19 ಲಕ್ಷದ ಬಿಲ್‌ಗೆ 58 ಲಕ್ಷದ ಕಾರು ಹರಾಜು ಮಾಡಲು ಸಜ್ಜಾದ ಹೋಟೆಲ್‌!

By Santosh Naik  |  First Published Feb 7, 2023, 3:56 PM IST

ಹೋಟೆಲ್‌ನಲ್ಲಿದ್ದು 19 ಲಕ್ಷ ಬಿಲ್‌ ಮಾಡಿದ್ದ ಉದ್ಯಮಿಯೊಬ್ಬರು, ಬಳಿಕ ಬಿಲ್‌ ಕಟ್ಟದೆ ನಾಪತ್ತೆಯಾಗಿದ್ದರು. ಅದಕ್ಕಾಗಿ ಅವರ ಆಡಿ ಹಾಗೂ ಷವರ್ಲೆ ಕ್ರೂಸ್‌ ಕಾರ್‌ಅನ್ನು ಹೋಟೆಜ್‌ ಜಪ್ತಿ ಮಾಡಿತ್ತು. ಈವರೆಗೂ ಅವರಿಂದ ಹಣ ಪಾವತಿಯಾಗದ ಹಿನ್ನಲೆಯಲ್ಲಿ 58 ಲಕ್ಷ ಮೌಲ್ಯದ ಈ ಎರಡೂ ಕಾರುಗಳನ್ನು ಹರಾಜು ಹಾಕಲು ಹೋಟೆಲ್‌ ಮುಂದಾಗಿದೆ.
 


ಚಂಡೀಗಢ (ಫೆ.7): ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡು ಕಟ್ಟದೇ ಇದ್ದಾಗ ಸಾಲಗಾರನ ಆಸ್ತಿಯನ್ನು ಜಪ್ತಿ ಮಾಡಿದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಚಂಡೀಗಢದ ಐಷಾರಾಮಿ ಹೋಟೆಲ್‌ವೊಂದು ಕುತೂಹಲಕಾರಿಯಾಗಿ ಹೋಟೆಲ್‌ ಬಿಲ್‌ ಅನ್ನು ರಿಕವರಿ ಮಾಡುತ್ತಿರುವ ಬಗ್ಗೆ ಸುದ್ದಿಯಾಗಿದೆ. ಕೆಲ ತಿಂಗಳ ಹಿಂದೆ ಇಬ್ಬರು ಅತಿಥಿಗಳು ಐಷಾರಾಮಿ ಹೋಟೆಲ್‌ಗೆ ಬಂದು ತಂಗಿದ್ದರು. ಅಂದಾಜು 6 ತಿಂಗಳ ಕಾಲ ಹೋಟೆಲ್‌ನಲ್ಲಿ ತಿಂದುಂಡು ಮಜಾ ಮಾಡಿದ್ದ ಇವರಿಗೆ ಬಿಲ್‌ ಬಗ್ಗೆ ಮಾಹಿತಿ ಇದ್ದಿರಲಿಲ್ಲ. 6 ತಿಂಗಳ ಬಳಿಕ ಹೋಟೆಲ್‌ ಬಿಟ್ಟು ತೆರಳುವಾಗ 19 ಲಕ್ಷ ಬಿಲ್‌ ನೋಡಿ ಕಂಗಾಲಾಗಿದ್ದರು. ಉದ್ಯಮಿಗಳಾಗಿದ್ದರು ಅವರಲ್ಲಿ ಬಿಲ್‌ ಕಟ್ಟಲು ಅಷ್ಟೆಲ್ಲಾ ಹಣವಿರಲಿಲ್ಲ. ಇದಕ್ಕಾಗಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಇವರು ಹೋಟೆಲ್‌ಗೆ ಬರುವಾಗ ತಂದಿದ್ದ ಆಡಿ ಹಾಗೂ ಷವರ್ಲೆ ಕ್ರೂಸ್‌ ಕಾರುಗಳನ್ನು ಜಪ್ತಿ ಮಾಡಿತ್ತು. 19 ಲಕ್ಷ ರೂಪಾಯಿಯನ್ನು ಕಟ್ಟಿದರೆ ಮಾತ್ರವೇ ಕಾರುಗಳನ್ನು ಕೊಡುವುದಾಗಿ ತಿಳಿಸಿತ್ತು. ಈ ಎರಡು ಕಾರುಗಳ ಒಟ್ಟಾರೆ ಮಾರುಕಟ್ಟೆ ಬೆಲೆ  58 ಲಕ್ಷ ರೂಪಾಯಿ ಆಗಿದೆ. ಅಚ್ಚರಿಯೆಂದರೆ, ಅಂದು ಹಣ ತೆಗೆದುಕೊಂಡು ಬರ್ತೇವೆ ಎಂದು ಹೇಳಿ ಹೊರಟವರು, 5 ವರ್ಷದಿಂದ ನಾಪತ್ತೆಯಾಗಿದ್ದಾರೆ. ಹೋಟೆಲ್‌ನಲ್ಲಿದ್ದ ಕಾರುಗಳ್ನು ಕೇಳಲು ಕೂಡ ಹೋಗಿಲ್ಲ. ಇದೀಗ ಚಂಡೀಗಢ ಕೈಗಾರಿಕಾ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (CITCO) ಈ ಎರಡೂ ಐಷಾರಾಮಿ ವಾಹನಗಳನ್ನು ಫೆಬ್ರವರಿ 14 ರಂದು ಅಂದರೆ ಪ್ರೇಮಿಗಳ ದಿನದಂದು ಹರಾಜು ಹಾಕಲಿದೆ.

