18 ವರ್ಷ ಮೇಲ್ಪಟ್ಟವರಿಗೆ ಏಪ್ರಿಲ್‌ 10 ರಿಂದ ಬೂಸ್ಟರ್ ಡೋಸ್, ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯ!

By Suvarna News  |  First Published Apr 8, 2022, 3:48 PM IST

* 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಆರಂಭ

* ಏಪ್ರಿಲ್‌ 10 ರಿಂದ ಬೂಸ್ಟರ್ ಡೋಸ್, ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯ!

* ಬೂಸ್ಟರ್‌ ಡೋಸ್‌ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ


ನವದೆಹಲಿ(ಏ.08): 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆ ಡೋಸ್ ಅಥವಾ ಬೂಸ್ಟರ್‌ ಡೋಸ್ ಆರಂಭಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಈವರೆಗೆ ಕೇವಲ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ 'ಮುನ್ನೆಚ್ಚರಿಕೆ ಡೋಸ್' ಅಥವಾ ಬೂಸ್ಟರ್ ಶಾಟ್ ಪಡೆಯಲು ಅರ್ಹರಾಗಿದ್ದರು.

ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು

Tap to resize

Latest Videos

-18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಡೋಸ್ ಲಸಿಕೆ ಪಡೆದ 9 ತಿಂಗಳು ಪೂರೈಸಿದವರಷ್ಟೇ ಈ ಬೂಸ್ಟರ್‌ ಡೋಸ್‌ಗೆ ಅರ್ಹರಾಗಿರುತ್ತಾರೆ.

Covid Crisis: 12ರಿಂದ 14 ರೊಳಗಿನ 11.46% ಮಕ್ಕಳಿಗಷ್ಟೇ ಕೊರೋನಾ ಲಸಿಕೆ

- ಈ ಸೌಲಭ್ಯವು ಎಲ್ಲಾ ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.

- ಮೊದಲ ಮತ್ತು ಎರಡನೇ ಡೋಸ್‌ಗಾಗಿ ಸರ್ಕಾರಿ ಲಸಿಕೆ ಕೇಂದ್ರಗಳ ಮೂಲಕ ನಡೆಯುತ್ತಿರುವ ಉಚಿತ ಲಸಿಕೆ ಕಾರ್ಯಕ್ರಮ ಮತ್ತು ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60+ ಜನಸಂಖ್ಯೆಗೆ ನೀಡುತ್ತಿರುವ ಮುನ್ನೆಚ್ಚರಿಕೆ ಡೋಸ್ ಮುಂದುವರಿಯುತ್ತದೆ. ಅಲ್ಲದೇ ಈ ಅಭಿಯಾನ ಮತ್ತಷ್ದಟು ವೇಗ ಪಡೆದುಕೊಳ್ಳಲಿದೆ.

-‘ಮುನ್ನೆಚ್ಚರಿಕೆ ಡೋಸ್’ ಮೊದಲ ಮತ್ತು ಎರಡನೇ ಡೋಸ್‌ನಂತೆಯೇ ಇರುತ್ತದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕೋವಾಕ್ಸಿನ್ ಪಡೆದವರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದವರಿಗೆ ಕೋವಿಶೀಲ್ಡ್ ಸಿಗುತ್ತದೆ.

- ಇಲ್ಲಿಯವರೆಗೆ, ದೇಶದ ಎಲ್ಲಾ 15+ ಜನಸಂಖ್ಯೆಯಲ್ಲಿ ಸುಮಾರು 96% ಜನರು ಕನಿಷ್ಠ ಒಂದು ಕೋವಿಡ್ -19 ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ ಮತ್ತು 15+ ಜನಸಂಖ್ಯೆಯ ಸುಮಾರು 83% ಜನರು ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

Covid Crisis: ವಿದೇಶಕ್ಕೆ ಹೋಗುವವರಿಗೆ ಶೀಘ್ರ ಬೂಸ್ಟರ್‌ ಡೋಸ್‌?

- ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು ಮತ್ತು 60+ ಜನಸಂಖ್ಯೆಯ ಗುಂಪಿಗೆ 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. 45% 12 ರಿಂದ 14 ವರ್ಷ ವಯಸ್ಸಿನವರು ಸಹ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ.

2.4 ಕೋಟಿ ಜನರು ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ

ಇಲ್ಲಿಯವರೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ. ಕೊರೋನಾ ವೈರಸ್‌ನ ಹೊಸ ರೂಪಾಂತರದ (ಎಕ್ಸ್‌ಇ ರೂಪಾಂತರ) ಸೋಂಕಿನ ಪ್ರಕರಣವು ಬೆಳಕಿಗೆ ಬಂದ ನಂತರ, ಆತಂಕವು ಮತ್ತೊಮ್ಮೆ ಹೆಚ್ಚಾಗಿದೆ. ಏಪ್ರಿಲ್ 6 ರಂದು, ಮುಂಬೈನ ನಾಗರಿಕ ಸಂಸ್ಥೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಕೊರೋನಾ ವೈರಸ್‌ನ ಹೊಸ XE ರೂಪಾಂತರದ ಒಂದು ಪ್ರಕರಣವು ನಗರದಲ್ಲಿ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.

185.38 ಕೋಟಿ ದಾಟಿದ ಕೊರೋನಾ ಲಸಿಕೆ ಪಡೆದವರ ಸಂಖ್ಯೆ

ವಾಸ್ತವವಾಗಿ, ಭಾರತದಲ್ಲಿ ಕೊರೋನಾ ಲಸಿಕೆಗಳ ಸಂಖ್ಯೆ 185.38 ಕೋಟಿ ದಾಟಿದೆ. ಏಪ್ರಿಲ್ 8 ರ ಹೊತ್ತಿಗೆ ಭಾರತದ COVID-19 ವ್ಯಾಕ್ಸಿನೇಷನ್ ಕವರೇಜ್ 185.38 ಕೋಟಿಗಳನ್ನು ದಾಟಿದೆ. 12 ರಿಂದ 14 ವರ್ಷ ವಯಸ್ಸಿನ ಹದಿಹರೆಯದವರಿಗೆ COVID-19 ಲಸಿಕೆಯನ್ನು ಮಾರ್ಚ್ 16, 2022 ರಂದು ಪರಿಚಯಿಸಲಾಯಿತು. ಇದುವರೆಗೆ 2.11 ಕೋಟಿಗೂ ಹೆಚ್ಚು ಹದಿಹರೆಯದವರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.

click me!