ಅದೇ ರೀತಿ ಇಲ್ಲೊಂದು ಕಡೆ ರೈಲ್ವೆ ಟ್ರ್ಯಾಕ್‌ನಲ್ಲಿ ರೀಲ್ಸ್ ಮಾಡಲು ಹೋಗಿ ದಂಪತಿ ಸಾವಿನ ಮನೆ ಸೇರಿದ್ದಾರೆ. ಉತ್ತರ ಪ್ರದೇಶ ಲಖೀಂಪುರ ಖೇರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಲಕ್ನೋ: ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಎಷ್ಟೊಂದು ಅವಘಡಗಳು ನಡೆದರೂ ಕೂಡ ರೀಲ್ಸ್ ಮಾಡುವ ಕೆಲ ಜನರಿಗೆ ಬುದ್ದಿ ಬರೋದೆ ಇಲ್ಲ. ಅದೇ ರೀತಿ ಇಲ್ಲೊಂದು ಕಡೆ ರೈಲ್ವೆ ಟ್ರ್ಯಾಕ್‌ನಲ್ಲಿ ರೀಲ್ಸ್ ಮಾಡಲು ಹೋಗಿ ಸಾವಿನ ಮನೆ ಸೇರಿದ್ದಾರೆ. ಉತ್ತರ ಪ್ರದೇಶ ಲಖೀಂಪುರ ಖೇರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ದಂಪತಿ ತಾವು ಸಾಯುವುದಲ್ಲದೇ ಇವರಿಬ್ಬರ ಮೂರ್ಖತನಕ್ಕೆ ಏನು ಅರಿಯದ 2 ವರ್ಷದ ಮಗು ಕೂಡ ಸಾವನ್ನಪ್ಪಿದೆ.
ಮೃತರನ್ನು 26 ವರ್ಷದ ಮೊಹಮ್ಮದ್ ಅಹ್ಮದ್, 24 ವರ್ಷದ ನಜ್ನೀನ್ ಹಾಗೂ ಇವರ ಎರಡು ವರ್ಷದ ಕಂದ ಅಕ್ರಂ ಎಂದು ಗುರುತಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಈ ಜೋಡಿ ರೈಲ್ವೆ ಟ್ರ್ಯಾಕ್‌ನ ಮೇಲೆ ನಿಂತು ರೀಲ್ಸ್ ಮಾಡಿದ್ದಾರೆ. ಈ ವೇಳೆ ರೈಲು ಬರುವುದನ್ನು ಗಮನಿಸದೇ ಹಳಿಯ ಮೇಲೆ ಇವರು ಸ್ಟಕ್ ಆಗಿದ್ದು, ವೇಗವಾಗಿ ಬಂದ ಪ್ಯಾಸೆಂಜರ್ ರೈಲು ಇವರ ಮೇಲೆ ಪಾಸಾಗಿ ಹೋಗಿದೆ.
undefined
ಸಾಯಲೆಂದು ಬಂದವಳು ರೈಲ್ವೆ ಟ್ರ್ಯಾಕ್‌ನಲ್ಲೇ ನಿದ್ದೆಗೆ ಜಾರಿದಳು
ಈ ದಂಪತಿ ಸೀತಾಪುರ ಜಿಲ್ಲೆಗೆ ಸಮೀಪವಿರುವ ಲಹರ್‌ಪುರ ನಿವಾಸಿಗಳಾಗಿದ್ದು, ಹರಗಾಂವ್ ಗ್ರಾಮದ ಕ್ಯೋಟಿ ಗ್ರಾಮದಲ್ಲಿದ್ದ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿಸಿ ವಾಪಸ್ ಬರುವ ವೇಳೆ, ಓಲೇ - ಲಖೀಂಪುರ ಬಳಿ ಇರುವ ರೈಲ್ವೆ ಬ್ರಿಡ್ಜ್ ಕೆಳಗೆ ತಮ್ಮ ಬೈಕನ್ನು ಪಾರ್ಕ್ ಮಾಡಿದ್ದಾರೆ. ನಂತರ 50 ಮೀಟರ್ ನಡೆದುಕೊಂಡು ಬಂದು ರೈಲ್ವೆ ಟ್ರ್ಯಾಕ್‌ಗೆ ಬಂದು ರೀಲ್ಸ್ ಮಾಡುತ್ತಿದ್ದಾಗ ಲಕ್ನೋದಿಂದ ಮಿಲಾನಿಗೆ ಹೋಗುತ್ತಿದ್ದ ರೈಲು ಅವರ ಮೇಲೆ ಹರಿದು ಹೋಗಿ ಈ ದುರಂತ ಸಂಭವಿಸಿದೆ.
ರೈಲ್ವೆ ಟ್ರ್ಯಾಕ್ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ಕಲಿಂದಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿಸಲು ಯತ್ನ
ರೈಲು ಬರುತ್ತಿದ್ದಿದ್ದನ್ನು ಗಮನಿಸಿ ದಂಪತಿ ಹಳಿಯಿಂದ ಬೇರೆಡೆಗೆ ಓಡುವ ಪ್ರಯತ್ನ ಮಾಡಿದರೂ ಅಷ್ಟರಲ್ಲಾಗಲೇ ರೈಲು ಇವರ ಬಳಿ ಬಂದಾಗಿತ್ತು. ಬಳಿಕ ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಒಟ್ಟಿನಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ರೀಲ್ಸ್ ಮಾಡಲು ಹೋದ ದಂಪತಿಗೆ ಇದು ಜೀವನದ ಕೊನೆ ರೀಲ್ಸ್ ಆಗಿದ್ದಂತು ದುರಂತವೇ ಸರಿ.