ಏನಿದು ಪ್ರಕರಣ: CITCO ಚಂಡೀಗಢದ ಐಷಾರಾಮಿ ಸೆಕ್ಟರ್ 17 ರಲ್ಲಿ ಶಿವಾಲಿಕ್ ವ್ಯೂ ಹೆಸರಿನಲ್ಲಿ ಪಂಚತಾರಾ ಹೋಟೆಲ್ ಅನ್ನು ನಡೆಸುತ್ತಿದೆ. 2018 ರಲ್ಲಿ, ಅಶ್ವಿನಿ ಕುಮಾರ್ ಚೋಪ್ರಾ ಮತ್ತು ರಾಮ್ನಿಕ್ ಬನ್ಸಾಲ್ ಹೆಸರಿನ ಇಬ್ಬರು ಉದ್ಯಮಿಗಳು ಈ ಹೋಟೆಲ್‌ಗೆ ಬಂದಿದ್ದರು. 6 ತಿಂಗಳ ಕಾಲ ಹೋಟೆಲ್‌ನಲ್ಲಿ ಇದ್ದ ಇವರು, ಸಾಕಷ್ಟು ಮೋಜು ಮಾಡಿದ್ದಲ್ಲದೆ, ಹೋಟೆಲ್‌ನ ಪ್ರತಿಯೊಂದು ಸೌಲಭ್ಯವನ್ನು ಆನಂದಿಸಿದರು. ಹೋಟಲ್‌ನಿಂದ ತೆರಳಲು ಚೆಕ್‌ಔಟ್‌ಗೆ ಬಂದಾಗ ಹೋಟೆಲ್ ಬಿಲ್ಲಿಂಗ್‌ ವಿಭಾಗದವರು 19 ಲಕ್ಷದ ಬಿಲ್ ನೀಡಿದ್ದರು. ಬಿಲ್‌ ನೋಡಿದ ತಕ್ಷಣ ಇಬ್ಬರ ಕಂಗಾಲಾಗಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರನ್ನೂ ಭದ್ರತಾ ಸಿಬ್ಬಂದಿಗಳು ಹಿಡಿದಿದ್ದರು. ಬಳಿಕ ಬಿಲ್‌ ಕಟ್ಟುವಂತೆ ಇಬ್ಬರಿಗೂ ಸೂಚಿಸಲಾಗಿತ್ತು.

ಬಳಿಕ ಇಬ್ಬರೂ ತಲಾ 6 ಲಕ್ಷದ 2 ಹಾಗೂ 7 ಲಕ್ಷದ ಒಂದು ಚೆಕ್‌ಅನ್ನು ಹೋಟೆಲ್‌ನವರಿಗೆ ನೀಡಿದ್ದರು. ಹೋಟೆಲ್‌ನವರು ಇಬ್ಬರನ್ನೂ ಬಂಧನದಲ್ಲಿಯೇ ಇರಿಸಿ, ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿತ್ತು. ನಿರೀಕ್ಷೆ ಎನ್ನುವಂತೆ ಚೆಕ್‌ ಬೌನ್ಸ್ ಆಗಿತ್ತು. ಬಳಿಕ ಹೋಟೆಲ್‌ನವರು ಇವರಿಬ್ಬರ ಆಡಿ ಕ್ಯೂ 3 ಹಾಗೂ ಷವರ್ಲೆ ಕ್ರೂಜ್‌ ಕಾರಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಘಟನೆ ನಡೆದು ಐದು ವರ್ಷ ಕಳೆದರೂ ವಾಹನಗಳನ್ನು ಪಡೆದುಕೊಳ್ಳಲು ಇವರು ವಾಪಸ್ ಬಂದಿಲ್ಲ. ಈಗ ಈ ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಟೇಲ್ ಬಿಲ್ ಕ್ಲಿಯರ್‌ ಮಾಡುವ ಇರಾದೆಯಲ್ಲಿದೆ.

