Qutab Minar: 'ವಿಷ್ಣು ಸ್ತಂಭ ಕೆಡವಿ ಕಟ್ಟಿದ್ದು ಕುತುಬ್ ಮಿನಾರ್' 

Published : Apr 11, 2022, 07:27 PM ISTUpdated : Apr 11, 2022, 07:30 PM IST
Qutab Minar: 'ವಿಷ್ಣು ಸ್ತಂಭ ಕೆಡವಿ ಕಟ್ಟಿದ್ದು ಕುತುಬ್ ಮಿನಾರ್' 

ಸಾರಾಂಶ

* ವಿಷ್ಣು ಸ್ತಂಭ ಕೆಡವಿ ಕಟ್ಟಿದ್ದು ಕುತುಬ್ ಮಿನಾರ್ * ಮುಸ್ಲಿಂ ದೊರೆಗಳು ಒಡೆದು ಕಟ್ಟಿದ್ದಾರೆ * ಸ್ತಂಭ ಶಾಸನಗಳಲ್ಲಿ ದಾಖಲೆಗಳಿವೆ * ಜೈನ ದೇವಾಲಯಗಳನ್ನು ನೆಲಸಮ ಮಾಡಲಾಗಿತ್ತು

ನವದೆಹಲಿ (ಏ. 11)  ಈಗ ಮತ್ತೊಂದು ವಿಚಾರ ಚರ್ಚೆಗೆ ಬಂದಿದೆ.  ವಿಶ್ವ ಹಿಂದೂ ಪರಿಷತ್(VHP)  ಕುತಾಬ್ ಮಿನಾರ್ (Qutab Minar) ಅನ್ನು 'ವಿಷ್ಣು ಸ್ತಂಭ' (Vishnu Stambh ) ಎಂದು ಪ್ರತಿಪಾದಿಸಿದ್ದು, ಅದರ ಕೆಲವು ಭಾಗಗಳನ್ನು ಮುಸ್ಲಿಂ (Muslim) ಆಡಳಿತಗಾರನು ಪುನರ್ನಿರ್ಮಿಸಿ ಕುವ್ವಾತ್-ಉಲ್-ಇಸ್ಲಾಂ ಎಂದು ಮರುನಾಮಕರಣ ಮಾಡಿದ್ದಾರೆ ಎಂದು  ಹೇಳಿದೆ.

ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿ,  73 ಮೀಟರ್ ಎತ್ತರದ ರಚನೆಯನ್ನು ಹಿಂದೂ ದೊರೆಗಳ ಕಾಲದಲ್ಲಿ ನಿರ್ಮಿಸಲಾಗಿತ್ತು. ಇದನ್ನಿ ವಿಷ್ಣುವಿನ ದೇವಾಲಯದ ಮೇಲೆ ನಿರ್ಮಿಸಲಾಗಿತ್ತು ಎಂದಿದ್ದಾರೆ.

ದೇಶಕ್ಕೆ (India) ಮುಸ್ಲಿಂ ಆಡಳಿತ ಬಂದಾಗ ಈಗ ಕುತುಬ್ ಮಿನಾರ್ ಎಂದು ಕರೆಯುತ್ತಿರುವ ವಿಷ್ಣು ಸ್ತಂಭದ ಕೆಲವು ಭಾಗಗಳನ್ನು ಜತೆಗೆ  27 ಹಿಂದೂ-ಜೈನ ದೇವಾಲಯಗಳನ್ನು ನೆಲಸಮಗೊಳಿಸಲಾಯಿತು. ನಂತರ ಪುನರ್ ನಿರ್ಮಾಣ ಮಾಡುವಂತೆ ಮಾಡಿ ಕುವ್ವಾತ್-ಉಲ್-ಇಸ್ಲಾಂ (ಇಸ್ಲಾಂನ ಶಕ್ತಿ) ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದ್ದಾರೆ.

