ಲಡಾಕ್‌ನಲ್ಲಿ ಪ್ರವಾಸಿಗರ ಆಟಾಟೋಪ: ನೆಟ್ಟಿಗರ ಆಕ್ರೋಶ

Published : Apr 11, 2022, 07:40 PM ISTUpdated : Apr 11, 2022, 09:01 PM IST
ಲಡಾಕ್‌ನಲ್ಲಿ ಪ್ರವಾಸಿಗರ ಆಟಾಟೋಪ: ನೆಟ್ಟಿಗರ ಆಕ್ರೋಶ

ಸಾರಾಂಶ

ಸರೋವರದಲ್ಲಿ ಕಾರು ಓಡಿಸಿದ ಪ್ರವಾಸಿಗರು ಪ್ಯಾಂಗೊಂಗ್ ಸರೋವರದಲ್ಲಿ ಮೋಜು ಮಸ್ತಿ ಮೊಬೈಲ್‌ ಟೇಬಲ್ ಮೇಲೆ ಮದ್ಯದ ಬಾಟಲ್‌

ಲಡಾಖ್‌ನ ಪ್ಯಾಂಗೊಂಗ್ ಸರೋವರದಲ್ಲಿ (Pangong Lake) ಪ್ರವಾಸಿಗರು ಕಾರು ಚಾಲನೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social Media) ವೈರಲ್ ಆಗಿದ್ದು, ಪ್ರವಾಸಿಗರ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಲಡಾಕ್(Ladakh) ಭಾರತದ ಸುಂದರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಅದ್ಭುತ ಸೌಂದರ್ಯದಿಂದಾಗಿ ಇಲ್ಲಿ ಬಾಲಿವುಡ್‌ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳ ಶೂಟಿಂಗ್ ಇಲ್ಲಿ ನಡೆದಿದೆ. ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಪ್ರವಾಸಿಗರಾಗಿ, ನಮ್ಮ ನೆಚ್ಚಿನ ಪ್ರವಾಸಿ ತಾಣಗಳನ್ನು ನಮ್ಮದು ಎಂಬಂತೆ ಸ್ವಚ್ಛವಾಗಿಡಲು ಮತ್ತು ಸ್ಥಳದ ಪವಿತ್ರತೆಯನ್ನು ಕಾಪಾಡಿಕೊಳ್ಳಲು ನಾವು  ಸದಾ ಬದ್ಧರಾಗಿರಬೇಕು. ಆದರೆ ಪ್ರವಾಸಿಗರು (Tourist)  ಅದನ್ನು ಮರೆತು ಬೇಜವಾಬ್ದಾರಿ ವರ್ತನೆ ತೋರುತ್ತಾರೆ. 

ಲಡಾಖ್‌ನಿಂದ ಬಂದಂತಹ ಅಂತಹ ಒಂದು ವೀಡಿಯೊದಲ್ಲಿ ಮೂವರು ಪ್ರವಾಸಿಗರು ತಮ್ಮ ಕಾರನ್ನು ಪ್ರಾಚೀನ ಪ್ಯಾಂಗಾಂಗ್ ಸರೋವರದಲ್ಲಿ ಓಡಿಸುತ್ತಿರುವುದನ್ನು ಕಾಣಬಹುದು. ಜಿಗ್ಮತ್ ಲಡಾಖಿ ಎಂಬ ಹೆಸರಿನ ಟ್ವಿಟ್ಟರ್ (twitter) ಬಳಕೆದಾರರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ವ್ಯಕ್ತಿಯೊಬ್ಬರು ಸರೋವರದಲ್ಲಿ ಎಸ್‌ಯುವಿ ಗಾಡಿಯನ್ನು ಓಡಿಸುತ್ತಿರುವುದನ್ನು ನೋಡಬಹುದು, ಗಾಡಿಯಲ್ಲಿರುವ ಇನ್ನಿಬ್ಬರು ಯುವಕರು ಸನ್‌ರೂಫ್‌ನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಮಡಚಬಹುದಾದ ಕುರ್ಚಿ ಮತ್ತು ಟೇಬಲ್ (table) ಅನ್ನು ಸಹ ವೀಡಿಯೊದಲ್ಲಿ ಕಾಣಬಹುದು. ಟೇಬಲ್‌ ಮೇಲೆ ಹಲವಾರು ಮದ್ಯದ ಬಾಟಲಿಗಳು, ನೀರು ಮತ್ತು ಚಿಪ್ಸ್ ಪ್ಯಾಕೆಟ್‌ಗಳನ್ನು ಹರಡಲಾಗಿದೆ. 