ಚೀನಾದ ವಿಜ್ಞಾನ, ದಿನಕ್ಕೆ 140 ಲೀಟರ್‌ ಹಾಲು ಕೊಡೋ 'Super Cow'!

ಈ ನಡುವೆ 2020ರಲ್ಲಿ ಸಿಟ್ಕೋ ಈ ಕುರಿತಾಗಿ ಚಂಡೀಗಢ ಚಿಲ್ಲಾ ಕೋರ್ಟ್‌ನಲ್ಲಿ ರಾಮ್ನೀಕ್‌ ಭನ್ಸಾಲ್‌ ವಿರುದ್ಧ ಕೇಸ್‌ ಕೂಡ ದಾಖಲಿಸಿತ್ತು. 2021ರ ಮಾರ್ಚ್‌ನಲ್ಲಿ ಸಮನ್ಸ್‌ ಕೂಡ ಜಾರಿಯಾಗಿತ್ತು. ಆದರೆ, ರಾಮ್ನಿಕ್‌ ಭನ್ಸಾಲ್‌ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ತೆರಳಿದ್ದರೆ, ಹೋಶಿಯಾರ್‌ಪುರಕ್ಕೆ ಹೋಗಿದ್ದ ಇನ್ನೊಂದು ಸಮನ್ಸ್‌ಗೂ ಉತ್ತರವಿದ್ದಿರಲಿಲ್ಲ. ಬಳಿಕ ಕೇಸ್‌ ವಿಚಾರಣೆಗೆ ಹೋದಾಗ ಪ್ರತಿವಾದಿಗಳು ಇಇರದ ಕಾರಣ, ಸಿಟ್ಕೋಗೆ ಗೆಲುವಾಗಿತ್ತು. ಆರ್‌ಸಿ ಆಧಾರದ ಮೇಲೆ ಇನ್ನೊಂದು ಕಾರ್‌ನ ಮಾಲೀಕರಿಗೂ ಸಮನ್ಸ್‌ ನೀಡಲಾಗಿತ್ತು.ಆಗಲೂ ಯಾರೂ ಕೂಡ ವಿಚಾರಣೆಗೆ ಆಗಮಿಸಿರಲಿಲ್ಲ. ಇದರಿಂದಾಗಿ ಅಶ್ವಿನ್‌ ಕುಮಾರ್‌ ಚೋಪ್ರಾ ಹಾಗೂ ರಾಮ್ನಿಕ್‌ ಭನ್ಸಾಲ್‌ ಅವರ ಹೆಸರನಲ್ಲಿದ್ದ ಕಾರುಗಳನ್ನು ಹರಾಜು ಹಾಕಲು ಕೋರ್ಟ್‌ ಒಪ್ಪಿಗೆ ನೀಡಿತ್ತು.

Tap to resize

Latest Videos

ಪಾಕಿಸ್ತಾನದಲ್ಲಿ ತುಘಲಕ್‌ ಕಾನೂನು, ಸೇನೆ-ಕೋರ್ಟ್‌ ಬಗ್ಗೆ ಕೀಳಾಗಿ ಮಾತಾಡಿದ್ರೆ ಉಳಿಗಾಲವಿಲ್ಲ!

ಕೋರ್ಟ್‌ನಿಂದ ಅನುಮತಿ ಪಡೆದ ಬಳಿಕ ಈ ಎರಡೂ ಕಾರುಗಳ ಹರಾಜಿಗೆ ದಿನ ನಿಗದಿ ಮಾಡಲಾಗಿದೆ. ಫೆ. 14 ರಂದು ಕಾರುಗಳ ಹರಾಜು ನಡೆಯಲಿದೆ. 45 ಲಕ್ಷದ ಅಡಿ ಕ್ಯೂ 3 ಕಾರ್‌ನ ಮೂಲ ಬೆಲೆಯನ್ನು 10 ಲಕ್ಷ ರೂಪಾಯಿ ಹಾಗೂ 13 ಲಕ್ಷ ಷವರ್ಲೆ ಕ್ರೂಸ್‌ ಕಾರಿನ ಮೂಲ ಬೆಲೆಯನ್ನು 1.5 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಆಡಿ ಕ್ಯೂ 3 ಕಾರು 2012ರ ಮಾಡೆಲ್‌ ಆಗಿದ್ದರೆ, ಷವರ್ಲೆ ಕ್ರೂಸ್‌ ಕಾರು 2016ರ ಮಾಡೆಲ್‌ ಆಗಿದೆ.

 

click me!