ಹಾನಿ ಮಾಡುವಷ್ಟು ಮಾಡಿ ನಂತರ  ಹಾನಿಗೊಳಗಾದ ಕೆಲವು ಮೇಲಿನ ಮಹಡಿಗಳನ್ನು ಮರುನಿರ್ಮಾಣ ಮಾಡಲು ಮುಸ್ಲಿಂ ಆಡಳಿತಗಾರರು ಬಹು ಪ್ರಯತ್ನಗಳನ್ನು ಮಾಡಿದರು, ಆದರೆ ಅವರು ಅದನ್ನು ಪುನಃಸ್ಥಾಪಿಸಲು ಸಾಧ್ಯವಾಗಲಿಲ್ಲ.

ಕುತುಬ್‌ ಕಾಂಪ್ಲೆಕ್ಸ್‌ನ ಗಣೇಶ ವಿಗ್ರಹ ಸ್ಥಳಾಂತರ ವಿವಾದ!
 
ಗೋಪುರದ ಮೊದಲ ಮೂರು ಮಹಡಿಗಳ ರಚನೆಯಲ್ಲಿ ಮತ್ತು ಉಳಿದ ಮಹಡಿಗಳ ರಚನೆಯಲ್ಲಿ ಸ್ಪಷ್ಟ ವ್ಯತ್ಯಾಸ ಗುರುತಿಸಬಹುದು.  ಇಸ್ಲಾಂನ ಪ್ರಾಬಲ್ಯವನ್ನು ಪ್ರದರ್ಶಿಸಲು ಬಯಸಿದ್ದರಿಂದ ಇಲ್ಲಿಯೂ ಅತಿಕ್ರಮಣ ಮಾಡಲಾಯಿತು ಎಂದಿದ್ದಾರೆ. 

"ಇದು ವಾಸ್ತವವಾಗಿ ವಿಷ್ಣು ದೇವಾಲಯದ ಮೇಲೆ ನಿರ್ಮಿಸಲಾದ ವಿಷ್ಣು ಸ್ತಂಭವಾಗಿತ್ತು. ಅವರು (ಮುಸ್ಲಿಂ ದೊರೆಗಳು) ಇದನ್ನು ನಿರ್ಮಿಸಲಿಲ್ಲ. ನಮ್ಮ (ಹಿಂದೂ) ಆಡಳಿತಗಾರರು ಇದನ್ನು ನಿರ್ಮಿಸಿದರು" ಎಂದು ಅವರು ಪ್ರತಿಪಾದಿಸಿದರು.

Rebuild Temples ಖತುಬ್ ಮಿನಾರ್ ಪ್ರಾಂಗಣದಲ್ಲಿದ್ದ ಹಿಂದೂ ದೇಗುಲ ಪುನರ್ ನಿರ್ಮಾಣಕ್ಕೆ ವಿಹೆಚ್‌ಪಿ ಆಗ್ರಹ!

ಇದಲ್ಲದೆ ವಿ ಎಚ್‌ಪಿ  ಕುತಾಬ್ ಮಿನಾರ್ ಸಂಕೀರ್ಣದಲ್ಲಿರುವ ಪುರಾತನ ದೇವಾಲಯಗಳನ್ನು ಪುನರ್ನಿರ್ಮಿಸಲು ಮತ್ತು ಅಲ್ಲಿ ಹಿಂದೂ ಆಚರಣೆಗಳು ಮತ್ತು ಪ್ರಾರ್ಥನೆಗಳನ್ನು ಪುನರಾರಂಭಿಸಲು ಸರ್ಕಾರವನ್ನು ಒತ್ತಾಯಿಸಿದೆ.

1993 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟ ಸ್ಮಾರಕದ ಕಾಂಪೌಂಡ್‌ಗೆ ಬನ್ಸಾಲ್ ಸೇರಿದಂತೆ ವಿಎಚ್‌ಪಿ ನಾಯಕರ ಗುಂಪು ಭೇಟಿ ನೀಡಿ ಈ ಬೇಡಿಕೆಗಳನ್ನು ಇಟ್ಟರು.

ವಿಎಚ್‌ಪಿ ವಕ್ತಾರ ಬನ್ಸಲ್ ಮಾತನಾಡಿ. ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ (NMA) ಅಧ್ಯಕ್ಷ ಮತ್ತು ಬಿಜೆಪಿ ನಾಯಕ ತರುಣ್ ವಿಜಯ್  ಈ ಬಗ್ಗೆ ಸ್ಪಷ್ಟ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.  ಕುತಾಬ್ ಮಿನಾರ್ ಸಂಕೀರ್ಣದಲ್ಲಿ ಗಣೇಶ ಮೂರ್ತಿಗಳನ್ನು "ಅಗೌರವದಿಂದ" ಇರಿಸಲಾಗಿದೆ ಎಂದು ಬನ್ಸಲ್ ಆರೋಪಿಸಿದ್ದಾರೆ.