ವೀಡಿಯೊವನ್ನು ಹಂಚಿಕೊಂಡ ಜಿಗ್ಮತ್ ಲಡಾಖಿ,'ನಾನು ಮತ್ತೊಂದು ನಾಚಿಕೆಗೇಡಿನ ವೀಡಿಯೊವನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತಿದ್ದೇನೆ. ಇಂತಹ ಬೇಜವಾಬ್ದಾರಿ ಪ್ರವಾಸಿಗರು ಲಡಾಖ್ ಅನ್ನು ಕೊಲ್ಲುತ್ತಿದ್ದಾರೆ. ನಿಮಗೆ ಗೊತ್ತೆ? ಲಡಾಖ್ 350 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿದೆ ಮತ್ತು ಪ್ಯಾಂಗೊಂಗ್‌ನಂತಹ ಸರೋವರಗಳು ಅನೇಕ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಇಂತಹ ಕೃತ್ಯವು ಅನೇಕ ಪಕ್ಷಿ ಪ್ರಭೇದಗಳ ಆವಾಸ ಸ್ಥಾನವನ್ನು ಅಪಾಯಕ್ಕೆ ದೂಡಬಹುದು ಎಂದು ಅವರು ಬರೆದಿದ್ದಾರೆ.

ವಾಹನ ಸಂಚರಿಸಬಲ್ಲ ವಿಶ್ವದಲ್ಲೇ ಅತಿ ಎತ್ತರದ ರಸ್ತೆ ಭಾರತದಲ್ಲಿ!

ವಿಡಿಯೋ ನೋಡಿದ ನೆಟ್ಟಿಗರು ಪ್ರವಾಸಿಗರ ಅಸಡ್ಡೆ ವರ್ತನೆಗೆ ಛೀಮಾರಿ ಹಾಕಿದ್ದಾರೆ. ವಿಡಿಯೋ ನೋಡಿ ಕೋಪಗೊಂಡ ಜನ  ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ಪ್ರವಾಸಿ ತಾಣದಲ್ಲಿ ಬೇಜವಾಬ್ದಾರಿ ವರ್ತನೆ ತೋರಿದ ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ ಗಮನಾರ್ಹವಾಗಿ, ಈ ವಾಹನದ ನೋಂದಣಿ ಸಂಖ್ಯೆ ಗುರುಗ್ರಾಮ್‌ (Gurugram) ಮೂಲದ್ದಾಗಿದೆ.

Muthoottu Mini : ಬಿಸಿನಸ್ ಪಾರ್ಟನರ್ ಬೇಕೆಂದ ಯುವಕ,  ಬೈಕ್ ಹತ್ತಿ ಲಡಾಕ್‌ಗೆ ಹೊರಟಳು!

ರಾಜ್ಯದ ಮಂತ್ರಿಗಳು ಈ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ದಂಡ ವಿಧಿಸಿ ಮತ್ತು ಅವರ ತಪ್ಪನ್ನು ತಿಳಿಯಪಡಿಸಿ. ಇದರಿಂದ ಇತರ ಪ್ರವಾಸಿಗರು ಈ ರೀತಿ ಮಾಡುವುದು ತಪ್ಪುತ್ತದೆ. ಈ ರೀತಿಯ ವರ್ತನೆ ತೋರುವವರು ಪ್ರವಾಸಿ ತಾಣಕ್ಕೆ ಹೋಗವುದನ್ನು ನಿಷೇಧಿಸಬೇಕು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಲಡಾಖ್‌ಗೆ ಪ್ರವೇಶಿಸುವ ಪ್ರತಿಯೊಂದು ಕಾರನ್ನು ಪರಿಶೀಲಿಸಬೇಕು ಮದ್ಯಪಾನ ಮಾಡಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಬೇಕು. ರಸ್ತೆಯ ಮೂಲಕ ಖಾಸಗಿ ಕಾರುಗಳು/ವಾಹನಗಳಿಗೆ ಅನುಮತಿ ನೀಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!