ತಿರುಚ್ಚಿ (ತಮಿಳುನಾಡು): ಅದು 1990ರ ಸಮಯ, ತಮಿಳುನಾಡಿನ ತಿರುಚಿರಾಪಳ್ಳಿಯ ಒಂದು ವರ್ಷದ ಗಂಡು ಮಗುವನ್ನು ಅಮೆರಿಕದ ದಂಪತಿ ದತ್ತು ಪಡೆದು ತಮ್ಮ ದೇಶಕ್ಕೆ ಕರೆದೊಯ್ದು ಸಾಕಿದ್ದರು. ಹುಡುಗ ಬೆಳೆದಂತೆ ತನ್ನ ಜೈವಿಕ ಪೋಷಕರು ಇವರಲ್ಲ ಎಂದು ತಿಳಿದ ಬಾಲಕ ತನ್ನ ದತ್ತು ಪಡೆದ ಪೋಷಕರಲ್ಲಿ ತನ್ನ ಮೂಲವನ್ನು ಕೇಳಲು ಶುರು ಮಾಡಿದ. ಇದು ಅವನ ನಿಜವಾದ ಹೆತ್ತವರು ಹಾಗೂ ತಾಯಿಯ ಹುಡುಕಲು ಇನ್ನೂ ಅಂತ್ಯ ಕಾಣದ ಹುಡುಕಾಟವನ್ನು ಅರಂಭಿಸಿದೆ. ಈ ದಶಕವೊಂದರಲ್ಲಿ ಬರೋಬರಿ ನಾಲ್ಕು ಬಾರಿ ತಾಯಿಯನ್ನು ಹುಡುಕುವುದಾಗಿ ಆತ ಭಾರತಕ್ಕೆ ಬಂದಿದ್ದಾನೆ.
ಪ್ರಸ್ತುತ 32 ವರ್ಷ ವಯಸ್ಸಿನ ಥಾಮಸ್ ಕುಮಾರ್ ಜಾನ್ಸನ್ ಅವರ ಕಣ್ಣಿನಿಂದ ನೀರು ಜಾರಿ ಕೆಳಗೆ ಬಿದ್ದವು. ಏಕೆಂದರೆ ಆತ ತನ್ನ ತಾಯಿಯನ್ನು ಹುಡುಕಿ ಆಕೆಯನ್ನು ಪತ್ತೆ ಹಚ್ಚಲು ಕಳೆದ ದಶಕದಲ್ಲಿ ನಾಲ್ಕನೇ ಬಾರಿಗೆ ಆತ ಭಾರತಕ್ಕೆ ಬಂದಿದ್ದ. ತಾಯಿಯ ಬಗೆಗಿನ ಇನ್ನಿಲ್ಲದ ಆಸಕ್ತಿ ಆತನನ್ನು ಮತ್ತೆ ಮತ್ತೆ ಭಾರತಕ್ಕೆ ಬರುವಂತೆ ಮಾಡುತ್ತಿದೆ. ಏಕೆ ಇಷ್ಟೊಂದು ಆಸೆ ಎಂದು ಆತನಲ್ಲಿ ಕೇಳಿದಾಗ ಆತ ಹೇಳಿದ್ದು ಇಷ್ಟು
ಶಿವಮೊಗ್ಗ: ಬಿಟ್ಟು ಹೋಗಿದ್ದ ಮಗು ಹುಡುಕಿ ಬಂದ ತಾಯಿ..!
'ಕೇವಲ ಅವಳನ್ನು ತಬ್ಬಿಕೊಳ್ಳಲು ಮತ್ತು ನಾನು ಚೆನ್ನಾಗಿದ್ದೇನೆ ಎಂದು ಹೇಳಲು ಮಾತ್ರ ಎಂದು ಹೇಳುತ್ತಾ ಆತ ಭಾವುಕನಾದ. ನಾನು ನನ್ನ ತಾಯಿಯನ್ನು ತಬ್ಬಿಕೊಳ್ಳಲು ಬಯಸುತ್ತೇನೆ ಮತ್ತು ನಾನು ಜೀವಂತವಾಗಿದ್ದೇನೆ ಮತ್ತು ಸರಿಯಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಅವಳು ಆರೋಗ್ಯವಾಗಿದ್ದಾಳೆಯೇ ಮತ್ತು ನನಗೆ ಯಾರಾದರೂ ಸಹೋದರರು ಅಥವಾ ಸಹೋದರಿಯರು ಮತ್ತು ಸಂಬಂಧಿಕರು ಇದ್ದಾರೆಯೇ ಮತ್ತು ನನ್ನ ತಂದೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ಬಯಸುತ್ತೇನೆ ಎಂದು ಆತ ಹೇಳಿದ್ದಾನೆ.