ಪ್ರಸ್ತುತ ವಿಗ್ರಹಗಳನ್ನು ಅತ್ಯಂತ ಅಗೌರವದ ಸ್ಥಳದಲ್ಲಿ ಇರಿಸಲಾಗಿದೆ, ಸಂದರ್ಶಕರ ಪಾದದ ಮಟ್ಟದಲ್ಲಿ ತಲೆಕೆಳಗಾಗಿ ಇರುವಂತಹ ವಿಗ್ರಹಗಳನ್ನು ಸ್ವಸ್ಥಾನದಲ್ಲಿ ಇಡಬೇಕು. ಅಥವಾ ಅಲ್ಲಿಂದ ತೆಗೆಯುವ ಕೆಲಸ ಮಾಖಡಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವರ್ಷದ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಆದರೆ ಅವರ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಕಾನೂನು ಹೋರಾಟ ಅನಿವಾರ್ಯವಾಗುತ್ತದೆ ಎಂದಿದ್ದಾರೆ.

ವಿಎಚ್‌ಪಿ ವಕ್ತಾರ ಬನ್ಸಾಲ್, "ತರುಣ್ ವಿಜಯ್ ಜಿ ಎಎಸ್‌ಐ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ... ಸರ್ಕಾರ ಮತ್ತು ಅದರ ಸಂಬಂಧಿತ ಇಲಾಖೆಗಳು ಈ ವಿಷಯದ ಬಗ್ಗೆ ಗಂಭೀರ ಚಿಂತನೆ ನಡೆಸಿ ಹಿಂದೂ ಸಮಾಜದ ಗೌರವವನ್ನು ಮರುಸ್ಥಾಪಿಸಬೇಕು ಎಂದು ನಾವು ಭಾವಿಸುತ್ತೇವೆ."

ಈ ವಿಷಯದ ಕುರಿತು ವಿಎಚ್‌ಪಿಯ ಮುಂದಿನ ಕ್ರಮದ ಬಗ್ಗೆ ಕೇಳಿದಾಗ, ಈ ವಿಷಯವನ್ನು ಹಿರಿಯ ನಾಯಕರು ಚರ್ಚಿಸುತ್ತಾರೆ ಮತ್ತು "ಅಗತ್ಯವಿದ್ದರೆ, ನಾವು ಕಾನೂನು ಕ್ರಮವನ್ನು ತೆಗೆದುಕೊಳ್ಳುವುದನ್ನು ಸಹ ಪರಿಗಣಿಸಬಹುದು" ಎಂದು ಅವರು ಹೇಳಿದರು.

ದೆಹಲಿ ಪ್ರವಾಸೋದ್ಯಮ ವೆಬ್‌ಸೈಟ್‌ನ ಪ್ರಕಾರ, ದೆಹಲಿಯ ಕೊನೆಯ ಹಿಂದೂ ಸಾಮ್ರಾಜ್ಯದ ಸೋಲಿನ ನಂತರ ಸ್ಥಳದಲ್ಲಿ 27 ಹಿಂದೂ ದೇವಾಲಯಗಳನ್ನು ಕೆಡವಿದ ನಂತರ ಪಡೆದ ವಸ್ತುಗಳಿಂದ ಕುತಾಬ್ ಮಿನಾರ್ ಅನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತದೆ. ಕುವ್ವಾತ್-ಉಲ್-ಇಸ್ಲಾಂ ಮಸೀದಿ ಪೂರ್ವ ದ್ವಾರದ ಮೇಲಿನ ಶಾಸನದದಲ್ಲಿ ಇದನ್ನು '27 ಹಿಂದೂ ದೇವಾಲಯಗಳನ್ನು' ಕೆಡವಿ ಪಡೆದ ವಸ್ತುಗಳಿಂದ ನಿರ್ಮಿಸಲಾಗಿದೆ ಎಂದು ಬರೆದ ದಾಖಲೆ ಇದೆ ಎಂದಿದ್ದಾರೆ.

