Home Delivery Death: ಮನೆಯಲ್ಲೇ 7ನೇ ಹೆರಿಗೆ, ತಾಯಿ ಸಾವು! ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ವಿರುದ್ಧ ಕೇಸ್

Published : Mar 20, 2026, 12:13 PM IST
Thrissur Woman Dies After Seventh Childbirth at Home Husband Faces Police Case

ಸಾರಾಂಶ

Home Delivery Death ತ್ರಿಶೂರ್‌ನಲ್ಲಿ 7ನೇ ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮನೆಯಲ್ಲೇ ಹೆರಿಗೆ ಮಾಡಿಸಿದ್ದ ಅಕ್ಯುಪಂಕ್ಚರ್ ಚಿಕಿತ್ಸಕ ಪತಿ ಇಬ್ರಾಹಿಂ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದು, ಚಾವಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತ್ರಿಶೂರ್: ಏಳನೇ ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ತ್ರಿಶೂರ್‌ನಲ್ಲಿ ನಡೆದಿದೆ. ಎಡಕ್ಕಾಳಿಯೂರ್ ನಿವಾಸಿ ಮುಹ್ಸಿನಾ (37) ಮೃತಪಟ್ಟವರು. ಅವರ ಸಾವಿನ ಬಗ್ಗೆ ಕುಟುಂಬಸ್ಥರು ಪತಿ ವಿರುದ್ಧ ದೂರು ನೀಡಿದ್ದಾರೆ.

ಕಳೆದ ಜನವರಿ 6 ರಂದು ಮುಹ್ಸಿನಾ ತಮ್ಮ ಏಳನೇ ಮಗುವಿಗೆ ಮನೆಯಲ್ಲೇ ಜನ್ಮ ನೀಡಿದ್ದರು. ಆದರೆ, ಹೆರಿಗೆಯಾದ ಮೂರನೇ ದಿನಕ್ಕೆ ಮಗು ಕೂಡ ಸಾವನ್ನಪ್ಪಿತ್ತು. ಮುಹ್ಸಿನಾ ಅವರ ಪತಿ ಇಬ್ರಾಹಿಂ, ವೃತ್ತಿಯಲ್ಲಿ ಅಕ್ಯುಪಂಕ್ಚರ್ ಚಿಕಿತ್ಸಕ. ಈ ಘಟನೆ ಸಂಬಂಧ ಚಾವಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 2,400 ಕಿಮೀ ಟ್ರೆಕ್ಕಿಂಗ್ ಮಾಡಿ ಸುಸ್ತಾಗಿದೆ ಎಂದು ಆಸ್ಪತ್ರೆಗೆ ಹೋದ್ರೆ, ಡೆಲಿವರಿ ಮಾಡಿ ಮಗು ಕೈಗಿಟ್ಟ ಡಾಕ್ಟರ್!

ಕುಟುಂಬಸ್ಥರ ಪ್ರಕಾರ, ಮುಹ್ಸಿನಾ ಅವರ ಮೊದಲ ಆರು ಹೆರಿಗೆಗಳು ಆಸ್ಪತ್ರೆಯಲ್ಲೇ ಆಗಿದ್ದವು. ಆದರೆ, ಆ ಬಳಿಕ ಮಕ್ಕಳಿಗೆ ಯಾವುದೇ ಹೆಚ್ಚಿನ ಚಿಕಿತ್ಸೆ ಅಥವಾ ಲಸಿಕೆಗಳನ್ನು ಕೊಡಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ದಂಪತಿಯ ಇಬ್ಬರು ಮಕ್ಕಳು ಈ ಹಿಂದೆಯೂ ಮೃತಪಟ್ಟಿದ್ದರು. ಏಳನೇ ಹೆರಿಗೆಯನ್ನು ಮಾತ್ರ ಮನೆಯಲ್ಲಿ ಮಾಡಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಸಹಜ ಹೆರಿಗೆ: 10 ಹೆಣ್ಣು ಮಕ್ಕಳ ನಂತರ ಕಡೆಗೂ ಜನಿಸಿದ ಗಂಡು ಮಗ: ದಿಲ್‌ಖುಷ್ ಅಂತ ಹೆಸರಿಟ್ಟ ಕುಟುಂಬ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Rupee Fall: ಡಾಲರ್ ಎದುರು ರೂಪಾಯಿ ದಾಖಲೆ ಕುಸಿತ! ಇತಿಹಾಸದಲ್ಲೇ ಮೊದಲ ಬಾರಿಗೆ 93ರ ಗಡಿ ದಾಟಿದ ಮೌಲ್ಯ
ದೇವಸ್ಥಾನವನ್ನೇ ಉದ್ಯಮ ಮಾಡಿದ ಸರ್ಕಾರ, VIPಗಳಿಗೆ ದರ್ಶನ ಉಳಿದವರ ಕತ್ತು ಹಿಡಿದು ದಬ್ಬುವ ದೃಶ್ಯ ಸೆರೆ