ಅವರನ್ನು ದತ್ತು ನೀಡಿದ ದಾಖಲೆ ಪತ್ರಗಳಲ್ಲಿ ಮೇರಿ (Mary) ಎಂಬ ಮಹಿಳೆಯನ್ನು ತಾಯಿ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಅವರು ಹೆಚ್ಚು ಗಮನ ಹರಿಸಿದ್ದಾರೆ, ಸಮಾಜ ಕಲ್ಯಾಣ ಸಂಸ್ಥೆಯೇ ದತ್ತು ಸ್ವೀಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ನಾನು ಏಪ್ರಿಲ್ 18, 1989 ರಂದು ಜನಿಸಿದೆ. ಮತ್ತು ನಾನು ಒಂದು ವರ್ಷದವನಿದ್ದಾಗ, ನನ್ನನ್ನು ದತ್ತು ನೀಡಲಾಯಿತು. ನಾನು 10 ವರ್ಷಗಳಿಂದ ಹುಡುಕುತ್ತಿದ್ದೇನೆ ಮತ್ತು ನಾನು ಭಾರತಕ್ಕೆ ನಾಲ್ಕನೇ ಬಾರಿಗೆ ಬಂದಿದ್ದೇನೆ. ಅವಳು(ತಾಯಿ) ಚೆನ್ನಾಗಿದ್ದಾಳೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಯಾರಿಗಾದರೂ ಯಾವುದೇ ಮಾಹಿತಿ ಇದ್ದರೆ, ದಯವಿಟ್ಟು ನನ್ನೊಂದಿಗೆ ಹಂಚಿಕೊಳ್ಳಿ, ಎಂದು ತುಂಬಿದ ಕಣ್ಣುಗಳಿಂದ ಅವರು ಮನವಿ ಮಾಡಿದರು. ತನ್ನ ಮೂಲ ಬೇರಿನೊಂದಿಗೆ ಮತ್ತೆ ಒಂದಾಗುವುದು ನನ್ನನ್ನು ಸಂಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಥಾಮಸ್ ಹೇಳುತ್ತಾರೆ.
2 ವರ್ಷ ಕಾದು, ಶ್ರವಣ ದೋಷ ಇರೋ ಭಾರತೀಯ ಮಗುವನ್ನು ದತ್ತು ಪಡೆದ ಅಮೆರಿಕನ್ ದಂಪತಿ
ದತ್ತು ನೀಡುವ ಮೊದಲು ತನಗೆ ಸಂಪತ್ ಕುಮಾರ್ (Sampath Kumar) ಎಂಬ ಹೆಸರಿಡಲಾಗಿತ್ತು. ನನ್ನ ಪೋಷಕರು ಪುದುಕೊಟ್ಟೈ (Pudukottai) ಪಟ್ಟಣದ ತಿರುಚ್ಚಿ (Trichy) ನಗರದ ಉಪನಗರವಾದ ಮುತರಸನಲ್ಲೂರಿನಲ್ಲಿ(Mutharasanallur) ವಾಸಿಸುತ್ತಿದ್ದರು ಎಂಬುದು ಕೆಲ ದಾಖಲೆಗಳಿಂದ ಅವರಿಗೆ ತಿಳಿದಿದೆ. ಪ್ರಸ್ತುತ ಅಮೆರಿಕಾದ ಓಹಿಯೋದ (Ohio) ಗ್ರಾಮಾಂತರ ಪ್ರದೇಶದಲ್ಲಿ ಬೆಳೆದ ಅವರು ಭಾರತೀಯ ಸಂಸ್ಕೃತಿ ಮತ್ತು ಭಾಷೆಯಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದಾರೆ. ಅವರ ದತ್ತು ಪಡೆದ ಅಮೆರಿಕನ್ ತಾಯಿ ವಿಜ್ಞಾನಿ ಕಮ್ ಅಕಾಡೆಮಿಕ್ ಆಗಿ ಕೆಲಸ ಮಾಡುತ್ತಿದ್ದರೆ ತಂದೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು, 2008ರಲ್ಲಿ ನಿಧನರಾದರು.
ದತ್ತು ಪಡೆದ ತಂದೆಯೇ ಥಾಮಸ್‌ಗೆ ತನ್ನ ಹೆತ್ತ ಕರುಳನ್ನು ಕಂಡುಹಿಡಿಯಲು ಪ್ರೋತ್ಸಾಹಿಸಿದ್ದರು ಮತ್ತು ಭಾರತಕ್ಕೆ ಭೇಟಿ ನೀಡಲು ಜಾನ್ಸನ್ (Johnson) ಮತ್ತು ಅವನ ಮಲ ಸಹೋದರಿಗಾಗಿ ವಿಮಾನ ಟಿಕೆಟ್‌ಗಳನ್ನು ಸಹ ಬುಕ್ ಮಾಡಿದ್ದರು. ಭಾರತದಲ್ಲಿ ಮತ್ತೆ, ತನ್ನ ಮೂಲದೊಂದಿಗೆ ಒಂದಾಗಲು ಥಾಮಸ್ ಆಶಿಸುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಅವರಿಗೆ ಪುಣೆ ಮೂಲದ ವಕೀಲರಾದ, ಮಕ್ಕಳ ಕಳ್ಳಸಾಗಣೆ (child trafficking)ವಿರುದ್ಧದ ಸಂಘಟನೆಯ ಅಂಜಲಿ ಪವಾರ್ ಅವರು ಸಹಾಯ ಮಾಡುತ್ತಿದ್ದಾರೆ. ದತ್ತು ನೀಡುವ ಸಮಯದಲ್ಲಿ ಥಾಮಸ್ ತಾಯಿ ಮೇರಿಗೆ 21 ವರ್ಷ ವಯಸ್ಸಾಗಿತ್ತು ಹೀಗಾಗಿ ಈಗ ಅವಳು ತನ್ನ 50 ರ ದಶಕದ ಆರಂಭದಲ್ಲಿರಬಹುದು. ನಾವು ಮುತರಸನಲ್ಲೂರು ಮತ್ತು ಪುದುಕೊಟ್ಟೈನ ಕೆಲವು ಚರ್ಚ್‌ಗಳಿಗೆ ಭೇಟಿ ನೀಡಿದ್ದೇವೆ ಮತ್ತು ಕೆಲವು ಸಕಾರಾತ್ಮಕ ವಿಚಾರಗಳನ್ನು ಪಡೆದುಕೊಂಡಿದ್ದೇವೆ. ಅವರು ಸಿಗುವ ಭರವಸೆಯಲ್ಲಿದ್ದೇವೆ ಎಂದು ಅಂಜಲಿ ಪವಾರ್ (Anjali Pawar) ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