1992 ರಲ್ಲಿ ಸಿಕ್ಕ ಮಾಹಿತಿ ಕುತುಬ್ ಮಿನಾರ್  1192 ರಲ್ಲಿ ಕುತ್ಬುದ್-ದಿನ್ ಐಬಕ್ ಅವರಿಂದ ಪ್ರಾರಂಭವಾಯಿತು ಮತ್ತು 1198 ರಲ್ಲಿ ಕೆಡವಲ್ಪಟ್ಟ ವಸ್ತುಗಳನ್ನು ಪಡೆದುಕೊಂಡು ಪೂರ್ಣಮಾಡಲಾಯಿತು. ಹಿಂದೂ ದೇವಾಲಯಗಳ ಅವಶೇಷಗಳನ್ನೇ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ಮುಸ್ಲಿಂ ದೊರೆ ಇಲ್ತುಮಿಶ್ (ಕ್ರಿ.ಶ. 1211-36) ಮತ್ತು ಮತ್ತು ಅಲ್ಲವುದಿನ್ ಖಲ್ಜಿ (ಕ್ರಿ.ಶ. 1296-1316) ವಿಸ್ತರಿಸಿದರು. ಕುತುಬ್ ಮಿನಾರ್ ಅನ್ನು ಕುತ್ಬುದ್-ದಿನ್ ಐಬಕ್ 1202 ರಲ್ಲಿ ಪ್ರಾರಂಭಿಸಿದರು ಮತ್ತು ಅವರ ಉತ್ತರಾಧಿಕಾರಿ ಮುಹಮ್ಮದ್-ಬಿನ್-ಸ್ಯಾಮ್ ಪೂರ್ಣಗೊಳಿಸಿದರು. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ವೆಬ್‌ಸೈಟ್‌ ಸಹ ಇದೇ ಮಾಹಿತಿ ನೀಡುತ್ತದೆ ಎಂದಿದ್ದಾರೆ.

ಈಗ ಕುತುಬ್ ಮಿನಾರ್ ಎಂದು ಕರೆಯುವ ಸ್ತಂಭ 1326 ರಲ್ಲಿ ಮತ್ತು ಕ್ರಿ.ಶ. 1368 ರಲ್ಲಿ ಮಿಂಚಿನಿಂದ ಹಾನಿಗೊಳಗಾಯಿತು.  ಅಂದಿನ ಆಡಳಿತಗಾರರಾದ ಮಹಮ್ಮದ್-ಬಿನ್-ತುಘಲಕ್ (ಕ್ರಿ.ಶ. 1325-51) ಮತ್ತು ಫಿರೂಜ್ ಷಾ ತುಘಲಕ್ (ಕ್ರಿ.ಶ. 1351-88) ಕ್ರಿ.ಶ. 1503 ರಲ್ಲಿ ಸಿಕಂದರ್ ಲೋದಿ ಅವರು ದುರಸ್ತಿ ಮಾಡಿದರು. ಈ ಸಂದರ್ಭದಲ್ಲಿ ಮೇಲಿನ ಮಹಡಿ ಪುನರ್ ನಿರ್ಮಾಣ ಕೆಲಸವನ್ನು ಮಾಡಲಾಯಿತು.

ಮಸೀದಿ ಕಾಂಪೌಂಡ್‌ನಲ್ಲಿರುವ ಕಬ್ಬಿಣದ ಕಂಬವನ್ನು ಭಾರತದ ಹೊರಗಿನಿಂದ ತರಿಸಿಕೊಳ್ಳಲಾಗಿದೆ ಎಂಬ ಉಲ್ಲೇಖವನ್ನು ಕಾಣಬಹುದು.  ಈ ಸ್ತಂಭದಲ್ಲಿ  ಗುಪ್ತರ ರಾಜ  ಚಂದ್ರ ಅಂದರೆ ಚಂದ್ರಗುಪ್ತ II (375-413)  ದೊರೆಯ ಸಾಹಸಗಳನ್ನು ಕೆತ್ತಲಾಗಿದೆ ಎಂದು ತಿಳಿಸಿದ್ದಾರೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!