವಿಯೋಗ

By Suvarna News  |  First Published Nov 9, 2021, 6:56 PM IST
  • Balan Pootheri: ಪ್ರಶಸ್ತಿ ಪಡೆಯೋ ದಿನವೇ ಪತ್ನಿ ವಿಯೋಗ
  • ನೋವಿನ ಮಧ್ಯೆಯೂ ಪ್ರಶಸ್ತಿ ಸ್ವೀಕರಿಸಿದ ಬಾಲನ್ ಪೂತ್ತೆರಿ

ದೆಹಲಿ(ಅ.09): ದೆಹಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ದಿನವೇ ತಾನು ಪತ್ನಿಯನ್ನು ಕಳೆದುಕೊಳ್ಳುತ್ತೇನೆ ಎಂದು ಅವರು ಅಂದುಕೊಂಡಿರಲೇ ಇಲ್ಲ. ದೃಷ್ಟಿ ಇಲ್ಲದಿದ್ದರೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಕೇರಳದ ಸಾಹಿತಿ ಬಾಲನ್ ಪೂತ್ತೇರಿಅವರಿಗೆ ಕಳೆದ ಜನವರಿಯಲ್ಲಿ ಪ್ರಶಸ್ತಿ ಘೋಷಿಸಲಾಗಿತ್ತು. ಇಂದು ದೆಹಲಿಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಆದರೆ ಆ ಸಂತೋಷದ ಮಧ್ಯೆಯೂ ಪತ್ನಿ ಅಗಲಿದ ನೋವಿನಲ್ಲಿದ್ದಾರೆ.

ತನ್ನ ಪತ್ನಿಯ ನಿಧನದ ನೋವಿನ ನಡುವೆಯೂ ಶಾಂತಾ ಬಯಸಿದಂತೆ ಪ್ರಶಸ್ತಿಯನ್ನು ಸ್ವೀಕರಿಸಲು ಬಾಲನ್ ನಿರ್ಧರಿಸಿದ್ದಾರೆ. ಬಾಲನ್ ಅವರು ಪ್ರಶಸ್ತಿ ಸ್ವೀಕರಿಸುವುದು ಪತ್ನಿ ಶಾಂತಾ ಅವರ ದೊಡ್ಡ ಆಸೆ ಎಂದು ಹೇಳಿದ್ದಾರೆ. ನನ್ನ ಜೀವನದಲ್ಲಿ ಇಷ್ಟು ದೊಡ್ಡ ಪ್ರಶಸ್ತಿ ಸಿಗುತ್ತದೆ ಎಂದು ಕನಸು ಕಂಡಿರಲಿಲ್ಲ ಎಂದಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಲಪ್ಪುರಂನ ಕಾರಿಪುರದಲ್ಲಿರುವ ಅವರ ಸ್ವಗೃಹದಲ್ಲಿ ಪತ್ನಿಯ ಅಂತ್ಯಕ್ರಿಯೆ ನಡೆಯಲಿದೆ. ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭ ಮಧ್ಯಾಹ್ನ ನವದೆಹಲಿಯಲ್ಲಿ ನಡೆಯಲಿದೆ. ಈ ವರ್ಷ ಜನವರಿಯಲ್ಲಿ ಬಾಲನ್ ಪುತ್ತೇರಿಯವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿತ್ತು.

Tap to resize

Latest Videos

undefined

ಅಕ್ಷರ ಪ್ರೇಮದ ಮೂಲಕ ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತ ಬರಹಗಾರ ಬಾಲನ್ ಪೂತ್ತೇರಿ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಗವಾನ್ ಕೃಷ್ಣ ಮತ್ತು ಭಕ್ತಿ ಕವಿ ಸೂರದಾಸ್ ಅವರನ್ನು ಮೆಚ್ಚಿಸಲು ಅವರು 200 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಬಾಲನ್ ಪೂತೇರಿ ಹುಟ್ಟಿನಿಂದಲೇ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಎಡಗಣ್ಣಿನ ದೃಷ್ಟಿ ಕೇವಲ 3 ಮೀಟರ್ ವರೆಗೆ ಇತ್ತು. ಅವರು ಸೀಮಿತ ದೃಷ್ಟಿಯಲ್ಲಿ ಪುಸ್ತಕಗಳನ್ನು ಓದುತ್ತಿದ್ದರು.

Padma Award: ಪುರಸ್ಕೃತರನ್ನು ಭೇಟಿಯಾದ ಮೋದಿ, ಅಚ್ಚರಿಯ ವಿಚಾರ ಶೇರ್ ಮಾಡಿದ naukri.com ಸಂಸ್ಥಾಪಕ!

