ಭಾರತದಲ್ಲಿ ನಕ್ಸಲರು ಹಾಗೂ ದಂಗೆಕೋರ ಗುಂಪುಗಳಿಗೆ ತರಬೇತಿ
ನವದೆಹಲಿ: ಭಾರತದಲ್ಲಿ ನಕ್ಸಲರು ಸೇರಿದಂತೆ ಅದೇ ರೀತಿಯ ಪ್ರತ್ಯೇಕತವಾದಿ ಗುಂಪುಗಳಿಗೆ ಭಯೋತ್ಪಾದನಾ ತರಬೇತಿ ನೀಡುತ್ತಿದ್ದ 7 ವಿದೇಶಿ ಪ್ರಜೆಗಳನ್ನು ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಬಂಧಿಸಿದೆ. ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವ ಅಮೆರಿಕನ್ ಪ್ರಜೆಯಾಗಿದ್ದರೆ ಇನ್ನುಳಿದ ಆರು ಜನ ಉಕ್ರೇನ್ ಪ್ರಜೆಗಳಾಗಿದ್ದಾರೆ. ಆರೋಪಿಗಳಲ್ಲಿ ಮೂವರು ಉಕ್ರೇನ್ ಪ್ರಜೆಗಳನ್ನು ದೆಹಲಿಯಲ್ಲಿ ಬಂಧಿಸಿದ್ದರೆ ಮತ್ತುಳಿದ ಮೂವರನ್ನು ಉತ್ತರ ಪ್ರದೇಶದ ಲಕ್ನೋದಲ್ಲಿ ಬಂಧಿಸಲಾಗಿದೆ. ಹಾಗೆಯೇ ಅಮೆರಿಕನ್ ಪ್ರಜೆಯನ್ನು ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಪಟಿಯಾಲಾದ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಈ ಆರೋಪಿಗಳನ್ನು 11 ದಿನಗ ಎನ್‌ಐಎ ಕಸ್ಟಡಿಗೆ ನೀಡಿದೆ.
ಅಮೆರಿಕನ್ ಪ್ರಜೆಯೂ ಸೇರಿ 7 ವಿದೇಶಿಗರ ಬಂಧನ
ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಪ್ರಶಾಂತ್ ಶರ್ಮಾ ಅವರು 6 ಉಕ್ರೇನ್ ಪ್ರಜೆಗಳು ಹಾಗೂ ಓರ್ವ ಅಮೆರಿಕನ್ ಪ್ರಜೆಯನ್ನು ಮಾರ್ಚ್ 27ರವರೆಗೆ ಎನ್‌ಐಎ ಕಸ್ಟಡಿಗೆ ನೀಡಿದೆ. ಮುಚ್ಚಿದ ಕೋರ್ಟ್ ರೂಮ್‌ನಲ್ಲಿ ಇವರ ವಿಚಾರಣೆ ನಡೆದಿದೆ. ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಅತುಲ್ ತ್ಯಾಗಿ ಅಮಿತ್ ರೋಹಿಲಾ ಮತ್ತು ಇತರರು ಎನ್‌ಐಎ ಪರವಾಗಿ ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣದ ತನಿಖೆಗಾಗಿ ಆರೋಪಿಗಳನ್ನು 15 ದಿನದ ಕಸ್ಟಡಿಗೆ ನೀಡುವಂತೆ ಕೇಳಿತ್ತು. ಆದರೆ ನ್ಯಾಯಾಲಯ 11 ದಿನದ ಕಸ್ಟಡಿಗೆ ನೀಡಿದೆ.
ಇದನ್ನೂ ಓದಿ: ಯುದ್ಧದ ನಡುವೆಯೇ ಇರಾನ್‌ನಿಂದ ಮಿಲಿಯನ್‌ಗಟ್ಟಲೇ ಬ್ಯಾರೆಲ್ ತೈಲ ರಫ್ತು: ಹರ್ಮುಜ್ ದಾಟಿ ಹೊರಟ 90 ಹಡಗುಗಳು
ವೀಸಾದ ಮೇಲೆ ಭಾರತಕ್ಕೆ ಬಂದ ಇವರು ಬಳಿಕ ಮಿಜೋರಾಂಗೆ ಭೇಟಿ ನೀಡಿದ್ದರು. ಮಿಜೋರಾಂ ಸಂರಕ್ಷಿತ ಪ್ರದೇಶವಾಗಿದೆ. ನಂತರ, ಅವರು ಮ್ಯಾನ್ಮಾರ್‌ಗೆ ಪ್ರವೇಶಿಸಿ ಅಲ್ಲಿನ ಜನಾಂಗೀಯ ಯುದ್ಧದ ಗುಂಪುಗಳನ್ನು ಸಂಪರ್ಕಿಸಿದ್ದರು. ಎನ್‌ಐಎ ಆರೋಪದ ಪ್ರಕಾರ, ಅವರಿಗೆ ಮ್ಯಾನ್ಮಾರ್‌ನಲ್ಲಿ ತರಬೇತಿ ನೀಡಲಾಗಿದ್ದು, ಅಲ್ಲಿ ಜನಾಂಗೀಯ ಯುದ್ಧ ಗುಂಪುಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಗುಂಪುಗಳು ಭಾರತದಲ್ಲಿರುವ ದೇಶ ವಿರೋಧಿ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿವೆ. ಅಲ್ಲದೇ ಈ ಆರೋಪಿಗಳು ಯುರೋಪ್‌ನಿಂದ ಭಾರತದ ಮೂಲಕ ಡ್ರೋನ್‌ಗಳ ಬೃಹತ್ ಸರಕನ್ನು ತಂದಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ.
ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ
ಮತ್ತೊಂದೆಡೆ, ಹಿರಿಯ ವಕೀಲ ಪ್ರಮೋದ್ ಕುಮಾರ್ ದುಬೆ, ವಕೀಲ ಅತುಲ್ ಸೆಹಗಲ್ ಅವರು ಆರೋಪಿಗಳ ಪರವಾಗಿ ವಾದ ಮಂಡಿಸಿದರು. ಅವರು ಎನ್‌ಐಎ ಕಸ್ಟಡಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