
ಚೆನ್ನೈ(ಏ.11): ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ರಾಜಕೀಯ ಮರುಪ್ರವೇಶ ಹಾಗೂ ಎಐಎಡಿಎಂಕೆ ಪಕ್ಷದಲ್ಲಿ ಹಿಡಿತ ಸಾಧಿಸಲು ಯತ್ನಿಸಿದ್ದ ಮಾಜಿ ಸಿಎಂ ಜಯಲಲಿತಾ ಆಪ್ತೆ ವಿಕೆ ಶಶಿಕಲಾಗೆ ತೀವ್ರ ಹಿನ್ನಡೆಯಾಗಿದೆ. ಜಯಲಲಿತಾ ನಿಧನದ ಬಳಿಕ ಪಕ್ಷದಿಂದ ಉಚ್ಚಾಟನೆ ಮಾಡಿದ ನಿರ್ಧಾರ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಶಶಿಕಲಾ ವಿರುದ್ಧ ಆದೇಶ ಹೊರಬಿದ್ದಿದೆ. ಉಚ್ಚಾಟನೆ ನಿರ್ಧಾರದಲ್ಲಿ ತಪ್ಪಿಲ್ಲ ಎಂದು ಕೋರ್ಟ್ ಹೇಳಿದೆ.
2017ರಲ್ಲಿ ಎಐಎಡಿಎಂಕೆ ಪಕ್ಷದ ನಾಯಕರಾದ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಒ ಪನ್ನೀರ್ ಸೆಲ್ವಂ ಮಹತ್ವದ ನಿರ್ಧಾರ ಪ್ರಕಟಿಸಿದ್ದರು. ಪಕ್ಷದ ಜನರಲ್ ಸೆಕ್ರೆಟರಿ ಸ್ಥಾನದಿಂದ ವಿಕೆ ಶಶಿಕಲಾ ಅವರನ್ನು ಉಚ್ಚಾಟಿಸಿದ್ದರು. ಈ ನಿರ್ಧಾರ ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಕೆ ಶಶಿಕಲಾ ಜೈಲು ಪಾಲಾಗುವ ಮನ್ನ ತೆಗೆದುಕೊಳ್ಳಲಾಗಿತ್ತು. ಈ ಮೂಲಕ ಶಶಿಕಲಾ ರಾಜಕೀಯ ಭವಿಷ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತು.
Bengaluru Jail: ಶಶಿಕಲಾಗೆ ಜೈಲಲ್ಲಿ ಆತಿಥ್ಯ: ಅಧಿಕಾರಿಗಳ ವಿರುದ್ಧ ತನಿಖೆ
ಈ ನಿರ್ಧಾರದಿಂದ ಅಸಮಾಧಾನಗೊಂಡ ವಿಕೆ ಶಶಿಕಲಾ ಎಐಎಡಿಎಂಕೆ ಜನರಲ್ ಸೆಕ್ರೆಟರಿ ಸ್ಥಾನದಿಂದ ವಜಾಗೊಳಿಸಿರುವ ನಿರ್ಧಾರ ಮಾನ್ಯವಲ್ಲ ಎಂದು 2017ರಲ್ಲಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಪಕ್ಷ ತೆಗೆದುಕೊಂಡ ನಿರ್ಧಾರದಲ್ಲಿ ಲೋಪವಿಲ್ಲ. ಹೀಗಾಗಿ ವಿಕೆ ಶಶಿಕಲಾ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಹೈಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡಿರುವ ವಿಕೆ ಶಶಿಕಲಾ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಹಾಕಲು ಮುಂದಾಗಿದ್ದಾರೆ ಎಂದು ವಿಕೆ ಶಶಿಕಲಾ ಮಾಧ್ಯಮ ವಕ್ತಾರರು ಹೇಳಿದ್ದಾರೆ.
ಶಶಿಕಲಾ ರಾಜಕೀಯ ಪ್ರವೇಶ ಸದ್ಯಕ್ಕೆ ದೂರವಾಗಿದೆ. ಇತ್ತ ಬಿಜೆಪಿ ತನ್ನ ಅಸ್ತಿತ್ವ ಸ್ಥಾಪಿಸಲು ಹೆಣಗಾಡುತ್ತಿದೆ. ಹೀಗಾಗಿ ಎಂಕೆ ಸ್ಟಾಲಿನ್‌ಗೆ ಪ್ರಬಲ ಪ್ರತಿಸ್ಪರ್ಧಿಗಳು ಇಲ್ಲದಾಗಿದೆ. ಇದರಿಂದ ತಮಿಳುನಾಡು ರಾಜಕೀಯ ಇದೀಗ ಹೊಸ ರಂಗು ಪಡೆದುಕೊಳ್ಳುತ್ತಿದೆ.
Sashikala meets Talaiva: ಸೂಪರ್‌ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಜಯಾ ಆಪ್ತೆ ಶಶಿಕಲಾ
ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಪೂರೈಸಿದ್ದ ಶಶಕಲಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ನಾಲ್ಕು ವರ್ಷ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಪೂರೈಸಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ 2021ರ ಆರಂಭದಲ್ಲಿ ಪರಪ್ಪರ ಅಗ್ರಹಾರದಿಂದ ಬಿಡುಗಡೆಯಾಗಿ ಕಾರು ರ್ಯಾಲಿ ಮೂಲಕ ಚೆನ್ನೈಗೆ ತೆರಳಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್‌್ಫ ಶೈರ್ ರೆಸಾರ್ಟ್‌ನಲ್ಲಿ ತಂಗಿದ್ದ ಶಶಿಕಲಾ ನಟರಾಜನ್ ಬಳಿಕ ಚೆನ್ನೈಗೆ ಕಾರು ರಾರಯಲಿ ಮೂಲಕ ತೆರಳಿದ್ದರು. ರೋಡ್ ಶೋ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದ್ದರು. ಇದು ಅವರ ರಾಜಕೀಯ ಪ್ರವೇಶದ ರ್ಯಾಲಿ ಎಂದು ಎಲ್ಲರೂ ಭಾವಿಸಿದ್ದರು. . ದೇವನಹಳ್ಳಿಯಲ್ಲಿ ಆರಂಭವಾದ ಕಾರು ರಾರಯಲಿ ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ವೇಲೂರು ಮತ್ತು ಕಾಂಚಿಪುರ, ತಿರವಳ್ಳೂರು ಮಾರ್ಗವಾಗಿ ರಾತ್ರಿ 9 ಗಂಟೆಗೆ ಚೆನ್ನೈ ತಲುಪಿತ್ತು.
ರಾರಯಲಿಯಲ್ಲಿ ಸುಮಾರು ಎರಡರಿಂದ ಮೂರು ಸಾವಿರ ವಾಹನಗಳು ಭಾಗವಹಿಸಿತ್ತು. ಶಶಿಕಲಾ ಅವರೊಂದಿಗೆ ಕುಟುಂಬ ಸದಸ್ಯರು, ಸಂಬಂಧಿಗಳು, ಅಭಿಮಾನಿಗಳು ಮತ್ತು ಎಐಎಡಿಎಂಕೆ ಕಾರ್ಯಕರ್ತರು ರಾರಯಲಿಯಲ್ಲಿ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಶಶಿಕಲಾ ಅವರನ್ನು ಕ್ಯಾರವಾನ್ ಹಿಂಬಾಲಿಸಲಿದೆ. ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಸಮಾವೇಶ ಏರ್ಪಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