ತಿರುರಂಗಡಿಯ ಪಿಎಸ್‌ಎಂಒ ಕಾಲೇಜಿನಲ್ಲಿ ಎಂಎ ಇತಿಹಾಸವನ್ನು ಪೂರ್ಣಗೊಳಿಸಿದ ನಂತರ ಅವರು 1983 ರಲ್ಲಿ ತಮ್ಮ ಮೊದಲ ಪುಸ್ತಕ ‘ಕ್ಷೇತ್ರ ಆರಾಧನಾ’ ಬರೆದರು. ಅವರು ಬರವಣಿಗೆಯನ್ನು ಮುಂದುವರೆಸಿ ಪುಸ್ತಕ ಪ್ರಕಟಿಸಿದರು. ಅವರು ಬರವಣಿಗೆಯನ್ನು ಮುಂದುವರೆಸಿ ತಮ್ಮ 50 ನೇ ಪುಸ್ತಕ ‘ಗುರುವಾಯೂರ್ ಏಕಾದಶಿ’ ಅನ್ನು 1997 ರಲ್ಲಿ ಪ್ರಕಟಿಸಿದರು. ಅವರು ಗುರುವಾಯುನಲ್ಲಿ ತುಲಾಭಾರ ಆಚರಣೆಯನ್ನು ಮಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು.

63 ಪುಸ್ತಕಗಳನ್ನು ಬರೆದ ನಂತರ ಅವರ ಎಡಗಣ್ಣಿನ ದೃಷ್ಟಿ ಕಡಿಮೆಯಾಗತೊಡಗಿತು. ನಂತರ ಅವರು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡರು. ಆದರೆ ಬಾಲನ್ ಅವರು ಪುಸ್ತಕಗಳನ್ನು ಬರೆಯುವುದನ್ನು ಮುಂದುವರಿಸಿದ್ದರು. ಬಾಲನ್ ಪೂತ್ತೇರಿಯವರ 200 ನೇ ಪುಸ್ತಕ ‘ಶ್ರೀನಾರಾಯಣ ಗುರುದೇವನುಂ ಹೈಂದವ ನವೋತ್ಥಾನವುಂ’ ಅನ್ನು ಡಾ ಪಿ ಕೆ ವಾರಿಯರ್ ಅವರು ಅಕ್ಟೋಬರ್ 19, 2017 ರಂದು ಬಿಡುಗಡೆ ಮಾಡಿದರು.

ವಾಕ್ಯಗಳನ್ನು ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ನಿರ್ದೇಶಿಸಲಾಗುತ್ತುತ್ತು. ಅವರು ಅದನ್ನು ಬರೆಯುತ್ತಿದ್ದರು. ಭಕ್ತರು ವಾಕ್ಯಗಳನ್ನು ಬರೆಯಲು ಬರುತ್ತಿದ್ದರು.  ಬಾಲನ್ ಅವರಿಗೆ 2011 ರಲ್ಲಿ ಕೇರಳ ರಾಜ್ಯ ಸರ್ಕಾರ ವಿಕಲಾಂಗ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಿತ್ತು.

ಜಯಶ್ರೀ ಪ್ರಶಸ್ತಿ, ಲ್ಯಾಟಿನ್ ಕ್ಯಾಥೋಲಿಕ್ ಐಕ್ಯವೇದಿ ಸ್ಥಾಪಿಸಿದ ಸುವರ್ಣ ವಿಶಿಷ್ಟ ಸೇವಾರತ್ನಂ ಜ್ಯೂಬಿಲಿ ಪ್ರಶಸ್ತಿ, ಜ್ಞಾನಾಮೃತಂ ಪ್ರಶಸ್ತಿ, ಕುಂಜುಣ್ಣಿ ಪ್ರಶಸ್ತಿ, ಕರ್ನಾಟಕದ ಧರ್ಮಸ್ಥಳದಿಂದ ಚಿನ್ನದ ಪದಕ ಅವರಿಗೆ ಸಿಕ್ಕಿದೆ. ಕಣ್ಣೂರಿನ ವ್ಯಂಗ್ಯಚಿತ್ರಕಾರ ಸಿಬಿಕೆ ನಂಬಿಯಾರ್ ಅವರು ಬಾಲನ್ ಪೂತ್ತೇರಿಯವರ ಕುರಿತು ‘ಅಂಧಕಾರತ್ತಿಲೆ ವೆಳಿಚಂ’(ಕತ್ತಲಿನಲ್ಲಿರುವ ಬೆಳಕು) ಎಂಬ ಪುಸ್ತಕವನ್ನು ಬರೆದಿದ್ದರು. ತಿರುವನಂತಪುರಂ ಮೂಲದ ಪಿ ಎಸ್ ಶ್ರೀಕುಮಾರ್ ಅವರು ‘ಧನ್ಯಮೀ ಜೀವನ’ ಎಂಬ ಪುಸ್ತಕವನ್ನು ಬರೆದಿದ್ದಾರೆ.

click me!