
ಇತ್ತೀಚೆಗೆ ಹೊರಗೆ ತಿನ್ನುವುದು ಮಾತ್ರವಲ್ಲ, ಹೊರಗಿನಿಂದ ತಂದು ಮನೆಯಲ್ಲಿ ಬೇಯಿಸಿ ತಿನ್ನುವ ಆಹಾರವೂ ಸುರಕ್ಷಿತವಲ್ಲ.. ಇತ್ತೀಚೆಗೆ ಹೊಟೇಲೊಂದರ ಪ್ರಿಡ್ಜ್‌ನಲ್ಲಿ ಕೊಳೆತ ಮಾಂಸ ಪತ್ತೆಯಾದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಆಹಾರ ಸಂಬಂಧಿ ಅನಾಹುತದ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗಿದ್ದು, ವೀಡಿಯೋದಲ್ಲಿ ಯುವಕನೋರ್ವ ಮಾರಾಟಕ್ಕಿಟ್ಟ ಮೀನಿಗೆ, ಜಿರಳೆಗಳನ್ನು ಓಡಿಸುವುದಕ್ಕೆ ಬಳಸುವ ಕೀಟನಾಶಕ ಸ್ಪ್ರೇ ಆಗಿರುವ ಹಿಟ್ ಅನ್ನು ಸ್ಪ್ರೇ ಮಾಡುತ್ತಿರುವುದು ಕಂಡು ಬಂದಿದೆ.
ಮಹಾರಾಷ್ಟ್ರದ ವಸೈನಲ್ಲಿ ಈ ಘಟನೆ ನಡೆದಿದೆ. ವ್ಯಾಪಾರಿಯೊಬ್ಬ ಮಾರಾಟಕ್ಕೆ ತೆರದಿಟ್ಟಿರುವ ಮೀನಿನ ಮೇಲೆ ಹಾಗೂ ಅದರ ಸುತ್ತಮುತ್ತಲೂ ಈ ವಿಷಕಾರಿ ಕೀಟನಾಶಕವಾದ ಹಿಟ್ ಅನ್ನು ಸ್ಪ್ರೇ ಮಾಡುತ್ತಿರುವುದು ಕಂಡು ಬಂದಿದೆ. ಇದು ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನುಂಟು ಮಾಡಿದೆ. ಕೆಲ ಮಾಧ್ಯಮಗಳ ವರದಿಯ ಪ್ರಕಾರ, ವಸೈನ ನವಜೀವನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ವ್ಯಾಪಾರಿಯೊಬ್ಬ ಜಿರಳೆ ಸಾಯಿಸಲು ಬಳಸುವ ಈ ಕೀಟನಾಶಕವನ್ನು ಮನುಷ್ಯರು ತಿನ್ನುವ ಮೀನಿನ ಮೇಲೆ ಸಿಂಪಡಿಸಿದ್ದಾನೆ.
ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ: ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ
ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯ ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. ಸೊಳ್ಳೆ ಹಾಗೂ ಕೀಟಗಳ ಕಾಟವನ್ನು ತಡೆಯುವ ಭರದಲ್ಲಿ ಈ ಯುವಕ ಮನುಷ್ಯರನ್ನೇ ಮರೆತುಬಿಟ್ಟಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ನಿಂಗೆ ಮಗಳನ್ನ ಕೊಡಲ್ಲ ಎಂದಿದ್ದಕ್ಕೆ ಯುವತಿ ತಲೆ ಒಡೆದು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ ಕಿರಾತಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